ಸುದ್ದಿಮೂಲ ವಾರ್ತೆ
ತುಮಕೂರು, ನ. 04 : ಮುಸ್ಲಿಂ ಸಮುದಾಯದ ಪಿಂಜಾರ-ನದಾಫ್ ಸಮುದಾಯವು ಶೈಕ್ಷಣಿಕ, ಆರ್ಥಿಕ ಹಾಗೂ ಸಾಮಾಜಿಕವಾಗಿ ಹಿಂದುಳಿದಿದ್ದು, ಇದಕ್ಕಾಗಿ ನದಾಫ್ ಅಭಿವೃದ್ಧಿ ನಿಗಮ ಸ್ಥಾಪನೆಯಾಗಿದೆ ಆದರೆ, ಐೋಜನೆಗಳ ಕಾರ್ಯರೂಪಕ್ಕೆ ತರಲು ವಿಫಲವಾಗಿದೆ. ಹೀಗಾಗಿ, ಕೂಡಲೇ ಅಧ್ಯಕ್ಷರನ್ನು ನೇಮಕ ಮಾಡುವಂತೆ ನದಾಫ್ ಸಮುದಾಯ ಮನವಿ ಸಲ್ಲಿಸಿದೆ.
ಅಭಿವೃದ್ಧಿ ಮಂಡಳಿಗೆ ಮರು ಜೀವ ಕೊಡಬೇಕಾಗಿರುವ ಕಾರ್ಯ ಆಗಬೇಕಾಗಿದೆ ಎಂದು ವಿವರವಾದ ಮನವಿಯನ್ನು ಇತ್ತೀಚೆಗೆ ತುಮಕೂರು ನಗರಕ್ಕೆ ಆಗಮಿಸಿದ್ದ ವಕ್ಫ್ ಬೋರ್ಡ್ ಮತ್ತು ಹಜ್
ಯಾತ್ರಾ ಸಚಿವರಾದ ಬಿ.ಜೆಡ್. ಜಮೀರ್ ಅಹಮ್ಮದ್ರವರಿಗೆ ಸಲ್ಲಿಸಿದರು.
ಬಷೀರ್ ಅಹಮದ್ರವರು ನೀಡಿರುವ ಮನವಿ ಪತ್ರದಲ್ಲಿ ಇಸ್ಲಾಂ ಸಾಂಪ್ರದಾಯಿಕ ಕಾರ್ಯಕ್ರಮಗಳಲ್ಲಿ ಸಮುದಾಯವು ಒಗ್ಗೂಡಿಕೊಳ್ಳಲು ಸಮುದಾಯ ಭವನಗಳನ್ನು ನಿರ್ಮಾಣ ಮಾಡಿ ಎಲ್ಲ ವಲಯಗಳಲ್ಲೂ ಸಮುದಾಯವನ್ನು ಪರಿಗಣಿಸಿ ಉದ್ಯೋಗ ಸೇರಿದಂತೆ ಅಭಿವೃದ್ಧಿ ಮಂಡಳಿಯನ್ನು ರಚಿಸುವಂತೆ ತಿಳಿಸಿದ್ದಾರೆ.
ಆ ಕುರಿತು ನಾನು ಸರ್ಕಾರದ ಮಟ್ಟದಲ್ಲಿ ಚರ್ಚೆ ಮಾಡಿ ಕಾರ್ಯರೂಪಕ್ಕೆ ಬರಲು ಶ್ರಮವಹಿಸುತ್ತೇನೆ ಸ್ವತಃ ಸಚಿವರು ಅಲ್ಲಿ ನೆರೆದಿದ್ದ ಅಪಾರ ಸಂಖ್ಯೆಯ ಕಾಂಗ್ರೆಸ್ ಕಾರ್ಯಕರ್ತರು ಮತ್ತು ನದಾಫ್ ಸಮುದಾಯದವರ ಸಮ್ಮುಖದಲ್ಲಿ ತಿಳಿಸಿದರು.
ಸಚಿವರಿಗೆ ಮನವಿ ನೀಡುವ ವೇಳೆ ನದಾಫ್ ಸಮುದಾಯದ ಜಿಲ್ಲಾಧ್ಯಕ್ಷ ಬಷೀರ್ ಅಹಮದ್, ಉಪಾಧ್ಯಕ್ಷ ಅಬ್ದುಲ್ ಅತಿಫ್, ಸಾಹಿಲ್ ಪಾಷಾ, ಮಕ್ಬುಲ್ ಸಾಬ್, ವಸೀಂ, ಫೈರೋಜ್, ಆಸೀಫ್, ತೌಫಿಕ್, ನೌಷಾದ್, ಇರ್ಷಾದ್, ರಿಜ್ವಾನ್, ಉಬೇದ್, ಅನ್ಸರ್, ಸಾಧಿಕ್ ಸೇರಿದಂತೆ ಇತರರು ಉಪಸ್ಥಿತರಿದ್ದರು.