ಸುದ್ದಿಮೂಲ ವಾರ್ತೆ ರಾಯಚೂರು, ಜ.04:
ರಾಯಚೂರಿನ ರಾಜೀವಗಾಂಧಿ ಸೂಪರ್ ಸ್ಪೆೆಷಾಲಿಟಿ ಆಸ್ಪತ್ರೆೆಯ ಆವರಣದಲ್ಲಿ ಕಿದ್ವಾಾಯಿ ೆರಿೆರಲ್ ಕ್ಯಾಾನ್ಸರ್ ಚಿಕಿತ್ಸಾಾ ಘಟಕ ನಿರ್ಮಿಸುವ ಅಂದಾಜು ಮೊತ್ತ 20 ಕೋ.ರೂ ಮೊತ್ತದ ಕಟ್ಟಡ ಕಾಮಗಾರಿಗೆ ಸಚಿವ ಡಾ.ಶರಣಪ್ರಕಾಶ ಪಾಟೀಲ ಹಾಗೂ ಎನ್ ಎಸ್ ಬೋಸರಾಜು ಅವರು ನಗರದ ರಾಜೀವಗಾಂಧಿ ಸೂಪರ್ ಸ್ಪೆೆಷಾಲಿಟಿ ಆಸ್ಪತ್ರೆೆಯ ಆವರಣದಲ್ಲಿ ಶಂಕುಸ್ಥಾಾಪನೆ ನೆರವೇರಿಸಿದರು.
ಜಿಲ್ಲಾಡಳಿತ ಮತ್ತು ಕಲ್ಯಾಾಣ ಕರ್ನಾಟಕ ಪ್ರದೇಶಾಭಿವೃದ್ಧಿಿ ಮಂಡಳಿ ಮತ್ತು ರಿಮ್ಸ್ ಇವರ ಸಹಯೋಗದಲ್ಲಿ ನಗರದ ರಾಜೀವಗಾಂಧಿ ಸೂಪರ್ ಸ್ಪೆೆಷಾಲಿಟಿ ಆಸ್ಪತ್ರೆೆಯ ಆವರಣದಲ್ಲಿ ಜನವರಿ 4ರಂದು ನಡೆದ ಕಾರ್ಯಕ್ರಮದಲ್ಲಿ, ಅಂದಾಜು ಮೊತ್ತ 4.5 ಕೋ.ರೂ .ಗಳ ವೆಚ್ಚದಲ್ಲಿ ರಾಯಚೂರು ನಗರದ ರಿಮ್ಸ್ ಸಂಸ್ಥೆೆಯ ಆವರಣದಲ್ಲಿ ನಿರ್ಮಾಣಗೊಂಡ ಬಿ.ಎಸ್ಸಿಿ. ನರ್ಸಿಂಗ್ ವಿದ್ಯಾಾರ್ಥಿನಿಯರ ವಸತಿ ನಿಲಯ ಕಟ್ಟಡ ಸಹ ಇದೆ ವೇಳೆ ಸಚಿವರು ಉದ್ಘಾಾಟಿಸಿದರು.
ಈ ವೇಳೆ ಸಚಿವ ಎನ್ ಎಸ್ ಬೋಸರಾಜು ಮಾತನಾಡಿ, ಈ ಕೇಂದ್ರವು ರಾಯಚೂರಲ್ಲಿ ಆಗಬೇಕು ಎಂಬುದು ನಮ್ಮ ಬಹುದಿನಗಳ ಅಪೇಕ್ಷೆಯಾಗಿತ್ತು. ಆ ಕನಸು ಈಗ ಸಾಕಾರವಾಗಿದೆ. ಡಾ.ಶರಣಪ್ರಕಾಶ ಪಾಟೀಲ ಅವರು ವೈದ್ಯಕೀಯ ಇಲಾಖೆಯ ಸಚಿವರಾಗಿದ್ದರಿಂದಾಗಿ ನಮ್ಮಲ್ಲಿ ಈ ಹೊಸ ಕಟ್ಟಡ ನಿರ್ಮಾಣ ಕಾರ್ಯ ಆರಂಭವಾಗುತ್ತಿಿದೆ ಎಂದು ತಿಳಿಸಿದರು.
ಸಚಿವ ಡಾ.ಶರಣಪ್ರಕಾಶ ಪಾಟೀಲ ಮಾತನಾಡಿ, ರಾಯಚೂರಿನ ಒಪೆಕ್ ಆಸ್ಪತ್ರೆೆ ಎಲ್ಲ ವಿಭಾಗಗಳು ಉತ್ತಮವಾಗಿದೆ ಕಾರ್ಯನಿರ್ವಹಿಸುತ್ತಿಿವೆ. ಇದರಿಂದಾಗಿ ಜಿಲ್ಲೆಯ ಜನತೆಗೆ ಸಾಕಷ್ಟು ಅನುಕೂಲವಾಗಿದೆ ಎಂದರು.
ರಾಯಚೂರಿಗೆ ಟ್ರಾಾಮಾ ಕೇರ್ ಸೆಂಟರ್ ನಿರ್ಮಾಣ ಹಾಗೂ ಕ್ಯಾಾನ್ಸರ್ ಆಸ್ಪತ್ರೆೆ ನಿರ್ಮಾಣದ ಬಗ್ಗೆೆ ಬಜೆಟ್ ನಲ್ಲಿ ಘೋಷಣೆ ಮಾಡಲಾಗಿತ್ತು. ಈಗಾಗಲೇ ಟ್ರಾಾಮಾ ಸೆಂಟರ್ ನಿರ್ಮಾಣವಾಗಿದೆ. ಇದೀಗ ಮೊದಲನೇ ಹಂತದಲ್ಲಿ 20 ಕೋಟಿ ರೂ ವೆಚ್ಚದಲ್ಲಿ ಕ್ಯಾಾನ್ಸರ್ ಆಸ್ಪತ್ರೆೆ ನಿರ್ಮಾಣ ಕಾರ್ಯ ನಡೆಯುತ್ತಿಿದೆ. ಈಗಾಗಲೇ ಒಪೆಕ್ ಆಸ್ಪತ್ರೆೆ ಆವರಣದಲ್ಲಿನ ಎಲ್ಲ ರಸ್ತೆೆಗಳನ್ನು ಸರಿಪಡಿಸಲಾಗಿದೆ. ಇಂತಹ ಅಭಿವೃದ್ದಿ ಕಾರ್ಯಗಳು ನಿರಂತರ ನಡೆಯುತ್ತಿಿವೆ ಎಂದು ತಿಳಿಸಿದರು.
ಬಡ ಮಕ್ಕಳಿಗೆ ಸಹ ವೈದ್ಯಕೀಯ ಶಿಕ್ಷಣ ಸಿಗಬೇಕು ಎಂದು ಆಲೋಚಿಸಿ ನಾವು ಈಗಾಗಲೇ ರಾಜ್ಯದಲ್ಲಿ 22 ಸರ್ಕಾರಿ ಮೆಡಿಕಲ್ ಕಾಲೇಜ್ ಸ್ಥಾಾಪನೆ ಮಾಡಿದ್ದೇವೆ. ಈ ಬಾರಿಯ ಬಜೆಟನಲ್ಲಿ ಮತ್ತೆೆ 3 ಮೆಡಿಕಲ್ ಕಾಲೇಜ್ ನಿರ್ಮಾಣದ ಘೋಷಣೆ ಮಾಡಿದ್ದೇವೆ ಎಂದರು.
ಯುನಿವರ್ಸಲ್ ಹೆಲ್ತ್ ಕವರೇಜ್ ದೂರದೃಷ್ಟಿಿಯ ವಿಚಾರದಡಿಯಲ್ಲಿ ನಾವು ರಾಜ್ಯದ ಪ್ರತಿ ಜಿಲ್ಲೆಯಲ್ಲಿ ಕ್ಯಾಾನ್ಸರ್ ಆಸ್ಪತ್ರೆೆ, ಸೂಪರ್ ಸ್ಪೆೆಷಾಲಿಟಿ ಆಸ್ಪತ್ರೆೆ ನಿರ್ಮಾಣದಂತ ಕಾರ್ಯ ಯೋಜನೆ ಹೊಂದಿದ್ದೇವೆ ಎಂದು ಸಚಿವರು ತಿಳಿಸಿದರು.
ಅಜೀಂ ಪ್ರೇೇಮ್ಜಿ ಅವರ ಸಹಯೋಗದಲ್ಲಿ ಒಂದು ವಿಶೇಷ ಆಸ್ಪತ್ರೆೆಯನ್ನು ಮುಂದಿನ ಮೂರು ವರ್ಷದೊಳಗೆ ನಿರ್ಮಾಣ ಮಾಡಲು ಯೋಜಿಸಲಾಗಿದೆ. ರಾಜ್ಯ ಸರ್ಕಾರವು ಆರೋಗ್ಯ ಕ್ಷೇತ್ರಕ್ಕೆೆ ವಿಶೇಷ ಒತ್ತು ನೀಡಿದೆ. ಜನತೆ ಆರೋಗ್ಯ ಯೋಜನೆಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ರಾಯಚೂರು ಜಿಲ್ಲೆಯ ಜನತೆಯಲ್ಲಿ ಸಚಿವರು ಮನವಿ ಮಾಡಿದರು.
ಸಮಾರಂಭದಲ್ಲಿ ಶಾಸಕರಾದ ಬಸನಗೌಡ ದದ್ದಲ್, ಎ ವಸಂತಕುಮಾರ, ಮುಖಂಡರಾದ ಪವನ ಕಿಶೋರ ಪಾಟೀಲ, ಜಿಲ್ಲಾಧಿಕಾರಿ ನಿತೀಶ್ ಕೆ., ಎಸ್ಪಿಿ ಅರುಣಾಂಕ್ಷು ಗಿರಿ, ಕಿದ್ವಾಾಯಿ ಸ್ಮಾಾರಕ ಗ್ರಂಥಿ ಸಂಸ್ಥೆೆಯ ನಿರ್ದೇಶಕ ಡಾ.ನವೀನ್ ಟಿ., ರಾಯಚೂರು ವೈದ್ಯಕೀಯ ವಿಜ್ಞಾನಗಳ ಸಂಸ್ಥೆೆಯ ರಿಮ್ಸ್ ನಿರ್ದೇಶಕ ಡಾ.ರಮೇಶ ಬಿ ಎಚ್., ರಾಜೀವಗಾಂಧಿ ಸೂಪರ್ ಸ್ಪೆೆಷಾಲಿಟಿ ಆಸ್ಪತ್ರೆೆಯ ನಿರ್ದೇಶಕ ಡಾ.ರಮೇಶ ಸಿ ಸಾಗರ, ರಿಮ್ಸ್ ನ ಮುಖ್ಯ ಆಡಳಿತಾಧಿಕಾರಿ ಡಾ.ಗುರುಸಿದ್ದಯ್ಯ, ಆರ್ಥಿಕ ಅಧಿಕಾರಿ ಚನ್ನಮ್ಮ, ಡಿಎಚ್ಓ ಡಾ.ಸುರೇಂದ್ರಬಾಬು ಹಾಗು ಇತರರು ಇದ್ದರು. ಡಾ.ದಂಡಪ್ಪ ಬಿರಾದಾರ ನಿರೂಪಿಸಿದರು. ಡಾ.ಡಾ.ಡಿ.ಮಂಡೋಲಿಕರ ವಂದಿಸಿದರು.
ರಿಮ್ಸ್ ಬಿಎಸ್ಸಿಿ ನರ್ಸಿಂಗ್ ವಿದ್ಯಾಾರ್ಥಿನಿಯರ ವಸತಿ ನಿಲಯ ಕಟ್ಟಡದ ಲೋಕಾರ್ಪಣೆ ಕಿದ್ವಾಾಯಿ ಪೆರಿೆರಲ್ ಕ್ಯಾಾನ್ಸರ್ ಚಿಕಿತ್ಸಾಾ ಘಟಕದ ಕಟ್ಟಡ ಕಾಮಗಾರಿಗೆ ಸಚಿವರಿಂದ ಶಂಕುಸ್ಥಾಾಪನೆ

