ಸುದ್ದಿಮೂಲ ವಾರ್ತೆ ಕೊಪ್ಪಳ, ನ.30:
ಗಂಗಾವತಿ ಶಾಸಕ ಗಾಲಿ ಜನಾರ್ದನರಡ್ಡಿಿ ಇಂದಿನಿಂದ ಐದು ದಿನಗಳ ಕಾಲ ಹನುವ ಮಾಲೆ ಧರಿಸಿ ವ್ರತಾಚರಣೆ ಮಾಡಲಿದ್ದಾಾರೆ. ಇಂದು ಮುಂಜಾನೆ ಹನುಮ ಮಾಲೆ ಧರಿಸಿದರು.
ಶ್ರೀರಾಮನು ಶಬರಿಯನ್ನು ಭೇಟಿ ಮಾಡಿದ ಪವಿತ್ರ ಸ್ಥಳದಲ್ಲಿ ಹನುಮ ಮಾಲೆ ಧಾರಣೆ ಮಾಡಿ ಅಂಜನೇಯನಿಗೆ ವಿಶೇಷ ಪೂಜೆ ಸಲ್ಲಿಸಿದ್ದಾಾರೆ. ಇದೇ ವೇಳೆ ಅಂಜನಾದ್ರಿಿಗೆ ಮೋದಿ ಆಗಮನದ ಗುಟ್ಟನ್ನು ಬಹಿರಂಗಪಡಿಸಿದ್ದಾಾರೆ.
ಕಳೆದ ಕೆಲವು ದಿನಗಳಿಂದ ಅಂಜನಾದ್ರಿಿಗೆ ಮೋದಿ ಬರ್ತಾರೆ ಎನ್ನುವ ಸುದ್ದಿ ಹರಿದಾಡ್ತಿಿದೆ. ಖುದ್ದು ಗಂಗಾವತಿ ಶಾಸಕ ಗಾಲಿ ಜನಾರ್ಧನ ರೆಡ್ಡಿಿಯೇ ಮಾದ್ಯಮಕ್ಕೆೆ ಇಂತಹದೊಂದು ಹೇಳಿಕೆ ನೀಡಿದ್ದರು. ಇದೀಗ ರೆಡ್ಡಿಿ ಹನುಮ ಮಾಲಾ ಧರಿಸಿ ಮತ್ತೆೆ ಮೋದಿ ಬರುವ ಬಗ್ಗೆೆ ಭರವಸೆ ವ್ಯಕ್ತಪಡಿಸಿದ್ದಾಾರೆ. ಇಂದು ಗಂಗಾವತಿ ತಾಲೂಕಿನ ಪಂಪಾ ಸರೋವರವು ರಾಮಾಯಣದ ಕಾಲದ ಪವಿತ್ರ ತಾಣ. ಶಬರಿ ಮತ್ತು ಶ್ರೀರಾಮನ ಭೇಟಿಯ ಸ್ಥಳವಾದ ಈ ತಾಣದಲ್ಲಿ ಶಾಸಕ ಜನಾರ್ದನರೆಡ್ಡಿಿ ಅವರು ಹನುಮ ಮಾಲೆ ಧಾರಣೆ ಮಾಡಿದ್ದಾಾರೆ. ಅಂಜನಾದ್ರಿಿ ಪಕ್ಕದಲ್ಲೇ ಇರುವ ಈ ಐತಿಹಾಸಿಕ ಸ್ಥಳದಲ್ಲಿ ಮಾಲಾಧಾರಣೆ ಮಾಡಿ ಆಂಜನಾದ್ರಿಿಗೆ ತೆರಳಿ ಬಾಲ ಆಂಜನೇಯನಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಮುಂದಿನ ಐದು ದಿನಗಳ ಕಾಲ ಕಠಿಣ ವ್ರತಚಾರಣೆಯಲ್ಲಿ ಇರುತ್ತಾಾರೆ. ಡಿಸೆಂಬರ್ 3 ರಂದು ಈ ಹನುಮ ಮಾಲೆ ವಿಸರ್ಜನೆ ಮಾಡಲಿದ್ದಾಾರೆ.
ನಾನು ಜೈಲಿನಲ್ಲಿದ್ದಾಾಗ ಭಗವದ್ಗೀತೆಯ 18 ಅಧ್ಯಾಾಯಗಳನ್ನು ಬರೆದಿದ್ದೇನೆ. 2021 ರಲ್ಲಿ ಬಿಡುಗಡೆಯಾದ ನಂತರ ಹನುಮನ ಕ್ಷೇತ್ರದಲ್ಲಿ ವೃತಾಚರಣೆ ಮಾಡಿದ್ದೇನೆ. ಇಲ್ಲಿ ಸಂಕಲ್ಪ ಮಾಡಿಕೊಂಡು ನನ್ನ ಮುಂದಿನ ಯೋಜನೆಗಳನ್ನು ರೂಪಿಸಿದ್ದೇನೆ ಎಂದಿದ್ದಾಾರೆ.
ಅಂಜನಾದ್ರಿಿ ಕ್ಷೇತ್ರಕ್ಕೆೆ ಸಂಬಂಧಿಸಿದಂತೆ ಒಂದು ಬೃಹತ್ ಧಾರ್ಮಿಕ ಯೋಜನೆಗೆ ರೆಡ್ಡಿಿ ಪ್ಲ್ಯಾಾನ್ ಮಾಡಿದ್ದು ಅದನ್ನು ಈ ವೇಳೆ ಬಹಿರಂಗ ಪಡಿಸಿದ್ರು. ಇತ್ತೀಚೆಗೆ ಉಡುಪಿಯಲ್ಲಿ ಲಕ್ಷ ಕಂಠ ಭಗವದ್ಗೀತಾ ಪಾರಾಯಣ ನಡೆದಂತೆ ಅಂಜನಾದ್ರಿಿ ಬೆಟ್ಟದಲ್ಲಿ ಲಕ್ಷ ಕಂಠಗಳಿಂದ ಹನುಮಾನ್ ಚಾಲೀಸ ಪಠಣ ಕಾರ್ಯಕ್ರಮ ಆಯೋಜಿಸಲು ಅವರು ನಿರ್ಧರಿಸಿದ್ದಾಾರೆ. ಮುಂಬರುವ ಏಪ್ರಿಿಲ್ ತಿಂಗಳಲ್ಲಿ ಈ ಲಕ್ಷ ಕಂಠ ಹನುಮಾನ್ ಚಾಲೀಸ ಪಠಣ ಕಾರ್ಯಕ್ರಮ ನಡೆಯಲಿದ್ದು ಈ ಐತಿಹಾಸಿಕ ಕಾರ್ಯಕ್ರಮಕ್ಕೆೆ ದೇಶದ ಪ್ರಧಾನ ಮಂತ್ರಿಿಗಳಾದ ನರೇಂದ್ರ ಮೋದಿಯವರನ್ನು ಆಹ್ವಾಾನಿಸಲಾಗುವುದು ಮತ್ತು ಅವರ ಸಮ್ಮುಖದಲ್ಲೇ ಈ ಪಠಣ ನಡೆಯಲಿದೆಯಂತೆ ಅಂಜನಾದ್ರಿಿಯ ಆಧ್ಯಾಾತ್ಮಿಿಕ ಮಹತ್ವ ದೇಶಾದ್ಯಂತ ಸಾರುವ ಗುರಿ ಇದರ ಹಿಂದಿದೆ ಎಂದು ಹನುಮ ಮಾಲಾ ಧರಿಸಿದ ಬಳಿಕ ರೆಡ್ಡಿಿ ಹೇಳಿದ್ದಾಾರೆ.
ಪವಿತ್ರ ಪಂಪಾಸರೋವರದಲ್ಲಿ ಶ್ರದ್ಧೆೆಯಿಂದ ಹನುಮ ಮಾಲೆ ಧಾರಣೆ ಮಾಡಿರುವ ಶಾಸಕ ಜನಾರ್ದನರೆಡ್ಡಿಿ ಅವರ ಈ ವ್ರತಾಚರಣೆ, ಕ್ಷೇತ್ರದ ಮೇಲಿನ ಅವರ ನಂಬಿಕೆ ಮತ್ತು ಧಾರ್ಮಿಕ ಬದ್ಧತೆ ತೋರಿಸುತ್ತಿಿದೆ. ಇನ್ನು ಏಪ್ರಿಿಲ್ನಲ್ಲಿ ನಡೆಯಲಿರುವ ಲಕ್ಷ ಕಂಠ ಹನುಮಾನ್ ಚಾಲೀಸ ಪಠಣ ಕಾರ್ಯಕ್ರಮಕ್ಕೆೆ ಪ್ರಧಾನ ಮಂತ್ರಿಿಗಳನ್ನು ಆಹ್ವಾಾನಿಸಿರುವ ಬೆಳವಣಿಗೆ, ಅಂಜನಾದ್ರಿಿ ಕ್ಷೇತ್ರಕ್ಕೆೆ ರಾಷ್ಟ್ರಮಟ್ಟದಲ್ಲಿ ಮತ್ತಷ್ಟು ಮಹತ್ವ ತಂದುಕೊಡುವ ಸಾಧ್ಯತೆ ಇದೆ.
ಹನುಮಮಾಲೆ ಧರಿಸಿದ ರೆಡ್ಡಿ ಏಪ್ರಿಲ್ನಲ್ಲಿ ಪ್ರಧಾನ ಮಂತ್ರಿ ಆಹ್ವಾನಿಸುವ ಸಂಕಲ್ಪ

