ಸುದ್ದಿಮೂಲ ವಾರ್ತೆ ಕವಿತಾಳ, ಡಿ.21:
ಪಟ್ಟಣದ ಶ್ರೀ ಕನಕ ನೌಕರರ ಪತ್ತಿಿನ ಸೌಹಾರ್ದ ಸಹಕಾರ ಸಂಘ ನಿಯಮಿತ ಬ್ಯಾಾಂಕ್ ನಲ್ಲಿ ಶನಿವಾರ 2026 ನೆ ಸಾಲಿನ ನೂತನ ಕ್ಯಾಾಲೆಂಡರ್ ಬಿಡುಗಡೆ ಮಾಡಲಾಯಿತು.
ಸಹಕಾರ ಸಂಘದ ಅಧ್ಯಕ್ಷ ಶರಣಪ್ಪ ರೂಡಗಿ ಕ್ಯಾಾಲೆಂಡರ್ ಬಿಡುಗಡೆ ಮಾಡಿ ಮಾತನಾಡಿದ ಅವರು ರಾಜ್ಯಾಾದ್ಯಂತ ಸಾರ್ವತ್ರಿಿಕ ಸರಕಾರಿ ರಜೆ, ಸ್ಥಳೀಯ ಜಾತ್ರೆೆಗಳು, ಹಬ್ಬ ಹರಿದಿನಗಳು, ಸಹಕಾರಿ ಸಂಘದ ವಿವರಗಳನ್ನು ಸೇರಿದಂತೆ ಇನ್ನಿಿತರ ಅನೇಕ ವಿಶೇಷವಾಗಿ ಸಾರ್ವಜನಿಕ ಮನಮುಟ್ಟವ ಹಾಗೆ ಕ್ಯಾಾಲೆಂಡರ್ ನಲ್ಲಿ ಮುದ್ರಿಿಸಲಾಗಿದೆ. ಗ್ರಾಾಹಕರು, ರೈತರು, ಸಾರ್ವಜನಿಕರು, ನಿರ್ದೇಶಕರು ಇದರ ಸದುಪಯೋಗ ಪಡೆಯಬೇಕು ಎಂದರು.
ಕಾರ್ಯಕ್ರಮದ ಕುರಿತು ಸಂಗೊಳ್ಳಿಿ ರಾಯಣ್ಣ ಸಹಕಾರ ಸಂಘದ ಅಧ್ಯಕ್ಷ ಶಿವಣ್ಣ ವಕೀಲ ಮಾತನಾಡಿದರು.
ಈ ಸಂದರ್ಭದಲ್ಲಿ ನಿವೃತ್ತ ಶಿಕ್ಷಕ ಅಮರಪ್ಪ, ಅಯ್ಯಪ್ಪ ತೋಳ, ಸಹಕಾರ ಸಂಘದ ನಿರ್ದೇಶಕರಾದ ಜಾನಕಿ, ರಶ್ಮಿಿ, ಹೊನ್ನಪ್ಪ, ಮಲ್ಲಿಕಾರ್ಜುನ, ಮಹಾಂತೇಶ ಕಾರ್ಲಟ್ಟಿಿ, ಹನುಮಂತಪ್ಪ ಧನ್ನೂರು, ಸುಧಾಕರ ಸಿಬ್ಬಂದಿ ಭಾಗ್ಯಶ್ರೀ, ಸಂತೋಷ, ಬಸವರಾಜ, ರಾಮಣ್ಣ, ಬೀರಪ್ಪ ಹೀರಾ, ಶಿವುಕುಮಾರ ಅಗಲಗತ್ತಿಿ ಇನ್ನಿಿತರರು ಉಪಸ್ಥಿಿತರಿದ್ದರು
ಕವಿತಾಳ : ಕ್ಯಾಲೆಂಡರ್ ಬಿಡುಗಡೆ

