ಸುದ್ದಿಮೂಲ ವಾರ್ತೆ ಅರಕೇರಾ, ಜ.07:
ಸ್ಥಳೀಯ ಗ್ರಾಾಪಂ ಕಚೇರಿ ಹಾಗೂ ಸಮುದಾಯ ಆರೋಗ್ಯ ಕೇಂದ್ರಕ್ಕೆೆ ಲೋಕಾಯುಕ್ತ ಪೊಲೀಸ್ ಇನ್ಸ್ಪೆಕ್ಟರ್ ಗುರ್ರಣ್ಣ ಎಸ್.ಹೆಬ್ಬಾಾಳ ನೇತೃತ್ವದ ತಂಡ ಬುಧವಾರ ಭೇಟಿ ನೀಡಿ ಪರಿಶೀಲನೆ ನಡೆಸಿತು.
ಗ್ರಾಾಪಂ ಕಚೇರಿಯಲ್ಲಿ ನರೇಗಾ, ತೆರಿಗೆ, ವಿವಿಧ ವಸತಿ ಯೋಜನೆ, 15ನೇ ಹಣಕಾಸು, ಸಿಬ್ಬಂದಿ ವೇತನ ಸೇರಿ ವಿವಿಧ ಯೋಜನೆಗಳಿಗೆ ಸಂಬಂಧಿಸಿದ ಕಡತಗಳನ್ನು ಪರಿಶೀಲನೆ ಮಾಡಿದರು.
ಜಿಪಿಎ ಸ್ಫೋೋಟೊಗಳನ್ನು ಆಧರಿಸಿ ಕುಡಿಯುವ ನೀರು, ಬೋರ್ವೆಲ್, ನರೇಗಾ ಕಾಮಗಾರಿಗಳ ನಡೆದಿರುವ ಬಗ್ಗೆೆ ಖುದ್ದು ಸ್ಥಳ ಭೇಟಿ ನೀಡಿದರು. ವಾರ್ಡ್ ಸಭೆ, ಸಾಮಾನ್ಯ ಸಭೆ, ಗ್ರಾಾಮ ಸಭೆ ನಡೆದಿರುವ ಬಗ್ಗೆೆ ಹಾಗೂ ವಿವಿಧ ಯೋಜನೆ ಲಾನುಭವಿಗಳ ಆಯ್ಕೆೆ ಪಟ್ಟಿಿ ಬಗ್ಗೆೆ ಮಾಹಿತಿ ಪಡೆದರು.ಬಳಿಕ ಭೇಟಿ ನೀಡಿ, ಸಮುದಾಯ ಆರೋಗ್ಯ ಕೇಂದ್ರದಲ್ಲಿ ಒಳ ಮತ್ತು ಹೊರ ರೋಗಿಗಳ ಮಾಹಿತಿ ಪಡೆದರು.
ಸಿಬ್ಬಂದಿ ಹಾಜರಾತಿ, ಐಸಿಟಿಸಿ, ನೇತ್ರ ಪರಿಕ್ಷೆ, ರಕ್ತ ಪರೀಕ್ಷೆ, ಔಷಧಿ ವಿತರಣಾ ಕೊಠಡಿ, ಶೌಚಾಲಯ ಸೇರಿ ವಿವಿಧ ಒಳ ರೋಗಿಗಳ ವಾರ್ಡ್ಗಳನ್ನು ಪರಿಶೀಲನೆ ಮಾಡಿದರು. ಶೌಚಾಲಯ, ಸ್ವಚ್ಛತೆ, ಶುದ್ಧ ಕುಡಿಯುವ ನೀರಿಗೆ ಸಂಬಂಧಿಸಿದಂತೆ ಅಸಮಾಧಾನ ವ್ಯಕ್ತಪಡಿಸಿದರು.
ಬಾಣಂತಿಯರ ಹಾಗೂ ಜೆನರಲ್ವಾಾರ್ಡ್ನಲ್ಲಿ ವೈದ್ಯರು ಮತ್ತು ನರ್ಸ್ಗಳು ಸರಿಯಾಗಿ ಇರುವುದಿಲ್ಲ. ಕೆಲ ಔಷಧಿಗಳನ್ನು ಹೊರಗಡೆ ಬರೆಯುತ್ತಾಾರೆ ಎಂದು ರೋಗಿಗಳು ಆರೋಪಿಸಿದರು.
ಗ್ರಾಪಂ ಕಚೇರಿ, ಆಸ್ಪತ್ರೆಗೆ ಲೋಕಾಯುಕ್ತರ ದಿಢೀರ್ ಭೇಟಿ ದಾಖಲೆ ಪರಿಶೀಲನೆ

