ಸುದ್ದಿಮೂಲ ವಾರ್ತೆ ಸಿಂಧನೂರು, ಡಿ.15:
ತಾಲೂಕಿನ ಅಲಬನೂರ ಗ್ರಾಾಮ ಪಂಚಾಯತಿ ವ್ಯಾಾಪ್ತಿಿಯ ಕನ್ನಾಾರಿ ಗ್ರಾಾಮದ ನಾಲಾ ಹೂಳೆತ್ತುವ ಕಾಮಗಾರಿ ಸ್ಥಳದಲ್ಲಿ ನರೇಗಾ ಯೋಜನೆಯ ಕೂಲಿ ಕಾರ್ಮಿಕರೊಂದಿಗೆ ರೋಜ್ಗಾಾರ್ ದಿವಸ ಆಚರಣೆ ಮಾಡಲಾಯಿತು.
ಐಇಸಿ ಸಂಯೋಜಕ ಥಾಮಸ್ ಮಾತನಾಡಿ, ತಾಲೂಕ ಸದರಿ ಸಂದರ್ಭದಲ್ಲಿ ಎನ್ಎಂಎಂಎಸ್ ತಂತ್ರಾಾಂಶದಲ್ಲಿ ಕಡ್ಡಾಾಯವಾಗಿ ಎರಡು ಬಾರಿ ಹಾಜರಾತಿ ದಾಖಲಿಸುವ ಕುರಿತು ಮಾಹಿತಿ ನೀಡಲಾಯಿತು. ನರೇಗಾ ಯೋಜನೆಯಡಿ ದಿನದ ಕೂಲಿ ದರ 370 ರೂ.ಗೆ ಹೆಚ್ಚಳ ಮಾಡಿ, ಅದೇಶ ಹೊರಡಿಸಿ, ಸರ್ಕಾರ ಕೂಲಿಕಾರರಿಗೆ ಸಿಹಿ ಸುದ್ದಿ ನೀಡಿದೆ. ಸೀ ಚೇತನ ಅಭಿಯಾನದಡಿ ಗಂಡು ಮತ್ತು ಹೆಣ್ಣಿಿಗೆ 370 ರೂ.ಗಳ ಸಮಾನ ಕೂಲಿ ಇದ್ದು, ಗ್ರಾಾಮೀಣ ಪ್ರದೇಶದ ಪ್ರತಿ ಅರ್ಹ ಕುಟುಂಬಕ್ಕೂ ಒಂದು ಅರ್ಥಿಕ ವರ್ಷದಲ್ಲಿ 100 ದಿನ ಕೆಲಸ ಕೊಡಲಾಗುತ್ತದೆ. ಒಂದು ಕುಟುಂಬ ವರ್ಷದಲ್ಲಿ ನೂರು ದಿನ ಕೆಲಸ ಮಾಡಿದರೆ 37 ಸಾವಿರ ರೂ.ಗಳ ಕೂಲಿ ಹಣ ಪಡೆದುಕೊಳ್ಳಬಹುದಾಗಿದೆ ಎಂದರು.
ಪ್ರಧಾನ ಮಂತ್ರಿಿ ಭೀಮಾ ಸುರಕ್ಷಾ ಯೋಜನೆ ಮತ್ತು ಪ್ರಧಾನ ಮಂತ್ರಿಿ ಜೀವನ್ ಜ್ಯೋೋತಿ ಯೋಜನೆ ಬಗ್ಗೆೆ ಮಾಹಿತಿ ನೀಡಿದರು. ಸಾಮಾಜಿಕ ಭದ್ರತೆ ಕಲ್ಪಿಿಸಲು ಯೋಜನೆಯಡಿ 65 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು, ವಿಶೇಷ ಚೇತನರು ಹಾಗೂ ಗರ್ಭಿಣಿಯರಿಗೆ ಶೇಕಡಾ 50% ಕೆಲಸ ಮಾಡಿದರೂ ಪೂರ್ತಿ ಪ್ರಮಾಣದ ಕೂಲಿ ನೀಡಲಾಗುತ್ತದೆ. 3 ವರ್ಷದೊಳಗಿನ ಮಕ್ಕಳನ್ನು ಶಿಶು ಪಾಲನಾ ಕೇಂದ್ರದಲ್ಲಿ ಬಿಟ್ಟು ಬರಬೇಕು. 18 ವರ್ಷದೊಳಗಿನ ಮಕ್ಕಳನ್ನು ಕೆಲಸಕ್ಕೆೆ ಕರೆದುಕೊಂಡು ಬರಬಾರದು ಎಂದು ಮಾಹಿತಿ ನೀಡಿದರು.
ರಾಜೀವ್ ಗಾಂಧಿ ೆಲೋ ಧನ್ಯ ಪ್ರಭು, ಗ್ರಾಾ.ಪಂ. ಡಿ.ಇ.ಓ, ಶರಣಪ್ಪ, ಕೂಲಿ ಕಾರ್ಮಿಕರಿಂದ 317 ಕೂಲಿಕಾರರು ಹಾಜರಿದ್ದರು.
ಕನ್ನಾರಿ ಗ್ರಾಮದಲ್ಲಿ ರೋಜ್ಗಾರ್ ದಿವಸ ಆಚರಣೆ

