ಸುದ್ದಿಮೂಲ ವಾರ್ತೆ ಕವಿತಾಳ, ನ.03:
ಕೃಷಿಯೇತರ ಭೂಮಿಗಳಲ್ಲಿ ಹಲವು ವರ್ಷಗಳಿಂದ ಮನೆ ನಿರ್ಮಿಸಿಕೊಂಡು ವಾಸಿಸುವಂತವರಿಗೆ ಗ್ರಾಾಮೀಣ ಪ್ರದೇಶದಲ್ಲಿ 11 ಬಿ ಇ-ಸ್ವತ್ತು ಹಾಗೂ ನಗರ ಪ್ರದೇಶದಲ್ಲಿ 11 ಎ ಇ-ಸ್ವತ್ತು ಖಾತೆ ಪಡೆಯಲು ಸರಕಾರ ಅನುಕೂಲ ಕಲ್ಪಿಿಸಿದೆ. ಈ ಉದ್ದೇಶಕ್ಕಾಾಗಿ ಜನರ ಮನೆ ಬಾಗಿಲಿಗೆ ಇ-ಸ್ವತ್ತು ಯೋಜನೆ ರೂಪಿಸಿ 6ನೇ ಗ್ಯಾಾರಂಟಿ ಎಂದು ಘೋಷಿಸಿದೆ ಆದರೆ ಗ್ರಾಾಮ ಪಂಚಾಯ್ತಿಿ ಮತ್ತು ಪಟ್ಟಣ ಪಂಚಾಯತಿ ಅಧಿಕಾರಿಗಳು ಕ್ರಮಕ್ಕೆೆ ಮುಂದಾಗುತ್ತಿಿಲ್ಲ ಎಂದು ಅಖಿಲ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘದ ಮುಖಂಡರು ಆರೋಪಿಸಿದರು.
ಸಂಘಟನೆ ವತಿಯಿಂದ ಪಟ್ಟಣ ಪಂಚಾಯತಿ ಸಿಬ್ಬಂದಿ ಪ್ರಶಾಂತಕುಮಾರ ಅವರಿಗೆ ಮನವಿ ಸಲ್ಲಿಸಿ ಮಾತನಾಡಿದ ಮುಖಂಡರು ಪಟ್ಟಣದ ಜನತಾ ಕಾಲೋನಿಯಲ್ಲಿ 20 -30 ವರ್ಷಗಳಿಂದ ವಾಸಿಸುತ್ತಿಿರುವ ಕುಟುಂಬಗಳಿಗೆ ಇ-ಸ್ವತ್ತು ನೀಡುವಂತೆ ಆಗ್ರಹಿಸಿದರು.
ಇಲ್ಲಿ ವಾಸಿಸುವ ಕುಟುಂಬಗಳು ತಮ್ಮ ಮನೆಗಳಿಗೆ, ಜೋಪಡಿಗಳಿಗೆ ಅಧಿಕೃತ ದಾಖಲೆಗಳನ್ನು ಹೊಂದಿಲ್ಲ ಹೀಗಾಗಿ ತಕ್ಷಣ ಸರ್ವೆ ನಡೆಸಿ 11 ಎ ಖಾತಾ ನೀಡಬೇಕು ಮತ್ತು ಕುಡಿಯುವ ನೀರು, ರಸ್ತೆೆ, ಚರಂಡಿ, ಸೇರಿದಂತೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು ಎಂದು ಒತ್ತಾಾಯಿಸಿದರು.
ಸಂಘಟನೆ ಮುಖಂಡರಾದ ರಮೇಶ ಇರಬಗೇರ್, ಮೌನೇಶ ಬುಳ್ಳಪುರು, ಎಂ ಡಿ ಮೈಹಿಬುಬ್ ಸಾಬ್, ಬಸಲಿಂಗಪ್ಪ ನಗನೂರು, ಕೀರಪ್ಪ, ಹನುಮಂತ ಬುಳ್ಳಪುರು, ಹುಲಗಪ್ಪ ಕೊಳ್ಳಿಿ, ಹುಲ್ಲೇಶ ಕೆಳಗೇರಿ, ಕರಿಯಪ್ಪ ಬುಳ್ಳಪುರು, ಅಮರೇಶ ಬುಳ್ಳಪುರು ಹಾಗೂ ಇನ್ನಿಿತರರು ಇದ್ದರು.
ಕವಿತಾಳ : ಇ- ಸ್ವತ್ತು ನೀಡಲು ಮನವಿ

