ಸುದ್ದಿಮೂಲ ವಾರ್ತೆ ಸಿಂಧನೂರು, ಡಿ.30:
ನಗರದ ಕುಷ್ಟಗಿ ರಸ್ತೆೆಯ ಕೂಡಲ ಸಂಗಮ ಚಿತ್ರಮಂದಿರದ ಹತ್ತಿಿರದ ವಿಜಯ ವಿರಾಟ ಸಹಕಾರಿ ಸಂಘದ ನೂತನ 2026ನೇ ವರ್ಷದ ಕ್ಯಾಾಲೆಂಡರ್ನ್ನು ಸಹಕಾರಿ ಅಧ್ಯಕ್ಷ ಅಂಬಣ್ಣ ಪತ್ತಾಾರ ಗೊರೇಬಾಳ ಮಂಗಳವಾರ ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಸಹಕಾರಿ ಸಂಘವು ಆರಂಭಗೊಂಡು 9ನೇ ವರ್ಷ ಪೂರ್ಣಗೊಳ್ಳುವ ಹಂತದಲ್ಲಿದೆ. ಗ್ರಾಾಹಕರಿಗೆ ಉತ್ತಮ ಸಾಲಗಳನ್ನು ನೀಡುವುದರ ಜತೆಗೆ ಸಹಕಾರದೊಂದಿಗೆ ಉತ್ತಮ ಠೇವಣಿ ಸಂಗ್ರಹಿಸಿದೆ. ಶೀಘ್ರವೇ 10ನೇ ವರ್ಷಕ್ಕೆೆ ಸಹಕಾರಿ ಪಾದಾರ್ಪಣೆ ಮಾಡುತ್ತಿಿದೆ ಎಂದು ಹರ್ಷ ವ್ಯಕ್ತಪಡಿಸಿದ ಅವರು, ಸಹಕಾರಿಯ ಬೆಳವಣಿಗೆಗೆ ಗ್ರಾಾಹಕರು, ಶೇರುದಾರರು ಹಾಗೂ ಸಿಬ್ಬಂದಿಗಳ ಪರಿಶ್ರಮವಿದೆ. ಸಹಕಾರಿಯ ಮೇಲಿನ ವಿಶ್ವಾಾಸದಿಂದ ವರ್ಷದಿಂದ ವರ್ಷಕ್ಕೆೆ ಸಹಕಾರಿಯು ಪ್ರಗತಿಯತ್ತ ಸಾಗಿದೆ ಎಂದು ಸಂತಸ ಹಂಚಿಕೊಂಡರು.
ಸಹಕಾರಿಯ ಉಪಾಧ್ಯಕ್ಷ ಟಿ.ಅಯ್ಯಪ್ಪ, ನಿರ್ದೇಶಕರಾದ ಮೌನೇಶ್ ತೀಡಿಗೋಲ್, ಡಾ.ವೀರೇಶ್ ಅಂಗಡಿ ಗೊರೆಬಾಳ, ಶೇಖರಪ್ಪ ತಾಳಿಕೋಟೆ, ಮುಖ್ಯ ಕಾರ್ಯನಿರ್ವಾಹಕ ವಿ.ಪಿ.ಮನೋಜ್ ಕುಮಾರ್ ಸೇರಿದಂತೆ ಸಿಬ್ಬಂದಿ ವರ್ಗ ಇದ್ದರು.
ವಿಜಯ ವಿರಾಟ ಸಹಕಾರಿಯ ಕ್ಯಾಲೆಂಡರ್ ಬಿಡುಗಡೆ

