ಸುದ್ದಿಮೂಲ ವಾರ್ತೆ ಬೆಂಗಳೂರು, ಡಿ.31
ಕಂದಾಯ ನ್ಯಾಾಯಾಲಯಗಳನ್ನು ಮೊದಲು ಜನಸ್ನೇಹಿಗೊಳಿಸುವ ನಿಟ್ಟಿಿನಲ್ಲಿ ರಾಜ್ಯದ ಕಂದಾಯ ನ್ಯಾಾಯಾಲಯಗಳನ್ನು ಆನ್ಲೈನ್ ಮೂಲಕವೂ ನಡೆಸುವಂತಹ ವ್ಯವಸ್ಥೆೆಯನ್ನು ನೂತನವಾಗಿ ಜಾರಿಗೆ ತರಲಾಗುತ್ತಿಿದೆ.
ಕಂದಾಯ ನ್ಯಾಾಯಾಲಯಗಳನ್ನು ಹೇಗೆ ನಡೆಸಬೇಕು ಎಂದು ಈ ಹಿಂದೆ ಯಾವುದೇ ಸ್ಪಷ್ಟ ನಿಯಮಗಳು ಇರಲಿಲ್ಲ. ಪರಿಣಾಮ ಉಪ ವಿಭಾಗಾಧಿಕಾರಿಗಳ ನ್ಯಾಾಯಾಲಯಗಳು ತಮ್ಮ ಅಧಿಕಾರ ವ್ಯಾಾಪ್ತಿಿ ಮೀರಿ ಅನೇಕ ಆದೇಶಗಳನ್ನು ಹೊರಡಿಸಿರುವ ಉದಾಹರಣೆಗಳು ಸಾಕಷ್ಟಿಿವೆ. ಹೀಗಾಗಿ ಕಂದಾಯ ನ್ಯಾಾಯಾಲಯಗಳನ್ನು ಮೊದಲು ಜನಸ್ನೇಹಿಗೊಳಿಸಬೇಕು ಹಾಗೂ ಇಲ್ಲಿನ ನ್ಯಾಾಯಿಕ ತೀರ್ಮಾನಗಳನ್ನು ಪಾರದರ್ಶಕಗೊಳಿಸಬೇಕು ಎಂಬ ಚರ್ಚೆ ಕಳೆದ ಎರಡು ವರ್ಷಗಳಿಂದ ನಿರಂತರವಾಗಿ ನಡೆಯುತ್ತಿಿತ್ತು. ಇಂತಹ ಗೊಂದಲಗಳಿಗೆ ಕಡಿವಾಣ ಹಾಕಿ ವ್ಯವಸ್ಥೆೆಯನ್ನು ಜನಸ್ನೇಹಿ ಮಾಡಲು ನ್ಯಾಾಯಾಲಯಗಳನ್ನು ಆನ್ಲೈನ್ ಮುಖಾಂತರ ನಡೆಸುವ ವ್ಯವಸ್ಥೆೆಯನ್ನೂ ನೂತನ ಕಾನೂನಿನ ಮೂಲಕ ತರಲಾಗುತ್ತಿಿದೆ.

