ಸುದ್ದಿಮೂಲ ವಾರ್ತೆ ಕೊಪ್ಪಳ, ಅ.19:
ಕೊಪ್ಪಳ ಜಿಲ್ಲೆೆಯಲ್ಲಿ ಅಕ್ರಮವಾಗಿ ಮರಳು ಹಾಗೂ ಜಲ್ಲಿಕಲ್ಲುಗಳ ಸಾಗಾಟವಾಗುತ್ತಿಿದೆ. ಇದಕ್ಕೆೆ ಇಲ್ಲಿಯ ಅಧಿಕಾರಿಗಳೇ ಸಾಥ್ ನೀಡುತ್ತಿಿದ್ದಾಾರೆ. ಈ ಹಿನ್ನೆೆಲೆಯಲ್ಲಿ ಜಿಲ್ಲೆೆಯ 10 ಜನ , ಗಣಿ ಮತ್ತು ಭೂ ವಿಜ್ಞಾಾನ ಇಲಾಖೆಯ ಅಧಿಕಾರಿಗಳ ವರ್ಗಾವಣೆ ಮಾಡಿ ಎಂದು ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿಿ ಮುಖ್ಯಮಂತ್ರಿಿಗಳಿಗೆ ಸುದೀರ್ಘ ಪತ್ರ ಬರೆದಿದ್ದಾಾರೆ.
ಕೊಪ್ಪಳ ಜಿಲ್ಲೆೆಯಲ್ಲಿ ತುಂಗಭದ್ರಾಾ ನದಿಯು 85 ಕಿ.ಮೀ. ಹರಿಯುತ್ತಿಿದೆ. ನದಿಯಲ್ಲಿ ಅಕ್ರಮ ಹಾಗೂ ಅನಧಿಕೃತವಾಗಿ ನಿತ್ಯ 100-150 ಟ್ರಕ್ ಗಳಲ್ಲಿ ಮರಳು ಹಾಗು ಜಲ್ಲಿಕಲ್ಲು ಗದಗ, ಬಳ್ಳಾಾರಿ. ಧಾರವಾಡ. ಚಿತ್ರದುರ್ಗಾ ಹಾಗೂ ಬೆಂಗಳೂರಿಗೆ ಸಾಗಾಟವಾಗುತ್ತಿಿದೆ. ಈ ಸಾಗಾಟದಲ್ಲಿ ಜಿಲ್ಲೆೆಯ ಗಣಿ ಮತ್ತು ಭೂ ವಿಜ್ಞಾಾನ ಇಲಾಖೆಯ ಅಧಿಕಾರಿಗಳು ಭಾಗಿಯಾಗಿದ್ದಾಾರೆ. ಕೆಲವರು ಇಲ್ಲಿಯೇ ಠಿಕಾಣಿ ಹೂಡಿದ್ದಾಾರೆ. ಜಿಲ್ಲೆೆಯಲ್ಲಿ ಅಕ್ರಮ ಮರಳು ದಂಧೆಯಿಂದ ಸರಕಾರಕ್ಕೆೆ ಕೆಟ್ಟ ಹೆಸರು ಬರುತ್ತಿಿದೆ ಈ ಕಾರಣಕ್ಕೆೆ ಅವರನ್ನು ವರ್ಗಾವಣೆ ಮಾಡಿ ಎಂದು ಪತ್ರ ಬರೆದಿದ್ದಾಾರೆ.
ಜಿಲ್ಲೆೆಯಲ್ಲಿ 200 ಕ್ಕೂ ಅಧಿಕ ಜನರು ಸ್ಯಾಾಂಡ್ ಮಾಫಿಯಾದಲ್ಲಿ ಭಾಗಿಯಾಗಿದ್ದಾಾರೆ. ಅಕ್ರಮ ತಡೆಯಬೇಕಾದ ಅಧಿಕಾರಿಗಳೇ ಶಾಮೀಲಾಗಿದ್ದಾಾರೆ ಎಂದು ಆರೋಪಿಸಿದ್ದಾಾರೆ.
ಹಿರಿಯ ಭೂ ವಿಜ್ಞಾಾನ ಅಧಿಕಾರಿ ಪುಷ್ಪಲತಾ ಆರು ತಿಂಗಳಿನಿಂದ ಜಿಲ್ಲೆೆಯಲ್ಲಿದ್ದಾಾರೆ ಅವರಿಗೆ ಕಾನೂನು ಜ್ಞಾಾನವಿಲ್ಲ. ಭೂ ವಿಜ್ಞಾಾನಿ ಸನಿತ್, ನಾಗರಾಜ್ ಸಹ ಅಕ್ರಮಗಳಲ್ಲಿ ಭಾಗಿಯಾಗಿದ್ದಾಾರೆ. ಸೈಯದ್ ಾಜಿಲ್ ರನ್ನು ವಿಜಯನಗರಕ್ಕೆೆ ವರ್ಗಾವಣೆ ಮಾಡಲಾಗಿದೆ ಅವರನ್ನು ತಕ್ಷಣ ಬಿಡುಗಡೆಗೊಳಿಸಬೇಕು.
ನವೀನಕುಮಾರ ಎಂಬುವವರು 13 ವರ್ಷಗಳಿಂದ ಇಲ್ಲಿ ಕೆಲಸ ಮಾಡುತ್ತಿಿದ್ದು ಅವರೇ ಮಾಸ್ಟರ್ ಕಿಂಗ್ ಪಿನ್ ಆಗಿದ್ದಾಾರೆ. ಮಲ್ಲಿಕಾರ್ಜುನ ಕಮ್ಮಾಾರ್ 9 ವರ್ಷದಿಂದ ಇಲ್ಲಿದ್ದಾಾರೆ. ಎ್ಡಿಸಿ ಹರೀಶ ಬಿಜೆ. ಶ್ರೀಮತಿ ತ್ರಿಿವೇಣಿ ಒಡೆಯರ್ ಹಾಗೂ ಶ್ರೀಮತಿ ಸುಕನ್ಯಾಾ ಸಹ ಇಲ್ಲಿಯೇ ಬಹಳ ವರ್ಷಗಳಿಂದ ಕೆಲಸ ಮಾಡುತ್ತಿಿದ್ದಾಾರೆ ಅವರ ಮೇಲೆ ಕ್ರಮ ಕೈಗೊಳ್ಳಲು ಮನವಿ ಮಾಡಿಕೊಂಡಿದ್ದಾಾರೆ.
ಇದೇ ವೇಳೆ ರಾಯರಡ್ಡಿಿ ಪತ್ರದ ಬೆನ್ನಲ್ಲಿಯೇ ಬಳ್ಳಾಾರಿಯ ಗಣಿ ಮತ್ತು ಭೂ ವಿಜ್ಞಾಾನ ಇಲಾಖೆಯ ಹೆಚ್ಚುವರಿ ನಿರ್ದೇಶಕರು ಪುಷ್ಪಲತಾ. ನವೀನ್ ಕುಮಾರು, ಮಲ್ಲಿಕಾರ್ಜುನ ಕಮ್ಮಾಾರ, ತ್ರೀೀವೇಣಿ ಹಾಗೂ ಸುಕನ್ಯಾಾರನ್ನು ವರ್ಗಾವಣೆ ಮಾಡಲು ರಾಜ್ಯ ಗಣಿ ಮತ್ತು ಭೂ ವಿಜ್ಞಾಾನ ಇಲಾಖೆಯ ನಿರ್ದೇಶಕರಿಗೆ ಪ್ರಸ್ತಾಾವನೆ ಸಲ್ಲಿಸಿದ್ದಾಾರೆ.
ರಾಯರಡ್ಡಿಿಯವರ ಪತ್ರವು ಈಗ ಜಿಲ್ಲೆೆಯಲ್ಲಿ ಸಂಚಲನ ಮೂಡಿಸಿದ್ದು ಅಕ್ರಮ ತಡೆಗಾಗಿ ಅವರು ಮಾಡಿಕೊಂಡ ಮನವಿಗೆ ಸಿಎಂ ಸ್ಪಂದಿಸುತ್ತಾಾರಾ? ಅಲ್ಲದೆ ಜಿಲ್ಲೆೆಯಲ್ಲಿ ಅಕ್ರಮ ಮರಳು ದಂಧೆ ನಿಲ್ಲುತ್ತಾಾ ಕಾದು ನೋಡಬೇಕು.
ಕ್ರಮಕ್ಕೆೆ ರಾಯರೆಡ್ಡಿಿ ಸಿಎಂಗೆ ಪತ್ರ ಅಕ್ರಮ ಮರಳು ಸಾಗಾಟ, ಅಧಿಕಾರಿಗಳು ಶಾಮೀಲು
