ಮೈಸೂರು, ಆ.26: ಜಿಲ್ಲೆಯ ಟಿ.ನರಸೀಪುರ ತಾಲೂಕು ಕುರುಬೂರು ಗ್ರಾಮದ ಬಳಿ ರೈತಪರ ಚಿಂತಕ ಮುಖಂಡ ಕೆ.ಜಿ.ನಾಗರಾಜು ಅವರು ರಸ್ತೆ ಅಪಘಾತದಲ್ಲಿ ಶನಿವಾರ ಮೃತಪಟ್ಟರು.
ಇದಕ್ಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ನಿರ್ಲಕ್ಷತನ ಕಾರಣ ಸಂಬಂಧಪಟ್ಟ ಅಧಿಕಾರಿಯ ವಿರುದ್ಧ ಕ್ರಿಮಿನಲ್ ಮುಖದಮೆ ದಾಖಲಿಸಬೇಕು ಎಂದು ರೈತರು ಶವವನ್ನು ಇಟ್ಟುಕೊಂಡು ರಸ್ತೆಯಲ್ಲಿ ಪ್ರತಿಭಟನೆ ನಡೆಸಿದರು.
ನೂರಾರು ಮಂದಿ ಘೋಷಣೆಗಳನ್ನು ಕೂಗುತ್ತಾ ರಾಷ್ಟ್ರೀಯ ಹೆದ್ದಾರಿಯಲ್ಲಿ ಪದೇಪದೇ ಅಪಘಾತ ಆಗಿ ಹಲವಾರು ಜನ ಸಾಯುತ್ತಿದ್ದರೂ ಸಹ ಸಂಬಂಧಪಟ್ಟ ಇಲಾಖೆಯವರು ನಿರ್ಲಕ್ಷ್ಯ ತೋರುತ್ತಿದ್ದಾರೆ. ಇಂಥ ಅಧಿಕಾರಿಗಳಿಗೆ ಪಾಠ ಕಲಿಸುವ ಹೋರಾಟ ನಡೆಸಬೇಕಾಗುತ್ತದೆ. ಇವರ ನಿರ್ಲಕ್ಷಿತನಾಗಿದ್ದ ನಮ್ಮ ಊರಿನ ಒಬ್ಬ ರೈತ ಮುಖಂಡರನ್ನು ಕಳೆದುಕೊಂಡಾಯಿತು ಎಂದು ಖಂಡಿಸಿದರು.
ಮೃತರ ಕುಟುಂಬಕ್ಕೆ ಸರ್ಕಾರ ಕೂಡಲೇ 10 ಲಕ್ಷ ರೂ ಪರಿಹಾರ ನೀಡಬೇಕು ಅಪಘಾತಕ್ಕೆ ಒಳಗಾಗಿರುವ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕೆ ಎನ್ ರಾಜೇಶ್ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸಬೇಕು ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಕುರುಬೂರ್ ಶಾಂತಕುಮಾರ್ ಒತ್ತಾಯಿಸಿದ್ದಾರೆ