ಸುದ್ದಿಮೂಲ ವಾರ್ತೆ ರಾಯಚೂರು, ಜ.03:
ರಾಯಚೂರಿನ ಎಲ್ಬಿಎಸ್ ನಗರದಲ್ಲಿ ಕುಡಿಯುವ ನೀರಿನ ತೀವ್ರ ಸಮಸ್ಯೆೆ ನಿವಾರಿಸಲು ಪೈಪಲೈನ್ ಅಳವಡಿಸಲು ನಿವಾಸಿಗಳು ಆಗ್ರಹಿಸಿದ್ದಾಾರೆ.
ವಾರ್ಡ್ ನಂ. 29ರ ಎಲ್ಬಿಎಸ್ ನಗರದ ಯುವಕರು ಮಹಾನಗರ ಪಾಲಿಕೆಯ ಅಧಿಕಾರಿ ರಾಜು ಅವರ ಮೂಲಕ ಆಯುಕ್ತರಿಗೆ ಮನವಿ ಸಲ್ಲಿಸಿದರು. ಬಡಾವಣೆಯಲ್ಲಿ ಹಲವು ದಿನಗಳಿಂದ ಕುಡಿಯುವ ನೀರಿನ ತೀವ್ರ ಸಮಸ್ಯೆೆ ಎದುರಾಗಿದೆ. ಸಿದ್ದಪ್ಪ ಹೋಟೆಲ್ ಸುತ್ತಮುತ್ತಲಿನ ಓಣಿಗಳ ನಿವಾಸಿಗಳು ದಿನನಿತ್ಯ ಕುಡಿಯುವ ನೀರಿಗಾಗಿ ಪರದಾಡುವ ಪರಿಸ್ಥಿಿತಿ ನಿರ್ಮಾಣವಾಗಿದೆ ಎಂದು ದೂರಿದರು.
ಅಲ್ಲಂಪ್ರಭು ಕಾಲೋನಿಯಿಂದ ಹಳೆ ಸರ್ಕಾರಿ ಆಸ್ಪತ್ರೆೆಗೆ ಹೋಗುವ 60 ಅಡಿ ರಸ್ತೆೆಯಲ್ಲಿ ಈಗಾಗಲೇ 6 ಇಂಚಿನ ಮುಖ್ಯ ಕುಡಿಯುವ ನೀರಿನ ಪೈಪಲೈನ್ ಹಾದುಹೋಗಿದೆ. ಆದರೆ, ಲಕ್ಷ್ಮಿಿರೆಡ್ಡಿಿ ಅವರ ಮನೆ ಮುಂಭಾಗದಿಂದ ಬಸವರಾಜ ಅವರ ಮನೆವರೆಗೆ ಅಗತ್ಯವಿರುವ ಹೊಸ ಸಂಪರ್ಕ ಕಲ್ಪಿಿಸದ ಕಾರಣ ಸಿದ್ದಪ್ಪ ಹೋಟೆಲ್ ಬಡಾವಣೆಯ ನಿವಾಸಿಗಳಿಗೆ ಸಮರ್ಪಕವಾಗಿ ನೀರು ಪೂರೈಕೆ ಆಗುತ್ತಿಿಲ್ಲ.
ಈ ಪ್ರದೇಶದಲ್ಲಿ ಹೊಸದಾಗಿ ಪೈಪಲೈನ್ ಸಂಪರ್ಕ ಕಲ್ಪಿಿಸಿ ನೂರಾರು ಕುಟುಂಬಗಳಿಗೆ ಸಮರ್ಪಕ ಹಾಗೂ ನಿಯಮಿತ ಕುಡಿಯುವ ನೀರಿನ ವ್ಯವಸ್ಥೆೆ ಮಾಡಬೇಕು ನಿವಾಸಿಗಳು ಒತ್ತಾಾಯಿಸಿದ್ದಾರೆ.
ಈ ಸಂದರ್ಭದಲ್ಲಿ ಎಂ.ಡಿ. ಗೌಸ್ ಮುಲ್ಲಾ, ಮಹಾದೇವ, ಅಕೀಬ್ ಪಾಷಾ, ಯಾಜ್,ರಿಯಾಜ್, ನಾಗರಾಜ,ದಿಲೀಪ ,ಮಲ್ಲು ಇದ್ದರು.
ಸಿದ್ದಪ್ಪ ಹೋಟೆಲ್ ಓಣಿಯ ನಿವಾಸಿಗಳ ಆಗ್ರಹ ಎಲ್ಬಿಎಸ್ ನಗರದ ನೀರು ಸಮಸ್ಯೆ ನಿವಾರಿಸಲು ಪೈಪಲೈನ್ ಅಳವಡಿಸಿ

