ಸುದ್ದಿಮೂಲ ವಾರ್ತೆ ಲಿಂಗಸೂಗೂರು, ಜ.10:
ಚುನಾಯಿತ ಜನಪ್ರತಿನಿಧಿಗಳು ಜನರ ಸೇವಕರೆ ಹೊರತು ನಾವು ಮಾಲೀಕರಲ್ಲ ಕ್ಷೇತ್ರದ ಅಭಿವೃದ್ಧಿಿಯೇ ನಮ್ಮ ಗುರಿಯಾಗಿರಬೇಕು ಜನರಿಗೆ ಕನಿಷ್ಠ ಮೂಲಸೌಕರ್ಯ ಒದಗಿಸುವ ಪ್ರಯತ್ನ ಮಾಡಬೇಕೆಂದು ಕೆಪಿಸಿಸಿ ಉಪಾಧ್ಯಕ್ಷ ಮಾಜಿ ಶಾಸಕ ಡಿ.ಎಸ್ ಹೂಲಗೇರಿ ಹೇಳಿದರು.
ಪಟ್ಟಣದ ವಾರ್ಡ 14ರಲ್ಲಿ ಆಯೋಜಿಸಿದ ಕಾಂಗ್ರೆೆಸ್ ಪಕ್ಷ ಸೇರ್ಪಡೆಯ ಕಾರ್ಯಕರ್ತರ ಸಭೆ ಉದ್ಘಾಾಟಿಸಿ ಮಾತನಾಡುತ್ತ ಪಿಂಚಣಿಪೂರದಲ್ಲಿ ಅನೇಕ ಸಮಸ್ಯೆೆಗಳಿಗೆ ಜನಪ್ರತಿನಿಧಿಗಳು ವಿಲವಾಗಿದ್ದು ನಾನು ಸೋತರು ನಿರಂತರವಾಗಿ ಜನರ ಸಮಸ್ಯೆೆ ಕ್ಷೇತ್ರದ ಅಭಿವೃದ್ಧಿಿಗೆ ಗಮನಹರಿಸಿದ್ದು ಮುಂಬರವ ಚುನಾವಣೆಯಲ್ಲಿ ಪಕ್ಷ ಯಾರಿಗೆ ಟಿಕೆಟ್ ನೀಡಿದರೂ ಕಾರ್ಯಕರ್ತರು ಒಗ್ಗಟಾಗಿ ಅಭ್ಯರ್ಥಿ ಗೆಲ್ಲುವಿಗೆ ಶ್ರಮಿಸಬೇಕು ಪಕ್ಷದಲ್ಲಿದ್ದು ಬೆನ್ನಿಿಗೆಚೂರಿ ಹಾಕುವವರ ವಿರುದ್ಧ ಜಾಗೃತರಾಗಿರಬೇಕೆಂದರು.
ಬಿಜೆಪಿ ಮುಖಂಡ ಮಹ್ಮದ ನಜೀರ ಸಂಗಡಿಗರನ್ನು ಪಕ್ಷದ ಬಾವುಟ ನೀಡಿ ಪಕ್ಷಕ್ಕೆೆ ಸೇರ್ಪಡೆ ಮಾಡಿಕೊಂಡರು. ಬ್ಲಾಾಕ್ ಅಧ್ಯಕ್ಷ ಗೋವಿಂದನಾಯಕ, ಮುದಗಲ್ ಬ್ಲಾಾಕ್ ಕಾಂಗ್ರೆೆಸ್ ಅಧ್ಯಕ್ಷ ಶಿವಶಂಕರಗೌಡ ಉಪ್ಪರನಂದಿಹಾಳ, ಪುರಸಭೆ ಮಾಜಿ ಉಪಾಧ್ಯಕ್ಷ ಮಹ್ಮದರಫಿ , ಯುವ ಘಟಕದ ಅಧ್ಯಕ್ಷ ಸಂತೋಷ ಸೊಪ್ಪಿಿಮಠ, ಮೌನೇಶ, ಪಕ್ಷ ಸಂಘಟನೆ ಬಗ್ಗೆೆ ಮಾತನಾಡಿದರು. ಮಾಜಿಪುರಸಭೆ ಅಧ್ಯಕ್ಷ ಖಾದರಪಾಶಾ, ಎಚ್.ಮುದಕಪ್ಪವಕೀಲ, ಅಪ್ಪಯ್ಯ ದಣಿ, ಎಪಿಎಂಸಿಅಧ್ಯಕ್ಷ ಅಮರೇಶ ಹೆಸರೂರ, ತಾಲೂಕ ಗ್ಯಾಾರಂಟಿ ಅನುಷ್ಠಾಾನ ಸಮಿತಿ ಅಧ್ಯಕ್ಷ ವೆಂಕಟೇಶ ಗುತ್ತೆೆದಾರ, ಸಂಜಿಪ್ಪ ಕಂದಗಲ್, ಹಾರೂನಸಾಬ, ಎಕ್ಬಾಾಲ್ಸಾಬ, ಅಲ್ಲುಪಟೇಲ್, ವಿಜಯಲಕ್ಷ್ಮಿಿ, ಶ್ವೇತಾ ಲಾಲಗುಂದಿ, ಅಮರೇಶಮಡ್ಡಿಿ, ಗದ್ದೆೆನಗೌಡ ಪಾಟೀಲ, ಪಾಶಾ ಟೇಲರ್, ನರಸಿಂಹರೆಡ್ಡಿಿ ಇತರರಿದ್ದರು ಶಶಿಕುಮಾರ ನಿರ್ವಹಿಸಿದರು.
‘ಜನಪ್ರತಿನಿಧಿಗಳು ಸೇವಕರೆ ಹೊರತು ಮಾಲೀಕರಲ್ಲ’

