ಸುದ್ದಿಮೂಲ ವಾರ್ತೆ ರಾಯಚೂರು, ಜ.21:
ವಿದ್ಯಾಾವಂತ ಯುವಕರು ಸೇರಿ ಎಲ್ಲರೂ ಸಂಚಾರ ನಿಯಮ ಪಾಲಿಸುವುದನ್ನು ಕಾನೂನು ಭೀತಿಯಿಂದಲ್ಲ, ಸಾಮಾಜಿಕ ಜವಾಬ್ದಾಾರಿಯಿಂದ ಅಳವಡಿಸಿಕೊಳ್ಳಬೇಕು ಎಂದು ಕಾನೂನು ಸೇವಾ ಪ್ರಾಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ನ್ಯಾಾಯಾಧೀಶರಾದ ಹೆಚ್.ಎ.ಸಾತ್ವಿಿಕ್ ತಿಳಿಸಿದರು.
ನಗರದ ಪೂರ್ಣಿಮಾ ಪಿಯು ಹಾಗೂ ವೇದಾಂತ ಪದವಿ ಕಾಲೇಜಿನಲ್ಲಿ ಸಂಚಾರಿ ಪೊಲೀಸ್ ಠಾಣೆ ರಾಯಚೂರು ವತಿಯಿಂದ ಹಮ್ಮಿಿಕೊಂಡಿದ್ದ ರಸ್ತೆೆ ಸುರಕ್ಷಾ ಸಪ್ತಾಾಹ ಮಾಸಚರಣೆ ಕಾರ್ಯಕ್ರಮ ಉದ್ಘಾಾಟಿಸಿ ಮಾತನಾಡಿದರು. ರಸ್ತೆೆಗಳು ಕೇವಲ ಸಂಚಾರದ ಮಾರ್ಗಗಳಲ್ಲ, ಅವು ಮಾನವ ಜೀವಗಳ ಹೊಣೆಗಾರಿಕೆ ಹೊತ್ತಿಿವೆ. ಒಂದು ಕ್ಷಣದ ಅಜಾಗರೂಕತೆ ಜೀವನಪೂರ್ತಿ ಶಿಕ್ಷೆಯಾಗಬಹುದು. ಕಾನೂನು ಉಲ್ಲಂಘನೆಗೆ ದಂಡವಿದೆ, ಆದರೆ ನಿಯಮ ಪಾಲನೆಗೆ ಜೀವ ರಕ್ಷಣೆ ಎಂಬ ಬಹುಮಾನವಿದೆ. ಹಾಗಾಗಿ, ರಸ್ತೆೆ ಸುರಕ್ಷೆ ಸರ್ಕಾರದ ಕರ್ತವ್ಯ ಮಾತ್ರವಲ್ಲ, ಜನಸಾಮಾನ್ಯರ ಸಹಭಾಗಿತ್ವದಿಂದಲೇ ಸಾಧ್ಯ. ಅಪಘಾತದಲ್ಲಿ ಜೀವ ಕಳೆದುಕೊಂಡಂತವರು ಆ ಕುಟುಂಬಕ್ಕೆೆ ಆಸ್ತಿಿಯಾಗಿರುತ್ತಾಾರೆ ಹಾಗಾಗಿ ರಸ್ತೆೆ ನಿಯಮ ಪಾಲಿಸಿ ಎಂದು ಸಲಹೆ ನೀಡಿದರು.
ನಗರ ಸಂಚಾರಿ ಠಾಣೆಯ ಪಿಎಸ್ಐ ಸಣ್ಣ ಈರೇಶ್ ಮಾತನಾಡಿ ಭಾರತದಲ್ಲಿ ಪ್ರತಿವರ್ಷ ಜನವರಿ ತಿಂಗಳಿನಲ್ಲಿ ರಾಷ್ಟ್ರೀಯ ರಸ್ತೆೆ ಸುರಕ್ಷತಾ ಸಪ್ತಾಾಹ ಆಚರಿಸಲಾಗುತ್ತದೆ. ರಸ್ತೆೆ ಅಪಘಾತ ತಡೆಗಟ್ಟಲು ಮತ್ತು ಸಂಚಾರ ನಿಯಮಗಳ ಬಗ್ಗೆೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು ಇದರ ಮುಖ್ಯ ಉದ್ದೇಶ ಎಂದರು.
ಕಾಲೇಜಿನ ಆಡಳಿತ ಅಧಿಕಾರಿ ರಾಕೇಶ್ ರಾಜಲಬಂಡಿ, ಪ್ರಾಾಚಾರ್ಯ ವಂಶಿ ಕೃಷ್ಣ , ಹಿರಿಯ ಪೇದೆಯಾದ ಈರಣ್ಣ ಜಾದವ್, ವಿದ್ಯಾಾರ್ಥಿ ನಾಯಕ ಶುಭಂ ಶರ್ಮ ಸೇರಿದಂತೆ ಉಪನ್ಯಾಾಸಕರು, ವಿದ್ಯಾಾರ್ಥಿಗಳು ಉಪಸ್ಥಿಿತರಿದ್ದರು.
ರಸ್ತೆ ಸುರಕ್ಷತಾ ಸಪ್ತಾಹ ಮಾಸಾಚರಣೆ ರಸ್ತೆ ಸುರಕ್ಷತೆಯ ನಿಯಮ ಭೀತಿಯಿಂದಲ್ಲ, ಜವಾಬ್ದಾರಿಯಿಂದ ಪಾಲಿಸಿ – ನ್ಯಾ.ಸಾತ್ವಿಕ್

