ಸುದ್ದಿಮೂಲ ವಾರ್ತೆ ಕನಕಗಿರಿ, ಡಿ.01:
ಕನಕಗಿರಿ ಪಟ್ಟಣದಲ್ಲಿ ಶೀಘ್ರದಲ್ಲಿ ಉಪ ನೋಂದಣಿ ಕಚೇರಿ ಮತ್ತು ನ್ಯಾಾಯಾಲಯ ಆರಂಭಿಸಲಾಗುವುದು ಎಂದು ಕನ್ನಡ ಮತ್ತು ಸಂಸ್ಕೃತಿ, ಹಿಂದುಳಿದ ವರ್ಗಗಳ ಕಲ್ಯಾಾಣ, ಜಿಲ್ಲಾಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹೇಳಿದರು.
ತಾಲೂಕಿನ ವಿವಿಧ ಗ್ರಾಾಮೀಣ ರಸ್ತೆೆಗಳಿಗೆ ಮತ್ತು ಸೇತುವೆ ನಿರ್ಮಾಣ ಕಾಮಗಾರಿಗೆ ಸೋಮವಾರ ಭೂಮಿಪೂಜೆ ನೆರವೇರಿಸಿ ಬಳಿಕ ಮಾತನಾಡಿದರು.
ಪಟ್ಟಣದಲ್ಲಿ ತಾತ್ಕಾಾಲಿಕ ಕೋರ್ಟ್ಗೆ ಮೂಲ ಸೌಕರ್ಯಗಳನ್ನು ಒದಗಿಸಲು ಶಾಸಕರ ಪ್ರದೇಶಾಭಿವೃದ್ದಿ ಅನುದಾನ ಯೋಜನೆಯಡಿ ಹಣ ನೀಡಲಾಗಿದೆ.
ತಾಂತ್ರಿಿಕ ಕಾರಣಗಳಿಂದ ನೆನೆಗುದಿಗೆ ಬಿದ್ದಿದ್ದ ಉಪ ನೋಂದಣಿ ಕಚೇರಿಯನ್ನು ಡಿ.8ರೊಳಗೆ ಆರಂಭಿಸಲಾಗುವುದು, ಮಹರ್ಷಿ ವಾಲ್ಮೀಕಿ ಭವನ, ಕನಕ ಭವನ, ಡಾ.ಬಿ.ಆರ್.ಅಂಬೇಡ್ಕರ್ ಭವನ ನಿರ್ಮಾಣಕ್ಕೆೆ ತಲಾ 2 ಕೋಟಿ ರೂಪಾಯಿ ಬಿಡುಗಡೆಯಾಗಿದ್ದು 15-30 ದಿನದೊಳಗೆ ಕಾಮಗಾರಿ ಆರಂಭಿಸಲಾಗುವುದು ಮತ್ತು ಅಗ್ನಿಿ ಶಾಮಕ ದಳ ಸ್ಥಾಾಪನೆಗೆ 3 ಕೋಟಿ, ತಾಲ್ಲೂಕು ಆಸ್ಪತ್ರೆೆ ನಿರ್ಮಾಣಕ್ಕೆೆ 34 ಕೋಟಿ ರೂ. ಮಂಜೂರಾಗಿದ್ದು, ಟೆಂಡರ್ ಪ್ರಕ್ರಿಿಯೆ ಕೂಡ ನಡೆದಿದ್ದು. ಶೀಘ್ರದಲ್ಲಿ ಇವುಗಳ ಕಟ್ಟಡಕ್ಕೂ ಚಾಲನೆ ನೀಡಲಾಗುವುದು. ಕರ್ನಾಟಕ ಕಸ್ತೂರ ಬಾ ವಸತಿ ನಿಲಯದ ಕಟ್ಟಡಕ್ಕೆೆ ಎರಡು ಭೂಮಿ ಗುರುತಿಸಲಾಗಿದ್ದು ಇದೇ ತಿಂಗಳಲ್ಲಿ ಕಟ್ಟಡ ನಿರ್ಮಾಣಕ್ಕೆೆ ಚಾಲನೆ ನೀಡಲಾಗುವುದು ಎಂದರು.
ಚಾಲನೆ : ಯತ್ನಟ್ಟಿಿಯಿಂದ ಗುಡದೂರು ಕಾಮಗಾರಿಗೆ 10 ಕೋಟಿ ರೂ., ನವಲಿ-ಕಲ್ಮಂಗಿ ರಸ್ತೆೆ, ಸಂಕನಾಳ, ಉದ್ದಿಹಾಳ ರಸ್ತೆೆಯಲ್ಲಿ ಕ್ಯಾಾರಿಹಾಳ ನಾಲಾಗೆ ಸೇತುವೆ ನಿರ್ಮಾಣಕ್ಕೆೆ 5 ಕೋಟಿ ರೂ, ಸೋಮಸಾಗರ-ಚಿಕ್ಕತಾಂಡ ರಸ್ತೆೆ ಹಾಗೂ ಸೇತುವೆ ನಿರ್ಮಾಣಕ್ಕೆೆ 5 ಕೋಟಿ ರೂ. ಮತ್ತು ಬೊಮ್ಮಸಾಗರ-ಕನಕಗಿರಿ ರಸ್ತೆೆ ದುರಸ್ಥಿಿಗೆ 5 ಕೋಟಿ ರೂ. ಮಂಜೂರಾದ್ದು, ಈ ಎಲ್ಲಾಾ ಕಾಮಗಾರಿಗೆ ಇಂದು ಚಾಲನೆ ನೀಡಲಾಗಿದೆ ಎಂದರು.
ತಾಲ್ಲೂಕಿನ ಯತ್ನಟ್ಟಿಿಯಿಂದ ಕೆ.ಮಲ್ಲಾಾಪುರ, ಗುಡದೂರು, ಹಿರೇಖೇಡ ಮಾರ್ಗದಿಂದ ಕನಕಗಿರಿವರೆಗಿನ ರಸ್ತೆೆ ಅಭಿವೃದ್ದಿ ಹಾಗೂ ಡಾಂಬರೀಕರಣ, ಸೇತುವೆ ನಿರ್ಮಾಣ ಕಾಮಗಾರಿಗೆ ಒಟ್ಟು 36 ಕೋಟಿ ರೂಪಾಯಿ ಮಂಜೂರಾಗಿದೆ ಕಾಮಗಾರಿಗಳು ಟೆಂಡರ್ ಪ್ರಕ್ರಿಿಯೆಯಲ್ಲಿದ್ದು ಹಂತ ಹಂತವಾಗಿ ಆರಂಭಿಸಲಾಗುವುದು. ಕ್ಷೇತ್ರದ ವ್ಯಾಾಪ್ತಿಿಯ ವಿವಿಧ ಗ್ರಾಾಮಗಳ ರಸ್ತೆೆ ಡಾಂಬರೀಕರಣ, ಸೇತುವೆ ನಿರ್ಮಾಣಕ್ಕೆೆ 30 ತಿಂಗಳ ಅವಧಿಯಲ್ಲಿ ಒಟ್ಟು 400 ಕೋಟಿ ರೂಪಾಯಿ ಅನುದಾನ ನೀಡಲಾಗಿದೆ ಎಂದರು.
ಪಟ್ಟಣ ಹಾಗೂ ಕಾರಟಗಿಯಲ್ಲಿ ತಲಾ 2.85 ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿಿತವಾಗಿ ನಿರ್ಮಾಣವಾಗಿರುವ ಸಾಂಸ್ಕೃತಿಕ ಭವನ ಹಾಗೂ ಮುಗಿಯುವ ಹಂತದಲ್ಲಿರುವ ಸರ್ಕಿಟ್ ಹೌಸ್ನ್ನು ಜನೆವರಿ ತಿಂಗಳಲ್ಲಿ ಲೋಕಾರ್ಪಣೆಗೊಳಿಸಲಾಗುವುದು. ಅಧಿಕಾರಿಗಳು ತಿಂಗಳೊಳಗೆ ಪ್ರವಾಸಿ ಮಂದಿರ ಕಾಮಗಾರಿ ಪೂರ್ಣಗೊಳಿಸಬೇಕೆಂದು ಸೂಚಿಸಿದರು. ಪಟ್ಟಣದಿಂದ ಕೊಪ್ಪಳಕ್ಕೆೆ ತೆರಳುವ ರಸ್ತೆೆ ಅಭಿವೃದ್ದಿ ಪಡಿಸಿ ಡಾಂಬರೀಕರಣಗೊಳಿಸಲು ಗಮನ ಹರಿಸಲಾಗುವದು. ಹಾಗೂ ಇದೇ ರಸ್ತೆೆಯಲ್ಲಿ ಮತ್ತೆೆರಡು ತಡೆ ರಹಿತ ಬಸ್ ಓಡಿಸಲು ಸಾರಿಗೆ ಅಧಿಕಾರಿಗಳಿಗೆ ಸೂಚಿಸಲಾಗುವುದು ಎಂದರು.
ಬ್ಲಾಾಕ್ ಕಾಂಗ್ರೆೆಸ್ ಅಧ್ಯಕ್ಷ ಕೆ.ಗಂಗಾಧರಸ್ವಾಾಮಿ, ಪ್ರಚಾರ ಸಮಿತಿ ಅಧ್ಯಕ್ಷ ರಮೇಶ ನಾಯಕ, ಜಿಲ್ಲಾಾ ಉಪಾಧ್ಯಕ್ಷ ಸಿದ್ದಪ್ಪ ನೀರ್ಲೂಟಿ, ಎಸ್ಟಿ ಘಟಕದ ರಾಜ್ಯ ಸಂಘಟನಾ ಕಾರ್ಯದರ್ಶಿ ರಾಮನಗೌಡ, ತಾ.ಪಂ ಮಾಜಿ ಅಧ್ಯಕ್ಷ ಬಸಂತಗೌಡ ಪಾಟೀಲ್, ವಿವಿಧ ಪ್ರಾಾಧಿಕಾರ ಹಾಗೂ ನಿಗಮ ಮಂಡಳಿಗಳ ಸದಸ್ಯರಾದ ವಿರುಪಣ್ಣ ಕಲ್ಲೂರು, ಶಿವರೆಡ್ಡಿಿ ಖ್ಯಾಾಡೆದ, ವೆಂಕಟೇಶ ಕುಲಕರ್ಣಿ, ಮಲ್ಲಿಕಾರ್ಜುನಗೌಡ, ಗ್ರಾಾ.ಪಂ.ಅಧ್ಯಕ್ಷರಾದ ಹನುಮಮ್ಮ ವಡ್ರಕಲ್, ಹಿರೇಹನುಮಂತಪ್ಪ, ಉಪಾಧ್ಯಕ್ಷ ನಾಗರಾಜ ತಳವಾರ, ಪ್ರಮುಖರಾದ ಕೆ.ಸಿದ್ದನಗೌಡ, ನಾಗಪ್ಪ ಹುಗ್ಗಿಿ, ಗಂಗಾಧರಗೌಡ, ನಾಗರಾಜ ಇದ್ಲಾಾಪುರ, ಸಿದ್ದನಗೌಡ ನವಲಿ, ಜಡಿಯಪ್ಪ ಭೋವಿ, ಶೇಖರಗೌಡ ಪಾಟೀಲ, ವಿಜಯಕುಮಾರ ಕೋಲ್ಕಾಾರ ಇತರರು ಇದ್ದರು.
ವಿವಿಧ ರಸ್ತೆಗಳ ದುರಸ್ಥಿ ಮತ್ತು ಸೇತುವೆಗಳ ನಿರ್ಮಾಣ ಕಾಮಗಾರಿಗೆ ಚಾಲನೆ ಕನಕಗಿರಿಯಲ್ಲಿ ಶೀಘ್ರ ಉಪ ನೋಂದಣಿ ಕಚೇರಿ, ನ್ಯಾಯಾಲಯ ಆರಂಭ – ಸಚಿವ ತಂಗಡಗಿ

