ಬಿ.ವೆಂಕಟಸಿಂಗ್ ಬೆಂಗಳೂರು, ಅ.14:
ರಾಜ್ಯ ಮಾಹಿತಿ ಆಯೋಗದಲ್ಲಿ ನನಗೆಗುದಿಗೆ ಬಿದ್ದಿರುವ ಪ್ರಕರಣಗಳನ್ನು ತ್ವರಿತವಾಗಿ ವಿಲೇವಾರಿ ಮಾಡುವುದರ ಜೊತೆಗೆ ಜನಸ್ನೇಹಿ ಮತ್ತು ಪಾರದರ್ಶಕತೆ ಕಾಯ್ದುಕೊಳ್ಳುವಂತೆ ರಾಜ್ಯಪಾಲ ಥಾವರ್ಚಂದ್ ಗೆಹ್ಲೋೋಟ್ ಸಲಹೆ ನೀಡಿದರು.
ಮಾಹಿತಿ ಹಕ್ಕು ಅಧಿನಿಯಮ-20 ವರ್ಷಗಳ ಪೂರೈಕೆ ಸಮಾರಂಭ ಉದ್ಘಾಾಟಿಸಿ ಮಾತನಾಡಿದರು.
ಮಾಹಿತಿ ಹಕ್ಕು ಕಾಯ್ದೆೆ ಪ್ರಜಾಪ್ರಭುತ್ವವನ್ನು ಮತ್ತಷ್ಟುಗಟ್ಟಿಿಗೊಳಿಸುವ ಸಾಧನವಾಗಿದ್ದು ಸಾರ್ವಜನಿಕರು ಮಾಹಿತಿಯನ್ನು ಪಡೆಯುವ ಹಕ್ಕು ಈ ಕಾಯ್ದೆೆಯಿಂದ ಪಡೆದಿದ್ದಾರೆ. ಹೀಗಾಗಿ ಆಯೋಗ ಸಾರ್ವಜನಿಕರಿಗೆ ಉತ್ತರದಾಯಿತ್ವವಾಗಿ ಇರಬೇಕು. ಇದು ಪ್ರಜಾಪ್ರಭುತ್ವದ ಗಟ್ಟಿಿಗೊಳಿಸುವ ಮತ್ತೊೊಂದು ಆಯಾಮ ಎಂದರು.
ಮಾಹಿತಿ ಕೋರಿದವರಿಗೆ ಸಕಾಲಕ್ಕೆೆ ಮಾಹಿತಿ ನೀಡಿದರೆ ಮಾತ್ರ ಆತನಿಗೆ ನ್ಯಾಾಯ ಒದಗಿಸಿದಂತಾಗುತ್ತದೆ. 500 ಕ್ಕೂ ಹೆಚ್ಚು ಪ್ರಕರಣಗಳು ಕಳೆದ 5 ವರ್ಷಗಳಿಂದ ನನೆಗುದಿಗೆ ಬಿದ್ದಿವೆ ಎಂಬ ವಿಷಯ ವಿಷಾಧನೀಯವಾಗಿದ್ದು ಮುಂಬರುವ ದಿನಗಳಲ್ಲಿ ತ್ವರಿತವಾಗಿ ವಿಚಾರಣೆ ನಡೆಸಿ ಸಕಾಲಕ್ಕೆೆ ಮಾಹಿತಿ ಒದಗಿಸಬೇಕು ಎಂದರು.
ಆಡಳಿತದ ಎಲ್ಲಾ ಹಂತಗಳಲ್ಲಿ ಮಾಹಿತಿ ತಂತ್ರಜ್ಞಾನದ ಬಳಕೆಯನ್ನು ಹೆಚ್ಚಿಿಸಿದರೆ ಪಾರದರ್ಶಕತೆ ಸ್ವಯಂಚಾಲಿತವಾಗಿ ಸ್ಥಾಾಪನೆಯಾಗುತ್ತದೆ ಎಂದ ಅವರು, ಮಾಹಿತಿ ಹಕ್ಕು ಪ್ರಕ್ರಿಿಯೆಯನ್ನು ಸಂಪೂರ್ಣವಾಗಿ ಡಿಜಿಟಲೀಕರಣಗೊಳಿಸುವುದು ಮತ್ತು ಸರಳಗೊಳಿಸುವುದು, ಮಾಹಿತಿ ಆಯೋಗಗಳ ಸ್ವಾಾತಂತ್ರ್ಯ ಮತ್ತು ಸಾಮರ್ಥ್ಯವನ್ನು ಹೆಚ್ಚಿಿಸುವುದು ಮತ್ತು ಎಲ್ಲಕ್ಕಿಿಂತ ಹೆಚ್ಚಾಾಗಿ, ಆಡಳಿತದಲ್ಲಿ ಪಾರದರ್ಶಕತೆಯನ್ನು ಕಾನೂನು ಬಾಧ್ಯತೆಯನ್ನಾಾಗಿ ಮಾಡದೆ ನೈತಿಕ ಸಂಸ್ಕತಿಯನ್ನಾಾಗಿ ಮಾಡುವುದು ಇಂದಿನ ಅಗತ್ಯವಾಗಿದೆ ಎಂದರು.
ಮಾಹಿತಿ ಹಕ್ಕು ಕಾಯ್ದೆೆಯು ಕೆಲವು ಸವಾಲುಗಳನ್ನು ಎದುರಿಸುತ್ತಿಿದೆ. ಕಾಯ್ದೆೆಯ ದುರುಪಯೋಗ, ಕಚೇರಿಗಳ ಮೇಲೆ ಹೆಚ್ಚುತ್ತಿಿರುವ ಹೊರೆ ಮತ್ತು ಸಾರ್ವಜನಿಕ ಅರಿವಿನ ಕೊರತೆ. ನಾವು ಮಾಹಿತಿ ಹಕ್ಕು ಕಾಯ್ದೆೆಯ ಶಕ್ತಿಿಯನ್ನು ಅರ್ಥಮಾಡಿಕೊಳ್ಳಬೇಕು. ಅದರ ದುರುಪಯೋಗವನ್ನು ತಡೆಯಬೇಕು ಮತ್ತು ಈ ಹಕ್ಕು ಪ್ರತಿಯೊಬ್ಬ ನಾಗರಿಕರಿಗೂ ಪರಿಣಾಮಕಾರಿಯಾಗಿ ತಲುಪುವಂತೆ ನೋಡಿಕೊಳ್ಳಬೇಕು. ಆಡಳಿತದ ಎಲ್ಲಾ ಹಂತಗಳಲ್ಲಿ ಮಾಹಿತಿ ತಂತ್ರಜ್ಞಾನದ ಬಳಕೆಯನ್ನು ಹೆಚ್ಚಿಿಸಬೇಕು.ಪ್ರತಿಯೊಬ್ಬ ನಾಗರಿಕನು ಮಾಹಿತಿ ಹಕ್ಕು ತನ್ನ ಹಕ್ಕು ಎಂದು ತಿಳಿಯುವಂತಾಗಬೇಕು ಎಂದರು.
2005’ ಪ್ರಜಾಪ್ರಭುತ್ವದ ಚೈತನ್ಯವನ್ನೇ ಸಬಲಗೊಳಿಸುವ ಮತ್ತು ಸರ್ಕಾರ ಮತ್ತು ನಾಗರಿಕರ ನಡುವೆ ಹೊಣೆಗಾರಿಕೆ, ಪಾರದರ್ಶಕತೆ ಮತ್ತು ನಂಬಿಕೆಗೆ ಅಡಿಪಾಯ ಹಾಕುವ ಜನರ ಹಕ್ಕಾಾಗಿದೆ. ಆರ್ಟಿಐ ಕಾಯ್ದೆೆಯು ಪ್ರಜಾಪ್ರಭುತ್ವವನ್ನು ಬಲಪಡಿಸುವಂತಹ ಕಾನೂನು ನಿಬಂಧನೆ ಮತ್ತು ಅಡಿಪಾಯ ಎರಡೂ ಆಗಿದೆ. ಇದು ನಾಗರಿಕರು ಮತ್ತು ಸರ್ಕಾರದ ನಡುವಿನ ಸೇತುವೆಯಾಗಿ ಕಾರ್ಯನಿರ್ವಹಿಸುತ್ತದೆ ಎಂದು ತಿಳಿಸಿದರು.
ಪ್ರಜಾಪ್ರಭುತ್ವದ ನಿಜವಾದ ಶಕ್ತಿಿ ಜನರಲ್ಲಿದೆ. ಸಾರ್ವಜನಿಕರು ಜಾಗೃತರಾಗಿದ್ದರೆ, ಆಡಳಿತವು ಸ್ವಯಂಚಾಲಿತವಾಗಿ ಜವಾಬ್ದಾಾರಿಯುತವಾಗುತ್ತದೆ. ಮಾಹಿತಿ ಹಕ್ಕು ಈ ಅರಿವಿನ ಮೂಲಾಧಾರವಾಗಿದೆ; ಇದು ನಾಗರಿಕರಿಗೆ ಅಧಿಕಾರ ನೀಡುತ್ತದೆ ಮತ್ತು ಆಡಳಿತವನ್ನು ಜವಾಬ್ದಾಾರಿಯುತವಾಗಿಸುತ್ತದೆ. ಕಳೆದ ಎರಡು ದಶಕಗಳಲ್ಲಿ, ಮಾಹಿತಿ ಹಕ್ಕು ಕಾಯ್ದೆೆಯು ಆಡಳಿತದ ಕಾರ್ಯನಿರ್ವಹಣೆಯಲ್ಲಿ ಗಮನಾರ್ಹ ಬದಲಾವಣೆಗಳನ್ನು ತಂದಿದೆ. ಹೆಚ್ಚಿಿದ ಪಾರದರ್ಶಕತೆ, ಭ್ರಷ್ಟಾಾಚಾರವನ್ನು ನಿಗ್ರಹಿಸುವುದು, ಸಾರ್ವಜನಿಕ ಭಾಗವಹಿಸುವಿಕೆಯನ್ನು ಬಲಪಡಿಸಿ ಆಡಳಿತ ಸುಧಾರಣೆ ತರಬೇಕಾಗಿದೆ ಎಂದರು.
ಆರಂಭದಲ್ಲಿ ಮಾಹಿತಿ ಆಯೋಗದ ಮುಖ್ಯ ಆಯುಕ್ತ ಆಷಿಸ್ ಮೋಹನ್ ಪ್ರಸಾದ್ ಮಾತನಾಡಿ ಸರ್ಕಾರದ ಆಡಳಿತ ಪಾರದರ್ಶಕಗೊಳಿಸುವುದು ಮತ್ತು ಜನರಿಗೆ ಬೇಕಾಗುವ ಮಾಹಿತಿಯನ್ನು ಸುಲಲಿತವಾಗಿ ಮತ್ತು ಸರಳವಾಗಿ ಒದಗಿಸುವುದು ತಮ್ಮ ಆದ್ಯ ಕರ್ತವ್ಯವಾಗಿದೆ. ಸಾರ್ವಜನಿಕರ ಅನುಕೂಲಕ್ಕಾಾಗಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಿಸಲಾಗಿದೆ ಎಂದರು.
ಪ್ರಸ್ತುತ 38 ಸಾವಿರ ಅರ್ಜಿಗಳು ಕಳೆದ ನಾಲ್ಕು ತಿಂಗಳ ಹಿಂದೆ ಬಾಕಿ ಇದ್ದು ಅವುಗಳ ತ್ವರಿತ ವಿಲೇವಾರಿಗೆ ಕ್ರಮ ಕೈಗೊಳ್ಳಲಾಗುತ್ತಿಿದ್ದು ಪ್ರತಿ ಆಯುಕ್ತರಿಗೆ ಇಂತಿಷ್ಟು ಗುರಿ ನಿಗದಿಪಡಿಸಲಾಗಿದೆ. ಮಾಹಿತಿ ಕೇಳುವವರು ಸಹ ಸಾರ್ವಜನಿಕರ ಹಿತದೃಷ್ಟಿಿಯಿಂದ ವೈಯುಕ್ತಿಿಕ ವಿಚಾರ ಮುಂದಿಟ್ಟುಕೊಂಡು ಮಾಹಿತಿ ಕೇಳುವುದರಿಂದ ಕಾಯಿದೆಗೆ ದುರುಪಯೋಗ ಮಾಡಿಕೊಂಡಂತೆ ಆಗುತ್ತದೆ ಎಂದರು.
ಕಲಬುರ್ಗಿ ಮತ್ತು ಬೆಳಗಾವಿ ಪೀಠಗಳು ಇದ್ದು, ಅಲ್ಲೂ ಸಹ ವಿಚಾರಣೆ ನಡೆಸುತ್ತಿಿದೆ ಎಂದ ಅವರು ಕರ್ನಾಟಕ ಮಾಹಿತಿ ಆಯೋಗ ಸಾಧ್ಯವಾದಷ್ಟು ಜನಸ್ನೇಹಿಯಾಗಿರಲು ಆದ್ಯತೆ ನೀಡುತ್ತದೆ ಎಂದರು.
ಶಾಸಕ ಎನ್.ಎ.ಹ್ಯಾಾರಿಸ್ ಮಾತನಾಡಿ, ಈ ಕಾಯ್ದೆೆ ಅತ್ಯುತ್ತಮವಾಗಿದೆ. ಆದರೆ ಕೆಲವರು ಇದನ್ನು ದುರುಪಯೋಗ ಮಾಡಿಕೊಳ್ಳುತ್ತಿಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿ, ಜನಮುಖಿಯಾದ ಈ ಕಾಯ್ದೆೆಯನ್ನು ಪಾರದರ್ಶಕವಾಗಿ ಬಳಸಿಕೊಂಡರೆ ಪ್ರಜಾಪ್ರಭುತ್ವ ಮತ್ತಷ್ಟು ಗಟ್ಟಿಿಗೊಳ್ಳುತ್ತದೆ. ಕೆಲವರು ಈ ಕಾಯ್ದೆೆಯನ್ನು ದುರುಪಯೋಗ ಮಾಡಿಕೊಳ್ಳುತ್ತಿಿದ್ದು ಅದನ್ನು ತಡೆಯಬೇಕಾಗಿದೆ. ಸರ್ಕಾರಿ ಕಚೇರಿಗಳಲ್ಲಿ ಕೆಲಸ ಮಾಡುವುದು ದುಸ್ಥಿಿರವಾಗಿದೆ ಎಂದು ಕಳವಳ ವ್ಯಕ್ತಪಡಿಸಿದ ಅವರು ಇಂತ ಅಡೆತಡೆಗಳಿಗೆ ಕಡಿವಾಣ ಹಾಕಲು ಕೆಲ ತಿದ್ದುಪಡಿಗಳು ಅವಶ್ಯ ಎಂದರು.
ಸರ್ಕಾರದ ಎಲ್ಲ ಮಾಹಿತಿ ಡಿಜಿಟಲೀಕರಣ ಮಾಡಿ ಆನ್ಲೈನ್ನಲ್ಲಿ ಒದಗಿಸಿದರೆ ಮಾಹಿತಿ ಕೋರಿ ಹೆಚ್ಚು ಅರ್ಜಿ ಬರುವುದಿಲ್ಲ. ಈ ದಿಸೆಯಲ್ಲಿ ಬಿಡಿಎ ಅಲ್ಲಿ ಎಲ್ಲ ಕಡತಗಳನ್ನು ಡಿಜಿಟಲೀಕರಣ ಮಾಡುವ ಕೆಲಸ ಪೂರ್ಣಗೊಳಿಸುತ್ತಿಿದ್ದು ನವೆಂಬರ್ 1ರಿಂದ ಸಾರ್ವಜನಿಕರು ತಮಗೆ ಬೇಕಾದ ಎಲ್ಲ ಮಾಹಿತಿಯನ್ನು ಪಡೆಯಬಹುದಾಗಿದೆ ಎಂದರು.
ಮಾಹಿತಿ ಅಯೋಗದ ಪ್ರಥಮ ಆಯುಕ್ತ ಹಾಗೂ ನಿವೃತ್ತ ಐಎಎಸ್ ಅಧಿಕಾರಿ ಕೆ.ಕೆ.ಮಿಶ್ರಾಾ ಕಳೆದ 20 ವರ್ಷಗಳ ಹಿಂದೆ ಕಾರ್ಯನಿರ್ವಹಿಸಿದ ಬಗ್ಗೆೆ ಮೆಲುಕು ಹಾಕಿ ಕಾಯಿದೆ ದುರುಪಯೋಗ ತಡೆಯಲು ಕೆಲ ತಿದ್ದುಪಡಿಗಳು ಅವಶ್ಯಕತೆ ಇದೆ. ಕೆಲವೊಬ್ಬರು ನೂರಕ್ಕಿಿಂತ ಹೆಚ್ಚು ಅರ್ಜಿಗಳನ್ನು ಹಾಕುತ್ತಿಿದ್ದು ಅದಕ್ಕಾಾಗಿ ಇಂತಿಷ್ಟೇ ಪ್ರಶ್ನೆೆಗಳನ್ನು ಹಾಕುವಂತ ನಿಯಮ ಜಾರಿಗೆ ತರುವುದು ಅಗತ್ಯತೆಯನ್ನು ಪ್ರತಿಪಾದಿಸಿದರು.
ಮಾಹಿತಿ ಆಯೋಗದ ಮಾಜಿ ಅಧ್ಯಕ್ಷ ಶೇಖರ್ ಸೃಜನ್ ಮಾತನಾಡಿ ಅಕ್ಟೋೋಬರ್ 12 2005ರಂದು ಈ ಕಾಯ್ದೆೆ ಜಾರಿಗೆ ಬಂದು ಅನೇಕ ಸುಧಾರಣೆಗೆ ಕಾರಣವಾಗಿದೆ. ಮಾಹಿತಿ ಹಕ್ಕು ಕಾಯ್ದೆೆಯಿಂದ ಆಡಳಿತದಲ್ಲಿ ಪಾರದರ್ಶಕತೆ ತರಲು ಸಹಕಾರಿಯಾಗಿದೆ ಎಂದರು.
ಕೆಲವೊಬ್ಬರು ಸ್ಥಳೀಯ ಸಂಸ್ಥೆೆಗಳಿಂದ ಪಡೆಯಬೇಕಾದ ಮಾಹಿತಿಯನ್ನು ಸರ್ಕಾರದ ಕಾರ್ಯದರ್ಶಿಗಳ ಮಟ್ಟದಲ್ಲಿ ಕೇಳುತ್ತಿಿದ್ದಾರೆ. ಇದರಿಂದ ತಕ್ಷಣಕ್ಕೆೆ ಮಾಹಿತಿ ಒದಗಿಸಲು ಕಷ್ಟವಾಗುತ್ತದೆ. ಮೇಲ್ಮನವಿಯನ್ನು 90 ದಿನದಲ್ಲಿ ನೀಡಬೇಕು ಎಂಬ ನಿಯಮ ಇದ್ದು ಅದನ್ನು ಪಾಲಿಸಬೇಕಾಗಿದೆ ಎಂದರು.
ಕಾತ್ಯಾಾಯಿನಿ ಚಾಮರಾಜು ಮಾತನಾಡಿ, ಸರ್ಕಾರದ ಕೆಲ ಇಲಾಖೆಗಳಲ್ಲಿ ಸಾರ್ವಜನಿಕರಿಗೆ ಸಿಗಬೇಕಾದ ಮಾಹಿತಿಯನ್ನು ತಮ್ಮ ಜಾಲತಾಣಗಳಲ್ಲಿ ಪ್ರಕಟಿಸಿಲ್ಲ. ಮತ್ತು ತಮ್ಮ ಇಲಾಖೆಗೆ ಸಂಬಂಧಪಟ್ಟಂತ ಕಾರ್ಯವಿಧಾನಗಳು ಅನುದಾನದ ಮಾಹಿತಿ, ಯೋಜನೆಗಳ ವಿವರ ಪ್ರಕಟಿಸುತ್ತಿಿಲ್ಲ ಇದು ಸಾರ್ವಜನಿಕರಿಗೆ ಮಾಹಿತಿ ಹಕ್ಕನ್ನು ನೀಡುವುದರ ಉಲ್ಲಂಘನೆಯಾಗುತ್ತಿಿದ್ದು, ಈ ಬಗ್ಗೆೆ ಸರ್ಕಾರದ ಎಲ್ಲ ಇಲಾಖೆಗಳಲ್ಲಿ ಕಾಯ್ದೆೆ ಅನ್ವಯ ಸಿಗಬೇಕಾದ ಎಲ್ಲ ಮಾಹಿತಿಯನ್ನು ಆನ್ಲೈನ್ ಮತ್ತು ಡಿಜಿಟಲ್ನಲ್ಲಿ ಸಿಗುವಂತಾಗಬೇಕು ಎಂದರು.
ಆರಂಭದಲ್ಲಿ ರಾಜ್ಯ ಮಾಹಿತಿ ಆಯುಕ್ತ ರಾಮನ್ ಸ್ವಾಾಗತಿಸಿದರು. ರಾಜ್ಯ ಮಾಹಿತಿ ಆಯುಕ್ತರಾದ ರುದ್ರಣ್ಣ ಹರ್ತಿಕೋಟೆ, ಡಾ. ಹರೀಶ್ ಕುಮಾರ್, ಡಾ.ಮಮತಾ. ರಾಜಶೇಖರ್, ಕಾರ್ಯದರ್ಶಿ ಸುಶ್ಮಾಾ ಗೊಡುಬಾಳೆ ಉಪಸ್ಥಿಿತರಿದ್ದರು. ಕೊನೆಯಲ್ಲಿ ಆಯುಕ್ತರಾದ ಬದ್ರುದ್ದೀನ್ ವಂದಿಸಿದರು.