ಸುದ್ದಿಮೂಲ ವಾರ್ತೆ ಬೆಂಗಳೂರು, ಜ.13:
ಆರೋಗ್ಯ ಸಿಬ್ಬಂದಿಗಾಗಿ 3 ರಿಂದ 6 ತಿಂಗಳ ಅಲ್ಪಾಾವಧಿಯ ತರಬೇತಿ ಮತ್ತು ಡಿಪ್ಲೊೊಮಾ ಕೋರ್ಸ್ಗಳನ್ನು ಪರಿಚಯಿಸಲು ಅನುಮೋದನೆ ನೀಡಬೇಕು ಎಂದು ಮನವಿ ಮಾಡಿದರು.
ಕೇಂದ್ರ ಆರೋಗ್ಯ ಸಚಿವರಾದ ಜೆ ಪಿ ನಡ್ಡಾಾ ಅವರ ಅಧ್ಯಕ್ಷತೆಯಲ್ಲಿ ನಡೆದ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆೆಯ 60 ನೇ ಕೌನ್ಸಿಿಲ್ ಸಭೆಯಲ್ಲಿ (ವರ್ಚುವಲ್) ಭಾಗವಹಿಸಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಾಣ ಸಚಿವ ದಿನೇಶ್ ಗುಂಡೂರಾವ್ ಮನವಿ ಸಲ್ಲಿಸಿದರು.
ಪ್ರಸ್ತುತ ಸೇವೆಯಲ್ಲಿರುವ ಈ ಕೋರ್ಸ್ಗಳನ್ನು ಮೈಸೂರು ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆೆ ಅಥವಾ ಜಿಲ್ಲಾ ಮಟ್ಟದ ಆಸ್ಪತ್ರೆೆಗಳು ಮತ್ತು ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆೆಗಳಲ್ಲಿ ಶೈಕ್ಷಣಿಕ ಸಹಯೋಗದೊಂದಿಗೆ ನಡೆಸಬಹುದು. ಇದು ಮಕ್ಕಳಲ್ಲಿ ಸ್ಕ್ರೀನಿಂಗ್, ಆರಂಭಿಕ ಗುರುತಿಸುವಿಕೆ, ಮಾತು ಮತ್ತು ಶ್ರವಣ ಸಮಸ್ಯೆೆ ಗುರುತಿಸುವಿಕೆ ಮತ್ತು ಶ್ರವಣೇಂದ್ರಿಿಯ ಚಿಕಿತ್ಸೆೆ ಮೇಲೆ ಗಮನ ಹರಿಸಲು ಸಹಕಾರಿಯಾಗಲಿದೆ ಎಂದರು.
ಸೆಂಟರ್ಗಳ ಸ್ಥಾಪನೆ:
ಸರ್ಕಾರಿ ವೈದ್ಯಕೀಯ ಕಾಲೇಜುಗಳು ಮತ್ತು ಆಯ್ದ ಜಿಲ್ಲಾ, ತಾಲೂಕಾ ಆಸ್ಪತ್ರೆೆಗಳ ಮೂಲಕ ಸಂಪರ್ಕ ಕೇಂದ್ರಗಳನ್ನು ಸ್ಥಾಾಪಿಸುವ ಮೂಲಕ ಈ ಕೇಂದ್ರಗಳು ಸ್ಕ್ರೀನಿಂಗ್, ಾಲೋ-ಅಪ್ ಮತ್ತು ಚಿಕಿತ್ಸಾಾ ಸೇವೆಗಳನ್ನು ಸುಗಮಗೊಳಿಸಲು ಅನುಕೂಲವಾಗುತ್ತದೆ. ಇವುಗಳು ಮೈಸೂರು ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆೆಗೆ ಸಂಪರ್ಕ ಹೊಂದಿದ ಸ್ಥಳೀಯ ತರಬೇತಿ ಕೇಂದ್ರಗಳಾಗಿ ಕಾರ್ಯನಿರ್ವಹಿಸುತ್ತದೆ.
ಕರ್ನಾಟಕದಲ್ಲಿ ರಾಜ್ಯ ಕಾಕ್ಲಿಿಯರ್ ಇಂಪ್ಲಾಾಂಟ್ ಕಾರ್ಯಕ್ರಮವನ್ನು ಬಲಪಡಿಸಲು ಮೈಸೂರಿನ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆೆ ತಾಂತ್ರಿಿಕ ಮಾರ್ಗದರ್ಶನ ನೀಡಬೇಕು. ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ನಡುವಿನ ಶೇ. 50:50ರ ವೆಚ್ಚ ಹಂಚಿಕೆ ಮೂಲಕ ಇದಕ್ಕೆೆ ಅನುವು ಮಾಡಿಕೊಡಬೇಕು ಎಂದರು.
ಉತ್ತರ ಕರ್ನಾಟಕದಲ್ಲಿ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆೆಸ್ಥಾಾಪನೆ:
ಪ್ರಾಾದೇಶಿಕ ಅಸಮಾನತೆಗಳನ್ನು ಪರಿಹರಿಸಲು ಉತ್ತರ ಕರ್ನಾಟಕದಲ್ಲಿ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆೆ ತರಹದ ಸಂಸ್ಥೆೆಯನ್ನು ಸ್ಥಾಾಪಿಸಲು ತಾತ್ವಿಿಕ ಅನುಮೋದನೆ ನೀಡಬೇಕು. ರಾಜ್ಯ ಸರ್ಕಾರವು ಭೂಮಿ ಮತ್ತು ಮೂಲಸೌಕರ್ಯಗಳನ್ನು ರಾಜ್ಯ ಸರ್ಕಾರ ಒದಗಿಸುತ್ತದೆ. ನುರಿತ ಮಾನವ ಸಂಪನ್ಮೂಲ ಮತ್ತು ತಾಂತ್ರಿಿಕ ಘಟಕಗಳಿಗೆ ಕೇಂದ್ರ ಸರ್ಕಾರದ ಬೆಂಬಲ ಬೇಕು. ಈ ಸಂಸ್ಥೆೆಯು ವಾಕ್ ಮತ್ತು ಶ್ರವಣ ವಿಜ್ಞಾನಗಳಲ್ಲಿ ತರಬೇತಿ, ಸೇವಾ ವಿತರಣೆ ಮತ್ತು ಸಂಶೋಧನೆಗಾಗಿಯೇ ಇರಬೇಕು. ಇದರಿಂದ ಮೈಸೂರಿನ ಕೇಂದ್ರದ ಮೇಲಿನ ಒತ್ತಡ ಕಡಿಮೆಯಾಗುತ್ತದೆ. ಆ ಭಾಗದಿಂದ ಮೈಸೂರಿಗೆ ಚಿಕಿತ್ಸೆೆಗೆ ಬರಬೇಕಾದವರಿಗೆ ಆಗುತ್ತಿಿರುವ ಸಮಸ್ಯೆೆಯೂ ತಪ್ಪುುತ್ತದೆ.
ಎನ್ಜಿಒಗಳ ಮೂಲಕ ತಾಯಿ ಮತ್ತು ಮಕ್ಕಳ ತರಬೇತಿ ಕೇಂದ್ರ ಸ್ಥಾಾಪನೆ:
ಕರ್ನಾಟಕ ಸರ್ಕಾರದ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಸಮನ್ವಯದೊಂದಿಗೆ ಎನ್ಜಿಒಗಳ ಬೆಂಬಲದೊಂದಿಗೆ ಜಿಲ್ಲಾ ಮಟ್ಟದಲ್ಲಿ ತಾಯಿ ಮತ್ತು ಮಕ್ಕಳ ತರಬೇತಿ ಕೇಂದ್ರಗಳನ್ನು ಸ್ಥಾಾಪಿಸುವುದು ಅಗತ್ಯವಾಗಿದೆ. ಈ ಕೇಂದ್ರಗಳು ಅಸ್ತಿಿತ್ವದಲ್ಲಿರುವ ರಾಜ್ಯ ಮತ್ತು ಕೇಂದ್ರ ಯೋಜನೆಗಳ ಮೂಲಕ ಎವಿಟಿ ಮತ್ತು ವಾಕ್ ಚಿಕಿತ್ಸೆೆ, ಪೋಷಕರ ಸಲಹೆ ಮತ್ತು ಶ್ರವಣ ಮತ್ತು ನರ ಬೆಳವಣಿಗೆಯ ಅಸ್ವಸ್ಥತೆ ಹೊಂದಿರುವ ಮಕ್ಕಳಿಗೆ ಆರೈಕೆದಾರರ ತರಬೇತಿ ಸೇರಿದಂತೆ ಆರಂಭಿಕ ಸೇವೆಗಳನ್ನು ಒದಗಿಸಲು ಅನುಕೂಲವಾಗುತ್ತದೆ ಎಂದು ಕೇಂದ್ರ ಸಚಿವರಿಗೆ ಹೇಳಿದರು.
ಇದಕ್ಕೆೆ ಪ್ರತಿಕ್ರಿಯಿಸಿದ ಕೇಂದ್ರ ಸಚಿವರು ರಾಜ್ಯ ಸರ್ಕಾರದಿಂದ ಯೋಜನೆಗಳ ಬಗ್ಗೆೆ ಪ್ರಸ್ತಾವನೆ ಕಳುಹಿಸಿಕೊಡಿ, ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.

