ತುಮಕೂರು, ಜೂ 15 : ಶಾಲಾ ದಾಖಲಾತಿಯ ಅರ್ಜಿಯಲ್ಲಿ 2ಬಿ ಮುಸ್ಲಿಂ ಬದಲು ಪಿಂಜಾರ-ನದಾಫ್ ಎಂದು ದಾಖಲಿಸಬೇಕು ಎಂದು ತುಮಕೂರು ಜಿಲ್ಲಾ ಪಿಂಜಾರ – ನದಾಫ್ ಸಮುದಾಯದ ಜಿಲ್ಲಾಧ್ಯಕ್ಷ ಬಷೀರ್ ಅಹಮ್ಮದ್ ತಿಳಿಸಿದ್ದಾರೆ.
ಈ ಸಂಬಂಧ ರಾಜ್ಯ ಸರ್ಕಾರವು ಪ್ರವರ್ಗ-1 ರಡಿಯಲ್ಲಿ ಜಾತಿ ಪ್ರಮಾಣ ನೀಡಲು ಆದೇಶ ನೀಡಿದ್ದು,ಎಲ್ಲಾ ಸರ್ಕಾರಿ
ಕಛೇರಿಗಳಲ್ಲಿ ಜಾತಿ ಪ್ರಮಾಣ ಪತ್ರ ವಿತರಣೆ ಮಾಡುವ ಸಂದರ್ಭದಲ್ಲಿ ನಮ್ಮ ಸಮುದಾಯದವರಿಗೆ ಫಿಂಜಾರ/ನದಾಫ್ ಎಂದು ನಮೂದಾಗಿ ಬರುತ್ತಿದೆ. ಈ ಹಿನ್ನೆಲೆಯಲ್ಲಿ ಈ ಕೂಡಲೇ ಶಿಕ್ಷಣ
ಇಲಾಖೆ ತಿದ್ದುಪಡಿ ಮಾಡಿಕೊಂಡು ಶಾಲಾ ದಾಖಲಾತಿ ವಹಿಯಲ್ಲಿ ನಮ್ಮ ಸಮುದಾಯದವರ ಜಾತಿಯನ್ನು ಜಾತಿ ಪ್ರಮಾಣ ಪತ್ರದ ಆಧಾರದ ಮೇಲೆ ನಮೂದು ಮಾಡಿಕೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ಉಪಧ್ಯಾಕ್ಷ ಅಬ್ದುಲ್ ಲತೀಫ್, ನಿರ್ದೇಶಕ ಜಿಯಾವುಲ್ಲಾ, ಹಜರತ್ ಸಾಹೇಬ್ ನದಾಫ್, ನಜೀರ್ ಅಹಮ್ಮದ್, ಅಜೀಂ ಪಾಷ, ಉಮರ್,ಹುಸೇನ್, ವಾಹೀದ್, ಮುಬಾಷೀರ ಬಾನು, ನೂರುಲ್ಲ, ಹರ್ಷಾರಾಮ್ ಹಾಗೂ ಇತರರು ಉಪಸ್ಥಿತರಿದ್ದರು.