ಸುದ್ದಿಮೂಲ ವಾರ್ತೆ ದೇವದುರ್ಗ, ಜ.26:
ಡಾ.ಬಿಆರ್ ಅಂಬೇಡ್ಕರ್ ಬರೆದ ಸಂವಿಧಾನ ಶ್ರೇೇಷ್ಠ ಗ್ರಂಥವಿದ್ದಂತೆ. ನಾವೆಲ್ಲರೂ ಗೌರವಿಸಿ ಅವರ ಮಹತ್ವ ಜನರಿಗೆ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು. ತ್ಯಾಾಗ ಬಲಿದಾನ ಮೂಲಕವೇ ದೇಶಕ್ಕೆೆ ಸ್ವತಂತ್ರ್ಯ ಸಿಕ್ಕಿಿದೆ ಎಂದು ಶಾಸಕಿ ಕರೆಮ್ಮ ಗೋಪಾಲಕೃಷ್ಣ ಹೇಳಿದರು.
ಪಟ್ಟಣದ ಸಾರ್ವಜನಿಕ ಕ್ಲಬ್ ಆವರಣದಲ್ಲಿ ತಾಲೂಕ ಆಡಳಿತ ವತಿಯಿಂದ ಆಯೋಜಿಸಿದ್ದ ಗಣರಾಜ್ಯೋೋತ್ಸವ ದಿನಾಚರಣೆ ಹಾಗೂ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಾಟಿಸಿ ಅವರು ಮಾತನಾಡಿದರು. ಇಡೀ ಜಗತ್ತೇ ಡಾ.ಬಿಆರ್ ಅಂಬೇಡ್ಕರ್ ಸಂವಿಧಾನ ಒಪ್ಪಿಿಕೊಂಡಿದ್ದು, ಅವರ ತತ್ವ ಸಿದ್ದಾಂತಗಳು ಪ್ರತಿಯೊಬ್ಬರು ಜೀವನಕ್ಕೆೆ ಅಳವಡಿಸಿಕೊಂಡು ಬದುಕು ಕಟ್ಟಿಿಕೊಳ್ಳಬೇಕು ಎಂದು ಹೇಳಿದರು. ಕಾನೂನು ಮೂಲಕವೇ ಹೋರಾಟ ಮಾಡುವಂತೆ ಒಂದು ಸಂದೇಶ ನೀಡಿದ್ದಾರೆ. ಹಲವು ಪುಸ್ತಕಗಳು ಅಧ್ಯಾಾಯನ ಮಾಡಿ ಪ್ರತಿಯೊಂದು ಸಮಾಜಕ್ಕೆೆ ಸಮಾನತೆ ನೀಡಿದ್ದಾರೆ. ಮಹನೀಯರ ತತ್ವ ಸಿದ್ದಾಂತಗಳು ಪ್ರತಿಯೊಬ್ಬರು ಜೀವನಕ್ಕೆೆ ಅಳವಡಿಸಿಕೊಂಡು ಬದುಕು ಕಟ್ಟಿಿಕೊಳ್ಳಬೇಕು ಎಂದು ಹೇಳಿದರು. ಶಿಕ್ಷಣ, ಸಂಘಟನೆಯಿಂದ ಹಲವು ಸರಕಾರದ ಸೌಲಭ್ಯಗಳು ಪಡೆದುಕೊಳ್ಳಲು ಅನುಕೂಲವಾಗಲಿದೆ. ಹಿಂದುಳಿದ ತಾಲೂಕು ಅಭಿವೃದ್ಧಿಿಗೆ ಅಧಿಕಾರಿಗಳು ಕೈಜೋಡಿಸಬೇಕು ಎಂದರು. ಗೆದ್ದು ಮೂರು ವರ್ಷಗಳು ಕಳೆಯುತ್ತಿಿದ್ದು, ಶಿಕ್ಷಣ, ಆರೋಗ್ಯ ಕ್ಷೇತ್ರಕ್ಕೆೆ ಹೆಚ್ಚಿಿನ ಅನುದಾನ ನೀಡುವ ಮೂಲಕ ಅಭಿವೃದ್ಧಿಿಗೆ ಒತ್ತು ನೀಡಲಾಗಿದೆ. ಸರಕಾರಿ ಶಾಲೆ, ಸಮುದಾಯ ಆರೋಗ್ಯ ಕೇಂದ್ರ ಸೇರಿದಂತೆ ಇತರೆ ಅಭಿವೃದ್ಧಿಿಗೆ ಈಗಾಗಲೇ 100ಕೋಟಿ ರೂ. ಅನುದಾನ ನೀಡಲಾಗಿದೆ. ಸರಕಾರಿ ಶಾಲೆಯಲ್ಲಿ ಹಲವು ಯೋಜನೆಗಳು ಜೊತೆ ಕಡ್ಡಾಾಯ ಶಿಕ್ಷಣ ಜಾರಿಗೆ ತರಲಾಗಿದೆ. ಇಂತಹ ಯೋಜನೆಗಳು ಸದುಪಯೋಗ ಪಡೆದುಕೊಂಡು ಉತ್ತಮ ಗುಣಮಟ್ಟದ ಶಿಕ್ಷಣ ಸೌಲಭ್ಯ ಪಡೆದುಕೊಳ್ಳುವಂತೆ ವಿದ್ಯಾಾರ್ಥಿಗಳಿಗೆ ಕಿವಿಮಾತು ಹೇಳಿದರು.
ಈಬಾರಿ ಎಸ್ಎಸ್ಎಲ್ಸಿಿ ಪರೀಕ್ಷೆಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾಾನ ಬರುವ ನಿಟ್ಟಿಿನಲ್ಲಿ ಶಿಕ್ಷಕರುಶ್ರಮ ವಹಿಸುವ ಬಹಳ ಅಗತ್ಯವಿದೆ ಎಂದು ಹೇಳಿದರು. ಶಿಕ್ಷಕರ ಕೊರತೆ ಇದ್ದರೂ, ಇದ್ದಂತಹ ಶಿಕ್ಷಕರು ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ಸೌಲಭ್ಯಕ್ಕೆೆ ಬೇಕಿರುವ ಅಗತ್ಯ ಸೌಲಭ್ಯಗಳು ಒದಗಿಸುವ ಭರವಸೆ ನೀಡಿದರು. ಇಂತಹ ಮಹತ್ವದ ಕಾರ್ಯಕ್ಕೆೆ ಅಧಿಕಾರಿಗಳು ಕೈಜೋಡಿಸಬೇಕು ಎಂದು ಹೇಳಿದರು.
ಎಪಿಎಂಸಿ ಅಧ್ಯಕ್ಷ ಆದನಗೌಡ ಪಾಟೀಲ್ ಬುಂಕಲದೊಡ್ಡಿಿ, ಗ್ಯಾಾರಂಟಿ ಯೋಜನೆ ಅಧ್ಯಕ್ಷ ಲಕ್ಷ್ಮಣ ಜ್ಯೋೋತಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಪಿಎಲ್ಡಿಿ ಬ್ಯಾಾಂಕ್ ಅಧ್ಯಕ್ಷ ಶರಣಗೌಡ ಹೊಸಮನಿ ಹಂಚಿನಾಳ, ತಹಶೀಲ್ದಾಾರ ನಾಗಮ್ಮ ಕಟ್ಟಿಿಮನಿ, ಸರಕಾರಿ ನೌಕರರ ಸಂಘದ ಅಧ್ಯಕ್ಷ ಹನುಮಂತ್ರಾಾಯ ಶಾಖೆ, ತಾಪಂ ಇಒ ಬಸವರಾಜ ಹಟ್ಟಿಿ, ಕ್ಷೇತ್ರ ಶಿಕ್ಷಣಾಧಿಕಾರಿ ಮಲ್ಲಿಕಾರ್ಜನ್, ಪುರಸಭೆ ಮುಖ್ಯಾಾಧಿಕಾರಿ ಕೆ.ಹಂಪಯ್ಯ, ಸಹಾಯಕ ಕೃಷಿ ನಿರ್ದೇಶಕ ಶ್ರೀನಿವಾಸ ನಾಯಕ, ಸಮನ್ವಯ ಅಧಿಕಾರಿ ಶಿವರಾಜ ಪೂಜಾರಿ, ಎಇಇ ವಿಜಯಕುಮಾರ, ಎಇಇ ಹೀರಲಾಲ್ ಸೇರಿದಂತೆ ಇತರರು ಇದ್ದರು.
ಗಣರಾಜ್ಯೋತ್ಸವ ಸಮಾರಂಭ : ಹಿಂದುಳಿದ ತಾಲೂಕು ಅಭಿವೃದ್ಧಿಗೆ ಶ್ರಮಿಸಲು ಶಾಸಕಿ ಕರೆಮ್ಮ ಸಲಹೆ

