ಸುದ್ದಿಮೂಲ ವಾರ್ತೆ ರಾಯಚೂರು, ಅ.17
ಸರ್ಕಾರಿ ಸ್ಥಳಗಳಲ್ಲಿ ಸಂವಿಧಾನ ವಿರೋಧಿ ಆರ್ಎಸ್ಎಸ್ ಚಟುವಟಿಕೆಗಳನ್ನು ನಿಷೇಧಿಸಬೇಕೆಂಬ ಸರ್ಕಾರದ ನಿರ್ಧಾರಕ್ಕೆೆ ವಿಧಾನ ಪರಿಷತ್ ಶಾಸಕ ಎ.ವಸಂತಕುಮಾರ ಸ್ವಾಾಗತಿಸಿದ್ದಾಾರೆ.
ಸಚಿವ ಪ್ರಿಿಯಾಂಕ ಖರ್ಗೆಯವರಿಗೆ ಕೆಲವು ಪಟ್ಟ ಭದ್ರ ಹಿತಾಸಕ್ತಿಿಗಳು ಜೀವ ಬೆದರಿಕೆ ಕರೆ ಮಾಡುತ್ತಿಿರುವುದನ್ನು ಖಂಡಿಸಿರುವ ಅವರು ಇಂತಹ ಬೂಟಾಟಿಕೆ ಬೆದರಿಕೆಗೆ ಪ್ರಿಿಯಾಂಕ ಖರ್ಗೆಯವರಾಗಲಿ, ದಲಿತ ನಾಯಕರಾಗಲಿ ಯಾರು ಬೆದರುವುದಿಲ್ಲ. ದಲಿತರ ಕೆಣಕಿದರೆ ಆರ್ಎಸ್ಎಸ್ ತಲೆ ಎತ್ತಿಿ ನಿಲ್ಲಲು ಕಷ್ಟವಾದಿತು, ನಾವು ಬೀದಿಗಿಳಿದರೆ ನೀವು ಬೀದಿಗಳಲ್ಲಿ ತಿರುಗಾಡುವುದು ಕಷ್ಟವಾಗುತ್ತದೆ ಎಂಬ ಎಚ್ಚರಿಕೆ ನೀಡಿದ್ದಾಾರೆ.
ಕರಿ ಟೋಪಿ ಕಾಕಿ ಚಡ್ಡಿಿ ಹಾಕಿ ದೊಣ್ಣೆೆ ಕೈಯಲ್ಲಿ ಹಿಡಿದು ನೂರು ವರ್ಷದ ಪಥ ಸಂಚಲನ ಮಾಡಿದರೆ ದೇಶಕ್ಕೆೆ ಮತ್ತು ಸಮಾಜಕ್ಕೆೆ ಏನು ಲಾಭವಾಗಿದೆ ನಿಮ್ಮ ಪಥ ಸಂಚಲನದಿಂದ ದೇಶದಲ್ಲಿ ಸಮಾಜದಲ್ಲಿ ಯಾವ ಬದಲಾವಣೆ ಆಗಿದೆ ಎಂದು ದೇಶದ ಜನರಿಗೆ ಗೊತ್ತಿಿದೆ ಎಂದು ವಸಂತಕುಮಾರ್ ಪ್ರಶ್ನಿಿಸಿದ್ದಾಾರೆ.