ಸುದ್ದಿಮೂಲ ವಾರ್ತೆ ಬೀದರ್, ನ.03:
ಮುಂಗಾರು ಹಂಗಾಮಿನಲ್ಲಿ ಸುರಿದ ಭಾರೀ ಮಳೆ, ಪ್ರವಾಹದಿಂದಾಗಿ ಪ್ರಸಕ್ತ ಸಾಲಲ್ಲಿ ಜಿಲ್ಲೆಯ ರೈತಾಪಿ ವರ್ಗವು ಭಾರೀ ಸಂಕಷ್ಟ ಅನುಭವಿಸಿದ್ದು, ಇದೀಗ ರಾಜ್ಯ ಹಾಗೂ ಕೇಂದ್ರ ಸರ್ಕಾರವು ಜಂಟಿಯಾಗಿ ರೈತರಿಗೆ ಪರಿಹಾರ ಬಿಡುಗಡೆ ಮಾಡಿದೆ.
ಜಿಲ್ಲೆಗೆ 137 ಕೋಟಿಗೂ ಅಧಿಕ ಪರಿಹಾರದ ಹಣ ಬಂದಿದ್ದು, ಆಯಾ ರೈತರ ಬ್ಯಾಾಂಕ್ ಖಾತೆಗಳಿಗೆ ಜಮಾವಾ ಗತೊಡಗಿದೆ. ಸಾಕಷ್ಟು ಪ್ರಮಾಣದಲ್ಲಿ ರೈತರು ಈ ಬಾರಿ ನಷ್ಟ ಅನುಭವಿಸಿದ್ದು, ಸರ್ಕಾರದ ಪರಿಹಾರ ಏನೇನೂ ಅಲ್ಲದಿದ್ದರೂ ಸ್ವಲ್ಪ ಮಟ್ಟಿಿಗಾದರೂ ನೆರವಾಗಲಿದೆ. ಆದರೆ, ಜಿಲ್ಲೆಯ ಬಹುತೇಕ ರೈತರು ಜಿಲ್ಲಾ ಕೇಂದ್ರ ಸಹಕಾರ (ಡಿಸಿಸಿ) ಬ್ಯಾಾಂಕ್ನಲ್ಲಿ ಖಾತೆ ಹೊಂದಿದ್ದಾರೆ. ಹಾಗೇ, ಬಹುತೇಕ ರೈತರು ಡಿಸಿಸಿ ಬ್ಯಾಾಂಕ್ನಲ್ಲಿ ಕೃಷಿ ಉದ್ದೇಶಗಳಿಗಾಗಿ ಸಾಲ ಸಹ ಪಡೆದಿರುತ್ತಾಾರೆ. ಕಳೆದೆರಡ್ಮೂರು ವರ್ಷಗಳಿಂದ ಮಳೆ ಹೆಚ್ಚಾಾಗಿ ರೈತ ನಷ್ಟ ಅನುಭವಿಸಿದ್ದಾನೆ. ಈ ಹಿನ್ನೆೆಲೆ ರೈತರು ಸಕ್ರಿಿಯ ಸಾಲಗಾರರಾಗಿ ಉಳಿಯದೇ ಸುಸ್ತಿಿ ಸಾಲಗಾರರಾಗಿ ಬದಲಾಗಿದ್ದಾರೆ. ಹಾಗಾಗಿ, ರೈತರ ಬ್ಯಾಾಂಕ್ ಖಾತೆಗಳಿಗೆ ಡಿಸಿಸಿ ಬ್ಯಾಾಂಕ್ ನಿರ್ದೇಶನದ ಮೇರೆಗೆ ಸುಸ್ತಿಿ ಸಾಲಗಾರರ ಖಾತೆಗಳಿಗೆ ಸ್ಥಳೀಯ ಪಿಕೆಪಿಎಸ್ ಅಧಿಕಾರಿಗಳು ಈಗಾಗಲೇ ಬೀಗ ಜಡಿದಿದ್ದು, ರೈತರಿಗೆ ಬೆಳೆ ಪರಿಹಾರ ಹಣ ಕನ್ನಡಿಯೊಳಗಿನ ಗಂಟಾಗಿದೆ.
ಡಿಸಿಸಿ ಬ್ಯಾಾಂಕ್ ನಡೆಗೆ ಆಕ್ಷೇಪ : ಅಮರ್ ಖಂಡ್ರೆೆ ನೇತೃತ್ವದ ಆಡಳಿತ ಮಂಡಳಿ ಡಿಸಿಸಿ ಬ್ಯಾಾಂಕ್ ಚುಕ್ಕಾಾಣಿ ಹಿಡಿದ ಮೇಲೆ ರೈತರಿಗೆ ಒಂದು ಕಡೆ ಸಾಲವು ನೀಡುತ್ತಿಿಲ್ಲ. ಮತ್ತೊೊಂದೆಡೆ ಸಾಲ ವಸೂಲಿಗಾಗಿ ತೀವ್ರ ಒತ್ತಡ ಹೇರುತ್ತಿಿದೆ ಎಂಬ ಆಪಾದನೆ ರೈತ ವಲಯದಿಂದ ಒಕ್ಕೂರಲಿನಿಂದ ಕೇಳಿಬರುತ್ತಿಿದೆ.
ಹಿಂದೆ ಉಮಾಕಾಂತ್ ನಾಗಮಾರಪಳ್ಳಿಿ ಅಧ್ಯಕ್ಷರಾಗಿದ್ದ ಸಮಯದಲ್ಲಿ ಪಡೆದ ಸಾಲ ತೀರಿಸಲು ರೈತರು ತಿಣುಕಾಡುತ್ತಿಿದ್ದು, ಈಗ ಹಳೇ ಸಾಲ ವಸೂಲಿ ನೆಪದಲ್ಲಿ ರೈತರ ಖಾತೆಗಳಿಗೂ ಲಾಕ್ ಹಾಕಿ ಸಂಕಷ್ಟ ಇಮ್ಮಡಿಗೊಳಿಸ ಲಾಗಿದೆ ಎಂಬ ದೂರುಗಳು ರೈತರಿಂದ ಕೇಳಿ ಬರುತ್ತಿಿವೆ.
ಈ ಬಗ್ಗೆೆ ಸ್ಥಳೀಯ ಪಿಕೆಪಿಎಸ್ ಅಧಿಕಾರಿಗಳಿಗೆ ಕೇಳಿದರೆ ಡಿಸಿಸಿ ಬ್ಯಾಾಂಕ್ ನಿರ್ದೇಶನದ ಮೇರೆಗೆ ಸುಸ್ತಿಿದಾರ ಸಾಲಗಾರರ ಖಾತೆಗಳನ್ನು ಲಾಕ್ ಮಾಡಲಾಗಿದೆ. ಈ ಬಗ್ಗೆೆ ಹೆಚ್ಚಿಿನ ಮಾಹಿತಿಗೆ ಡಿಸಿಸಿ ಬ್ಯಾಾಂಕ್ಗೆೆ ಸಂಪರ್ಕಿಸಲು ಸಲಹೆ ಮಾಡುತ್ತಿಿದ್ದಾರೆ. ಇತ್ತ ಡಿಸಿಸಿ ಬ್ಯಾಾಂಕ್ ಅಧಿಕಾರಿಗಳು ಪಿಕೆಪಿಎಸ್ಗಳನ್ನೇ ಸಂಪರ್ಕಿಸುವಅತೆ ರೈತರಿಗೆ ನಿರ್ದೇಶನ ನೀಡುತ್ತಿಿದ್ದಾರೆ. ಈ ಮಧ್ಯೆೆ ರೈತರು ತಮ್ಮ ಖಾತೆಗಳಲ್ಲಿ ಹಣ ಇದ್ದರೂ ಕೂಡ ಪಡೆೆಯಲು ಸಾಧ್ಯವಾಗದೇ ಕೈಕಟ್ಟಿಿ ಕೂರುವ ಪರಿಸ್ಥಿಿತಿ ಉದ್ಭವಿಸಿದೆ.
ಸುಸ್ತಿಿ ಸಾಲಗಾರರು ಹೈರಾಣ : ಸರ್ಕಾರ ಅಳೆದು ತೂಗಿ ರೈತರಿಗೆ ಬೆಳೆ ನಷ್ಟ ಪರಿಹಾರ ಘೋಷಿಸಿ ಈಗ ಬೀದರ್ ಜಿಲ್ಲೆಗೆ 137 ಕೋಟಿ ರೂ. ಹಣವನ್ನು ಬಿಡುಗಡೆ ಮಾಡಿದೆ. ಕಷ್ಟದಲ್ಲಿದ್ದ ರೈತರಿಗೆ ನೆರವಾಗುವ ಉದ್ದೇಶದಿಂದ ಬಿಡುಗಡೆಯಾದ ಪರಿಹಾರದ ಹಣ ಹಲವಾರು ರೈತರಿಗೆ ದೊರಕದಿರುವುದು ಸಂಕಷ್ಟ ತಂದೊಡ್ಡಿಿದೆ. ಬಹುತೇಕ ರೈತರು ಸಣ್ಣ ಹಿಡುವಳಿದಾರರಾಗಿದ್ದು, 10-12 ಸಾವಿರ ರೂ. ಪರಿಹಾರದ ಹಣದಿಂದ ಹಿಂಗಾರು ಬೆಳೆ ಪೋಷಣೆಗೆ ನೆರವಾಗಲಿದೆ. ಡಿಸಿಸಿ ಬ್ಯಾಾಂಕ್ನಿಂದ ಸುಸ್ತಿಿದಾರರಾಗಿರುವ ರೈತರ ಬ್ಯಾಾಂಕ್ ಖಾತೆಗಳಿಗೆ ಬೀಗ ಹಾಕಿರುವ ಸಂಬಂಧ ರೈತರಿಗೆ ಪರಿಹಾರ ಕನ್ನಡಿಯೊಳಗಿನ ಗಂಟಾಗಿ ಪರಿಣಮಿಸಿದೆ.
ರೈತ ಪರ ಸರ್ಕಾರದ ನಿಲುವೇನು ? : ರೈತ, ಹಿಂದುಳಿದ ವರ್ಗದ ಪರವಾಗಿರುವುದಾಗಿ ಹೇಳುವ ಕಾಂಗ್ರೆೆಸ್ ಸರ್ಕಾರದಲ್ಲಿ ರೈತರಿಗೆ ಇಲ್ಲವೇ ನೆಮ್ಮದಿ ಎಂಬ ಪ್ರಶ್ನೆೆ ಉದ್ಭವಿಸಿದೆ. ಜಿಲ್ಲಾ ಸಹಕಾರ ಬ್ಯಾಾಂಕ್ನಿಇದ ಸಕಾಲಕ್ಕೆೆ ರೈತರಿಗೆ ಸಾಲ ನೀಡುವ ಪ್ರಕ್ರೀೆಯೆಯನ್ನೇ ಸ್ಥಗಿತಗೊಳಿಸಲಾಗಿದೆ. ಹಳೇ ಸಾಲ ವಸೂಲಿಗೆ ಥರ್ಡ್ ಡಿಗ್ರಿಿ ಮಾದರಿಯಲ್ಲಿ ರೈತರ ಖಾತೆಗಳಿಗೇ ಬೀಗ ಹಾಕಲಾಗಿದೆ. ಖಾಸಗಿ ೈನಾನ್ಸ್ ಮಾದರಿಯಲ್ಲಿ ಡಿಸಿಸಿ ಬ್ಯಾಾಂಕ್ ಆಡಳಿತ ಮಂಡಳಿ ನಡೆದುಕೊಳ್ಳುತ್ತಿಿರುವುದು ಮುಂದುವರೆದೇ ಇದೆ. ಇಂಥದ್ದರಲ್ಲಿ ರಾಜ್ಯ ಸರ್ಕಾರ ಯಾವ ಕ್ರಮ ಕೈಗೊಳ್ಳುತ್ತದೆ ಎಂಬುದು ಇನ್ನಷ್ಟೇ ಕಾಯಬೇಕಿದೆ.
ಸರ್ಕಾರದಿಂದ 137 ಕೋಟಿ ರೂ. ಬಿಡುಗಡೆ ಡಿಸಿಸಿ ಬ್ಯಾಾಂಕ್ನಿಂದ ಖಾತೆಗಳಿಗೆ ಬೀಗ : ರೈತರ ಕೈ ಸೇರದ ಬೆಳೆ ಪರಿಹಾರ

