ಸುದ್ದಿಮೂಲ ವಾರ್ತೆ ಬೆಂಗಳೂರು, ೆ.02:
ರಾಜ್ಯದಲ್ಲಿ ಕಾನೂನು ಹಾಗೂ ಸುವ್ಯವಸ್ಥೆೆ ಉತ್ತಮವಾಗಿದೆ. ಬಿಜೆಪಿ ಆಡಳಿತ ಇದ್ದ ವೇಳೆಗಿಂತ ಕಾನೂನು ಹಾಗೂ ಸುವ್ಯವಸ್ಥೆೆ ನಮ್ಮ ಸರ್ಕಾರದಲ್ಲಿ ಉತ್ತಮವಾಗಿದೆ ಎಂದು ಮುಖ್ಯಮಂತ್ರಿಿ ಉತ್ತರಿಸಿದರು.
ವಿಧಾನ ಪರಿಷತ್ನಲ್ಲಿ ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಗೆ ಅವರು ಉತ್ತರಿಸಿದರು.
ನಮ್ಮ ಸರ್ಕಾರದಲ್ಲಿ ಕಾನೂನು ಹಾಗೂ ಸುವ್ಯವಸ್ಥೆೆ ಚೆನ್ನಾಾಗಿಲ್ಲ ಎಂದು ವಿಪಕ್ಷಗಳು ಆರೋಪ ಮಾಡುತ್ತಿಿವೆ. ಆದರೆ ಇದು ಸುಳ್ಳು. ಕಾನೂನು ಸುವ್ಯವಸ್ಥೆೆ ಉತ್ತಮವಾಗಿವೆ. ಆದರೆ ಅಪರಾಧಗಳ ಸಂಖ್ಯೆೆ ಅಧಿಕವಾಗಿದೆ. ದುಷ್ಟ ಶಕ್ತಿಿಗಳನ್ನು ಮಟ್ಟ ಹಾಕಿ ರಾಜ್ಯದಲ್ಲಿ ಶಾಂತಿ ನೆಲೆಸುವಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಹೇಳಿದರು.
ಬಿಜೆಪಿ ಆಡಳಿತ ಕಾಲದಲ್ಲಿ ರಾಜ್ಯದ ಕಾನೂನು ಸುವ್ಯವಸ್ಥೆೆ ಅತಿಯಾಗಿ ಹಾಳಾಗಿತ್ತು. ಶಾಸಕರಿಗೆ ಜೀವ ಭಯ ಎದುರಾಗಿತ್ತು. ಆದರೆ ನಮ್ಮ ಆಡಳಿತದಲ್ಲಿ ಉತ್ತಮವಾಗಿದೆ. ಹೊಟ್ಟೆೆಕಿಚ್ಚಿಿಗೆ ವಿಪಕ್ಷಗಳು ಆರೋಪ ಮಾಡುತ್ತಿಿವೆ ಎಂದು ಹೇಳಿದರು.
ಅಂಕಿ ಅಂಶಗಳನ್ನು ನೋಡಿದರೆ ಬಿಜೆಪಿ ಆಡಳಿತದಲ್ಲೇ ಹೆಚ್ಚು ಅಪರಾಧಗಳು ನಡೆದಿವೆ. ನಮ್ಮ ಕಾಲದಲ್ಲಿ ಕಡಿಮೆ ಇದೆ. ಜನಸಂಖ್ಯೆೆ ಹೆಚ್ಚಳದಿಂದ ಅಪರಾಧಗಳ ಸಂಖ್ಯೆೆ ಕೂಡ ಹೆಚ್ಚಾಾಗುತ್ತಿಿದೆ ಎಂದರು.
ಪೊಲೀಸರಿಗೆ ಸೂಚನೆ: ಮೈಸೂರು ಹಾಗೂ ಬೆಂಗಳೂರಿನಲ್ಲಿ ಪತ್ತೆೆಯಾದ ಡ್ರಗ್ ಪ್ರಕರಣಕ್ಕೆೆ ಸಂಬಂಧಿಸಿದಂತೆ ಉನ್ನತ ಪೊಲೀಸ್ ಅಧಿಕಾರಿಗಳ ಸಭೆ ನಡೆಸಿ ಅವರಿಗೆ ಎಚ್ಚರಿಕೆ ನೀಡಲಾಗಿದೆ. ರಾಜ್ಯದಲ್ಲಿ ನಡೆಯುತ್ತಿಿರುವ ಡ್ರಗ್ ದಂಧೆಯನ್ನು ಮಹಾರಾಷ್ಟ್ರ ಪೊಲೀಸರು ಬಂದು ಪತ್ತೆೆ ಮಾಡುತ್ತಾಾರೆ. ನೀವು ಏನು ಮಾಡುತ್ತಿಿದ್ದೀರಿ ಎಂದು ಕೇಳಿದ್ದೇನೆ. ಮುಂದೆ ರಾಜ್ಯದಲ್ಲಿ ಡ್ರಗ್ ದಂಧೆ ನಿಲ್ಲಿಸುವಂತೆ ಸೂಚಿಸಿದ್ದೇನೆ ಎಂದು ಸದನಕ್ಕೆೆ ಉತ್ತರ ನೀಡಿದರು.
ವಿಧಾನ ಪರಿಷತ್ನಲ್ಲಿ ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಗೆ ಉತ್ತರಿಸಿದ ಸಿದ್ದರಾಮಯ್ಯ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಉತ್ತಮವಾಗಿದೆ

