ಸುದ್ದಿಮೂಲ ವಾರ್ತೆ
ಬೆಂಗಳೂರು, ಏ.12: ಮುಂಚೂಣಿಯ ಜಾಗತಿಕ ಫಾರ್ಮಾ ಸಂಸ್ಥೆ ಲುಪಿನ್ ಲಿಮಿಟೆಡ್(ಲುಪಿನ್) ದಕ್ಷಿಣ ಭಾರತದಲ್ಲಿ ತನ್ನ ಡಯಾಗ್ನಸ್ಟಿಕ್ಸ್ ಜಾಲದ ವಿಸ್ತರಣೆಯ ಭಾಗವಾಗಿ ಇಂದು ಕರ್ನಾಟಕದ ಬೆಂಗಳೂರಿನಲ್ಲಿ ತನ್ನ ಅತ್ಯಾಧುನಿಕ ಪ್ರಾದೇಶಿಕ ಪ್ರಯೋಗಾಲಯವನ್ನು ಉದ್ಘಾಟನೆ ಮಾಡಲಾಯಿತು.
ಕೋರಮಂಗಲದಲ್ಲಿ ಲುಪಿನ್ ಡಯಾಗ್ನೊಸ್ಟಿಕ್ಸ್ನ ಹೊಸ ಪ್ರಯೋಗಾಲಯ ಸ್ಥಾಪಿಸಲಾಗಿದ್ದು, ನಗರದಾದ್ಯಂತ ಸದ್ಯ 10 ಕಡೆಗಳಲ್ಲಿ ಪ್ರಯೋಗಾಲಯದ ಮಾದರಿ ಸಂಗ್ರಹ (ಕಲೆಕ್ಷನ್ ಸೆಂಟರ್) ಸ್ಥಾಪಿಸಲು ಮುಂದಾಗಿದೆ.
ಈ ಕುರಿತು ಬುಧವಾರ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಲುಪಿನ್ ಡಯಾಗ್ನಸ್ಟಿಕ್ಸ್ ಸಿಇಓ ರವೀಂದ್ರ ಕುಮಾರ್, ಭಾರತದಾದ್ಯಂತ ಕೈಗೆಟುಕುವ ದರದಲ್ಲಿ ಸೇವೆ ಒದಗಿಸುವ ಉದ್ದೇಶದಿಂದ ಅತ್ಯಾಧುನಿಕ ಪ್ರಯೋಗಾಲಯ ಸ್ಥಾಪಿಸಿದ್ದೇವೆ. ಬೆಂಗಳೂರಿನ ಈ ಪ್ರಯೋಗಾಲಯ ಮತ್ತು ಕಲೆಕ್ಷನ್ ಸೆಂಟರ್ಗಳ ಮೂಲಕ ಭಾರತಾದ್ಯಂತ ಒಟ್ಟು 25 ಪ್ರಯೋಗಾಲಯಗಳು ಮತ್ತು 410 ಲುಪಿಮಿತ್ರ ಕಲೆಕ್ಷನ್ ಸೆಂಟರ್ಗಳನ್ನು ಹೊಂದಿದಂತಾಗಿದೆ ಎಂದು ಅವರು ವಿವರಿಸಿದರು.
ಬೆಂಗಳೂರಿನ ಹೊಸ ಪ್ರಯೋಗಾಲಯವು ಅತ್ಯಾಧುನಿಕ ತಂತ್ರಜ್ಞಾನ ಹೊಂದಿದೆ. ಅತ್ಯಂತ ಪರಿಣಿತ
ಕ್ಲಿನಿಕಲ್ ತಜ್ಞರನ್ನು ಹೊಂದಿದ್ದು ಲುಪಿನ್ ಡಯಾಗ್ನೊಸ್ಟಿಕ್ಸ್ ಅತ್ಯಂತ ಉನ್ನತ ಗುಣಮಟ್ಟ ಹಾಗೂ ವಿಶ್ವಾಸಾರ್ಹ ಡಯಾಗ್ನಸ್ಟಿಕ್ಸ್ ಸೇವೆಗಳನ್ನು ರೋಗಿಗಳು ಮತ್ತು ಬೆಂಗಳೂರು ಹಾಗೂ ನೆರೆಹೊರೆಯ ನಗರಗಳ ಗ್ರಾಹಕರಿಗೆ ಒದಗಿಸುತ್ತದೆ ಎಂದರು.
ಇದರೊಂದಿಗೆ ದಿನನಿತ್ಯದ ಮತ್ತು ವಿಶೇಷ ಪರೀಕ್ಷೆಗಳೊಂದಿಗೆ ಈ ಪ್ರಯೋಗಾಲಯವು ಸಮಗ್ರ ಶ್ರೇಣಿಯ ಡಯಾಗ್ನೊಸ್ಟಿಕ್ಸ್ ಸೇವೆಗಳನ್ನು ಒದಗಿಸುತ್ತಿದ್ದು ಅದರಲ್ಲಿ ಮಾಲಿಕ್ಯುಲರ್ ಡಯಾಗ್ನೊಸ್ಟಿಕ್ಸ್, ಸೈಟೊಜೆನೆಟಿಕ್ಸ್, ಫ್ಲೋ ಸೈಟೊಮೆಟ್ರಿ, ಸೈಟಾಲಜಿ, ಮೈಕ್ರೊಬಯಾಲಜಿ, ಸೆರಾಲಜಿ, ಹೆಮಟಾಲಜಿ, ಹಿಸ್ಟೊಪೆಥಾಲಜಿ, ಇಮ್ಯುನಾಲಜಿ, ರೊಟೀನ್ ಬಯೋಕೆಮಿಸ್ಟ್ರಿ ಇತ್ಯಾದಿ ಒಳಗೊಂಡಿವೆ. ಲುಪಿನ್ ಡಯಾಗ್ನೊಸ್ಟಿಕ್ಸ್ ಅತ್ಯಾಧುನಿಕ ಆಟೊಮೇಷನ್ ಅಳವಡಿಸಿಕೊಂಡಿದೆ ಮತ್ತು ಅತ್ಯಂತ ನಿಖರ ಪರೀಕ್ಷೆಯ ಫಲಿತಾಂಶಗಳಿಗೆ ವ್ಯವಸ್ಥಿತ ಪ್ರಕ್ರಿಯೆಗಳನ್ನು ಒಳಗೊಂಡಿದೆ ಎಂದು ಹೇಳಿದರು.
“ಗುಣಮಟ್ಟದ ಡಯಾಗ್ನೊಸ್ಟಿಕ್ಸ್ ಭಾರತದ ಪ್ರತಿಯೊಬ್ಬರಿಗೂ ಲಭ್ಯವಾಗಬೇಕು ಮತ್ತು ಅದು ಕೈಗೆಟುಕುವ ದರದಲ್ಲಿರಬೇಕು ಎಂಬುದು ನಮ್ಮ ಧ್ಯೇಯ. ನಿಖರ ರೋಗ ಪರೀಕ್ಷೆಯು ಪರಿಣಾಮಕಾರಿ ರೋಗ ನಿರ್ವಹಣೆಗೆ ಅತ್ಯಂತ ಮುಖ್ಯವಾಗಿದೆ ಮತ್ತು ನಮ್ಮ ರೋಗಿಗಳಿಗೆ ವಿಶ್ವಾಸಾರ್ಹ, ಉನ್ನತ ಗುಣಮಟ್ಟದ ರೋಗಪರೀಕ್ಷೆ ಸೇವೆಗಳನ್ನು ಒದಗಿಸಲು ಬದ್ಧರಾಗಿದ್ದೇವೆ ಎಂದು ವಿವರಿಸಿದರು.