ಸುದ್ದಿಮೂಲ ವಾರ್ತೆ ಸಿಂಧನೂರು, ಅ.04:
ಅತೀ ವೃಷ್ಠಿಿಯಿಂದ ಬಹಳಷ್ಟು ಬೆಳೆಹಾನಿಯಾಗಿದ್ದು, ಈಗಾಗಲೇ ಕಂದಾಯ ಹಾಗೂ ಕೃಷಿ ಇಲಾಖೆಯಿಂದ ಜಂಟಿ ಸರ್ವೇ ನಡೆದಿದೆ. ವರದಿ ಸರಕಾರದ ಕೈ ಸೇರುತ್ತಿಿದ್ದಂತೆ ಸರಕಾರ ರೈತರಿಗೆ ಪರಿಹಾರ ನೀಡಲಿದೆ ಎಂದು ಜಿಲ್ಲಾಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಭರವಸೆ ನೀಡಿದರು.
ಶುಕ್ರವಾರ ತಾಲೂಕಿನ ಗೋನವಾರ ಗ್ರಾಾಮದಲ್ಲಿ ಬೆಳೆಹಾನಿ ವೀಕ್ಷಣೆ ಮಾಡಿ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಮಳೆಯಿಂದ ಜಿಲ್ಲೆೆಯಾದ್ಯಂತ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ. ಲಿಂಗಸೂಗೂರು, ಮಸ್ಕಿಿ, ಸಿಂಧನೂರು, ಮಾನ್ವಿಿ ಹಾಗೂ ರಾಯಚೂರು ತಾಲೂಕುಗಳಲ್ಲಿ ಬೆಳೆಹಾನಿ ವೀಕ್ಷಣೆ ಮಾಡಿ ನಂತರ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗುವುದು. ನಮ್ಮ ಕಾಂಗ್ರೆೆಸ್ ಸರಕಾರ ರೈತಪರವಾಗಿದೆ. ಅತೀವೃಷ್ಠಿಿಯಿಂದ ರೈತರು ಸಂಕಷ್ಟಕ್ಕೀಡಾಗಿದ್ದಾಾರೆ. ಇದನ್ನು ಮನಗಂಡ ಮುಖ್ಯಮಂತ್ರಿಿ ಸಿದ್ದರಾಮಯ್ಯ ಅವರು ಬೀದರ್, ಕಲ್ಬುರ್ಗಿ, ರಾಯಚೂರು, ಯಾದಗಿರಿ, ಧಾರವಾಡ, ಬಾಗಲಕೋಟೆ ಜಿಲ್ಲೆೆಗಳಲ್ಲಿ ವೈಮಾನಿಕ ಸಮೀಕ್ಷೆ ನಡೆಸಿದ್ದಾಾರೆ. ಈ ಜಿಲ್ಲೆೆಗಳಲ್ಲಿ ಬಹಳಷ್ಟು ಬೆಳೆಹಾನಿಯಾಗಿದೆ. ಈ ಹಿನ್ನಲೆಯಲ್ಲಿ ಮುಖ್ಯಮಂತ್ರಿಿಗಳು ಪರಿಹಾರ ಕೂಡ ಘೋಷಣೆ ಮಾಡಿದ್ದಾಾರೆ ಎಂದರು.
ರಾಯಚೂರು ಜಿಲ್ಲೆೆಯಲ್ಲಿ ಪ್ರಮುಖವಾಗಿ ಜೋಳ, ಹತ್ತಿಿ, ತೊಗರಿ ಬೆಳೆಗಳು ಹಾನಿಯಾಗಿವೆ. ಎನ್ಡಿಆರ್ಎ್ ನಿಯಮದನ್ವಯ ಕೇಂದ್ರ ಸರಕಾರ ಪ್ರತಿ ಹೆಕ್ಟೇರ್ ಖುಷ್ಕಿಿ ಭೂಮಿಗೆ 8500 ರೂ.ಗಳನ್ನು ಘೋಷಣೆ ಮಾಡಿದೆ. ರಾಜ್ಯ ಸರಕಾರ ಅದಕ್ಕೆೆ ಇನ್ನೂ 8500 ರೂ. ಗಳನ್ನು ಸೇರಿಸಿ 17 ಸಾವಿರ ರೂ.ಗಳನ್ನು ನೀಡಲಿದೆ. ನೀರಾವರಿ ಬೆಳೆಗೆ ಪ್ರತಿ ಹೇಕ್ಟೇರ್ಗೆ 25 ಸಾವಿರ, ತೋಟಗಾರಿಕೆ ಬೆಳೆಗೆ 30 ಸಾವಿರ ನೀಡಲಾಗುವುದು. ಜೊತೆಗೆ ಮಳೆಯಿಂದ ಮನೆ ಹಾನಿ, ಜೀವಹಾನಿ, ಜಾನುವಾರುಗಳ ಸಾವಿಗೂ ಪರಿಹಾರ ವಿತರಿಸಲಾಗುವುದು. ಅಲ್ಲದೇ ಮಳೆಯಿಂದ ರಸ್ತೆೆಗಳು, ಸೇತುವೆಗಳು, ಶಾಲಾ ಕಟ್ಟಡಗಳು, ಅಂಗನವಾಡಿ ಕಟ್ಟಡಗಳು ಸೇರಿದಂತೆ ಮಳೆಹಾನಿಗೆ ಸಂಬಂಧಿಸಿದಂತೆ ಲೋಕೋಪಯೋಗಿ ಇಲಾಖೆ ಮೂಲಕ ವರದಿ ಸಲ್ಲಿಸಲು ಎಲ್ಲಾಾ ಇಲಾಖೆಗೆ ಸೂಚಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ಶಾಸಕರಾದ ಹಂಪನಗೌಡ ಬಾದರ್ಲಿ, ಆರ್.ಬಸನಗೌಡ ತುರ್ವಿಹಾಳ, ವಿಧಾನ ಪರಿಷತ್ ಶಾಸಕರಾದ ಬಸನಗೌಡ ಬಾದರ್ಲಿ, ಎ.ವಸಂತಕುಮಾರ, ಜಿಲ್ಲಾಾಧಿಕಾರಿ ನಿತೀಶ ಕೆ, ಜಿ.ಪಂ.ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಈಶ್ವರ ಕಾಂದೂ, ಎಸ್ಪಿ ಪುಟ್ಟಮಾದಯ್ಯ, ಸಹಾಯಕ ಆಯುಕ್ತ ಬಸವಣ್ಣಪ್ಪ ಕಲ್ಶೆಟ್ಟಿಿ, ಕೃಷಿ ಇಲಾಖೆಯ ಉಪನಿರ್ದೇಶಕ ನಹೀಮ್ ಪಾಷಾ, ತಹಶೀಲ್ದಾಾರ ಅರುಣ ದೇಸಾಯಿ, ಸಹಾಯಕ ಕೃಷಿ ನಿರ್ದೇಶಕ ಮಲ್ಲಿಕಾರ್ಜುನ, ಗ್ರಾಾಮೀಣ ಬ್ಲಾಾಕ್ ಕಾಂಗ್ರೆೆಸ್ ಅಧ್ಯಕ್ಷ ಲಿಂಗಪ್ಪ ದಡೇಸೂಗೂರು, ಮುಖಂಡರಾದ ಬಿ.ಹೆಚ್.ನಾಯಕ, ಹನುಮರಡ್ಡೆೆಪ್ಪಗೌಡ ಸೇರಿದಂತೆ ರೈತರು, ಇತರರು ಇದ್ದರು.
ಜಿಲ್ಲಾಾ ಉಸ್ತುವಾರಿ ಸಚಿವರಿಂದ ಬೆಳೆ ಹಾನಿ ವೀಕ್ಷಣೆ ಬೆಳೆಹಾನಿ ವರದಿ ಬಂದ ತಕ್ಷಣ ಪರಿಹಾರ : ಶರಣಪ್ರಕಾಶ ಪಾಟೀಲ್
