ಸುದ್ದಿಮೂಲ ವಾರ್ತೆ
ಮೈಸೂರು, ಮೇ 24: ಪದವಿ ಪೂರ್ವ ಶಿಕ್ಷಣಕ್ಕೆ ಸಂಬoಧಿಸಿದoತೆ ಯಾವುದೇ ರೀತಿಯ ಕೋಚಿಂಗ್ಗಳನ್ನು ಖಾಸಗಿಯಾಗಿ ಇಲಾಖೆಯ ಮಾನದಂಡಗಳಿಗೆ ಒಳಪಟ್ಟು ನಡೆಸಲು ನಗರದ ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಕಚೇರಿಯಿಂದ ಮೇ.31 ರೊಳಗೆ ನೋಂದಣೆ ಮಾಡಿಸಿಕೊಳ್ಳುವುದು ಕಡ್ಡಾಯ ಮಾಡಲಾಗಿದೆ.
ನೊಂದಣಿಯಾಗದ ಕೋಚಿಂಗ್ ಸೆಂಟರ್ ಗಳನ್ನು ಅನಧಿಕೃತ ಕೋಚಿಂಗ್ ಸೆಂಟರ್ಗಳೆoದು ಘೋಷಿಸಿ ತಕ್ಷಣವೇ ಅವುಗಳನ್ನು ಮುಚ್ಚಿಸುವಂತೆ ಕ್ರಮ ಕೈಗೊಳ್ಳಲಾಗುವುದು. ವಿದ್ಯಾರ್ಥಿಗಳು ಅಥವಾ ಪೋಷಕರು ಸಹ ನೊಂದಣಿಯಾದ ಕೋಚಿಂಗ್ ಸೆಂಟರ್ಗಳಿಗೆ ಮಾತ್ರ ವಿದ್ಯಾರ್ಥಿಗಳನ್ನು ದಾಖಲಾತಿ ಮಾಡಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕಿ ಎಂ. ನಾಗಮ್ಮ ದೂ.ಸಂ:9448588338, ಅಥವಾ ವಿಷಯ ನಿರ್ವಾಹಕ ಸುನಿಲ್ ಕುಮಾರ್ ಕೆ.ಎಸ್ ದೂ: 9986815228 ಅವರನ್ನು ಸಂಪರ್ಕಿಸಬಹುದು ಎಂದು ಪದವಿ ಪೂರ್ವ ಮತ್ತು ವೃತ್ತಿ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.