ಸುದ್ದಿಮೂಲ ವಾರ್ತೆ ಬೆಂಗಳೂರು, ಜ.27:
ರಾಜ್ಯದಲ್ಲಿ ನಡೆಯುತ್ತಿಿರುವ ಅಕ್ರಮ ಮದ್ಯ ಮಾರಾಟ ಜಾಲದ ವಿರುದ್ಧ ಕಠಿಣ ಕ್ರಮ ಜರುಗಿಸುವುದಾಗಿ ಅಬಕಾರಿ ಸಚಿವ ಆರ್. ಬಿ. ತಿಮ್ಮಾಾಪುರ ಹೇಳಿದರು.
ವಿಧಾನಸಭೆಯ ಪ್ರಶ್ನೋೋತ್ತರ ವೇಳೆಯಲ್ಲಿ ಶಾಸಕ ಐಹೊಳೆ ದುರ್ಯೋಧನ ಅವರ ಪ್ರಶ್ನೆೆಗಳಿಗೆ ಅವರು ಉತ್ತರಿಸಿದರು.
ಅಬಕಾರಿ ಸಚಿವ ಆರ್.ಬಿ. ತಿಮ್ಮಾಾಪೂರ ಅವರಿಗೆ ರಾಯಭಾಗ ಕ್ಷೇತ್ರದ ವ್ಯಾಾಪ್ತಿಿಯಲ್ಲಿ ಅಕ್ರಮ ಮದ್ಯ ತಯಾರಿಕೆ ಮತ್ತು ಅಕ್ರಮ ಮದ್ಯ ಮಾರಾಟ ಹೆಚ್ಚಾಾಗಿದೆ ಎಂಬ ಪ್ರಶ್ನೆೆಗೆ ಉತ್ತರಿಸಿದ ಸಚಿವರು, ರಾಜ್ಯದಲ್ಲಿ ಅಬಕಾರಿ ಅಧಿಕಾರಿಗಳು 357 ಕಡೆ ದಾಳಿ ಮಾಡಿ ಅಕ್ರಮ ಮದ್ಯ ವಶ ಪಡಿಸಿಕೊಳ್ಳಲಾಗಿದೆ. 295 ಪ್ರಕರಣಗಳನ್ನು ದಾಖಲಿಸಲಾಗಿದ್ದು, 322 ಆರೋಪಿಗಳ ಬಂಧನವಾಗಿದೆ. 370 ಲೀಟರ್ ಮದ್ಯ, 7 ವಾಹನಗಳನ್ನು ವಶಕ್ಕೆೆ ಪಡೆಯಲಾಗಿದೆ. ಅಕ್ರಮ ಮದ್ಯ ಮಾರಾಟ ಅಂಗಡಿಗಳಿಂದಲೇ ಮದ್ಯ ಖರೀದಿಸಿ ಹೊರಗಡೆ ಮಾರಾಟ ಮಾಡಲಾಗುತ್ತಿಿದೆ. ಪೊಲೀಸ್ ಇಲಾಖೆ ಹಾಗೂ ಅಬಕಾರಿ ಇಲಾಖೆ ಒಳಗೊಂಡು ಇದರ ಬಗ್ಗೆೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಅಕ್ರಮ ಮದ್ಯ ಮಾರಾಟದ ವಿರುದ್ಧ ಕಠಿಣ ಕ್ರಮ: ಆರ್.ಬಿ. ತಿಮ್ಮಾಪುರ

