ಸುದ್ದಿಮೂಲ ವಾರ್ತೆ
ಹೊಸಕೋಟೆ, ಆ.13 : ಬೆಂಗಳೂರು ಸಹಕಾರ ಹಾಲು ಒಕ್ಕೂಟದ ವತಿಯಿಂದ ತಾಲ್ಲೂಕಿನಲ್ಲಿ ಪ್ರಾದೇಶಿಕ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ಬೆಂಗಳೂರು ಡೈರಿ ಅಧ್ಯಕ್ಷರಾದ ರಾಜ್ಕುಮಾರ್ ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.
ಬಳಿಕ ಮಾತನಾಡಿದ ರಾಜ್ಕುಮಾರ್, ಹೊಸಕೋಟೆ ತಾಲ್ಲೂಕಿನ ನಿರ್ದೇಶಕರಾದ ಸಿ. ಮಂಜುನಾಥ್ 1995 ರಿಂದ ನಿರಂತರವಾಗಿ ಬೆಂಗಳೂರು ಡೈರಿಗೆ ನಿರ್ದೇಶಕರಾಗಿ ಆಯ್ಕೆಯಾಗುತ್ತಿದ್ದಾರೆ.
ದೇಶದಲ್ಲಿಯೇ ಬೆಂಗಳೂರು ಹಾಲು ಒಕ್ಕೂಟ ಎರಡನೇ ಸ್ಥಾನಕ್ಕೇರಲು ಸಿ.ಮಂಜುನಾಥ್ರವರ ಪಾತ್ರ ದೊಡ್ಡದು ಎಂದು ತಿಳಿಸಿದರು.
ನಿರ್ದೇಶಕ ಸಿ. ಮಂಜುನಾಥ್ ಮಾತನಾಡಿ, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಹೊಸಕೋಟೆ, ದೇವನಹಳ್ಳಿ, ದೊಡ್ಡಬಳ್ಳಾಪುರ ಈ ಮೂರು ತಾಲ್ಲೂಕುಗಳಲ್ಲಿ ಹಾಲಿನ ಗುಣಮಟ್ಟ ಮತ್ತು ಉತ್ಪಾದನೆಯಲ್ಲಿ ಪೈಪೋಟಿ ನಡೆಯುತ್ತಿತ್ತು. ಆದರೆ, ಈಗ ಆ ರೀತಿ ಇಲ್ಲ ರಾಮನಗರ, ಕನಕಪುರ ಭಾಗಗಳಲ್ಲಿ ಹೆಚ್ಚು ಹಾಲು ಉತ್ಪಾದನೆಯಾಗುತ್ತಿದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಹಾಲು ಉತ್ಪಾಧಕರ ಸಹಕಾರ ಸಂಘಗಳಲ್ಲಿ ಹೆಚ್ಚು ವರ್ಷಗಳು ಸೇವೆ ಸಲ್ಲಿಸಿದಂತಹ ಕಾರ್ಯನಿರ್ವಾಹಕರಿಗೆ, ಉತ್ತಮ ಗುಣ ಮಟ್ಟವನ್ನು ಕಾಯ್ದುಕೊಂಡ ಸಂಘಗಳಿಗೆ, ಹೆಚ್ಚು ಹಾಲು ಉತ್ಪಾದಿಸುತ್ತಿರುವ ರೈತರಿಗೆ ಬಹುಮಾನಗಳನ್ನು ನೀಡಿಗೌರವಿಸಲಾಯಿತು. ಪ್ರಶಸ್ತಿಗಳ ವಿತರಣೆಯನ್ನು ಬೆಂಗಳೂರು ಸಹಕಾರ ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕರಾದ ಡಾ. ಎಸ್.ಟಿ. ಸುರೇಶ್ರವರು ಮಾಡಿದರು.
ಈ ಸಂದರ್ಭದಲ್ಲಿ ಪ್ರಭಾರ ಪ್ರಧಾನ ವ್ಯವಸ್ಥಾಪಕ ಡಾ. ಎಂ. ಗಂಗಯ್ಯ, ಖರೀದಿ ವಿಭಾಗದ ವ್ಯವಸ್ಥಾಪಕ ಡಾ. ಎಂ. ಶಿವರಾಂ, ಹೊಸಕೋಟೆ ಟೌನ್ ಕೋ ಆಪರೇಟಿವ್ ಬ್ಯಾಂಕ್ ಜೀನತ್ ಉನ್ನಿಸಾ, ಚಂದ್ರಪ್ಪ, ನೌರರ ಸಂಘದ ಅಧ್ಯಕ್ಷರಾದ ಕಾಮಯ್ಯ, ತಾಲ್ಲೂಕಿನ ಎಲ್ಲಾ ಡೈರಿಗಳ ಕಾರ್ಯನಿರ್ವಹಕರು, ಅಧ್ಯಕ್ಷರುಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.