ಸುದ್ದಿಮೂಲ ವಾರ್ತೆ ದೇವದುರ್ಗ, ಜ.07:
ಜನರ ಸಮಸ್ಯೆೆಗಳಿಗೆ ಸ್ಪಂದಿಸದ ಹಾಗೂ ಉದ್ಯೋೋಗ ಖಾತ್ರಿಿ ಯೋಜನೆ ಸಮರ್ಪಕವಾಗಿ ಅನುಷ್ಠಾಾನ ಮಾಡದ ತಾಲೂಕಿನ ಶಾವಂತಗೇರಾ ಗ್ರಾಾಪಂ ಪಿಡಿಒ ಸೈಯದ್ ಮತಿನುದ್ದಿನ್ರನ್ನು ಬೇರೆಡೆ ವರ್ಗಾವಣೆ ಮಾಡುವಂತೆ ಒತ್ತಾಾಯಿಸಿ ಪಟ್ಟಣದ ತಾಪಂ ಕಚೇರಿಯಲ್ಲಿ ಇಒ ಬಸವರಾಜ ಹಟ್ಟಿಿಗೆ ವಿವಿಧ ಗ್ರಾಾಮಸ್ಥರು ಬುಧವಾರ ಮನವಿ ಸಲ್ಲಿಸಿದರು.
ಶಾವಂತಗೇರಾ ಗ್ರಾಾಪಂನಲ್ಲಿ 15 ವರ್ಷಗಳಿಂದ ಚುನಾವಣೆ ನಡೆಯದೆ ಆಡಳಿತ ಮಂಡಳಿ ರಚನೆಯಾಗಿಲ್ಲ. ಇಲ್ಲಿ ಅಧಿಕಾರಿಗಳು ಆಡಿದ್ದೇ ಆಟ ಎನ್ನುವಂತಿದ್ದು ಜನರ ಸಮಸ್ಯೆೆ ಯಾರೂ ಕೇಳುತ್ತಿಿಲ್ಲ. ಶಾವಂತಗೇರಾ ಗ್ರಾಾಪಂ ಪಿಡಿಒ ಸೈಯದ್ ಮತಿನುದದ್ದೀನ್ ಪ್ರಭಾರರಾಗಿ ಅಧಿಕಾರವಹಿಸಿ ಕೊಂಡಿದ್ದು ಸಮರ್ಪಕವಾಗಿ ಕಚೇರಿಗೆ ಬರುತ್ತಿಿಲ್ಲ. ಜನರು ೆನ್ ಮಾಡಿದರೂ ಸ್ಪಂದಿಸುತ್ತಿಿಲ್ಲ. ಉದ್ಯೋೋಗ ಖಾತ್ರಿಿ ಯೋಜನೆಯಡಿ ಕೆಲಸ ನೀಡುವಂತೆ ವಿವಿಧ ಗ್ರಾಾಮಸ್ಥರು ಮನವಿ ಮಾಡಿದರೂ ಸ್ಪಂದಿಸುತ್ತಿಿಲ್ಲ. ಇದರಿಂದ ಜನರಿಗೆ ತೀವ್ರ ಸಮಸ್ಯೆೆಯಾಗಿದೆ. ಹಲವು ಜನರು ಕೆಲಸ ಇಲ್ಲದೆ ಮಹಾನಗರಗಳಿಗೆ ಗುಳೆ ಹೋಗುತ್ತಿಿದ್ದಾಾರೆ ಎಂದು ದೂರಿದರು.
ಕೂಡಲೇ ಪ್ರಭಾರ ಪಿಡಿಒ ಸೈಯದ್ ಮತಿನುದ್ದೀನ್ರನ್ನು ಬೇರೆ ಗ್ರಾಾಪಂಗೆ ವರ್ಗಾವಣೆ ಮಾಡಬೇಕು. ಶಾವಂತಗೇರಾ ಗ್ರಾಾಪಂಗೆ ದಕ್ಷ ಪಿಡಿಒ ಅಥವಾ ಹಿಂದಿನ ಪಿಡಿಒ ಶಂಶುದ್ದೀನ್ರನ್ನು ನೇಮಕ ಮಾಡಬೇಕು. ನಿರ್ಲಕ್ಷ್ಯ ಮಾಡಿದರೆ ಶಾವಂತಗೇರಾ ಗ್ರಾಾಪಂಗೆ ಬೀಗ ಜಡಿದು ಹಂತ ಹಂತವಾಗಿ ದೊಡ್ಡ ಮಟ್ಟದ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಗ್ರಾಾಪಂ ವ್ಯಾಾಪ್ತಿಿಯ ವಿವಿಧ ಗ್ರಾಾಮದ ಮುಖಂಡರಾದ ಬೂದಯ್ಯಸ್ವಾಾಮಿ, ಸೂರ್ಯಕಾಂತಸ್ವಾಾಮಿ, ದೇವಪ್ಪ ಹಂಚಿನಾಳ, ರಾಚನಗೌಡ, ಶೇಖಪ್ಪ ಬಾಲಪ್ಪ, ಬಸವರಾಜ ನಾಗಪ್ಪ, ಹೊನ್ನಯ್ಯ ಹನುಮಯ್ಯ, ಕುಮಾರ ಹೊನ್ನಗುಡಿಯಪ್ಪ, ದೇವು ಬಾಲಪ್ಪ, ಬಸಪ್ಪ ಸಾಬಣ್ಣ, ವೆಂಕಟೇಶ, ಹನುಮಂತ್ರಾಾಯ, ಬಸಣ್ಣ ನಾಗಪ್ಪ ಇತರರಿದ್ದರು.
ಶಾವಂತಗೇರಾ ಪಿಡಿಒ ವರ್ಗಾವಣೆಗೆ ಗ್ರಾಮಸ್ಥರಿಂದ ಮನವಿ

