ಸುದ್ದಿಮೂಲ ವಾರ್ತೆ ಚಿತ್ತಾಾಪುರ, ನ.16:
ರಾಷ್ಟ್ರೀಯ ಸ್ವಯಂಸೇವಕ ಸಂಘವು ಯಾರ ವಿರೋಧಿಯು ಅಲ್ಲ. ಯಾರು ದೇಶದ ಪರವಾಗಿರುತ್ತಾಾರೋ ಅವರೆಲ್ಲರೂ ಸಂಘದ ಪರವಾಗಿರುತ್ತಾಾರೆ. ಯಾರು ದೇಶವನ್ನು ಒಡೆಯುತ್ತಾಾರೋ ಅವರ ವಿರುದ್ಧ ಸಂಘ ಹೋರಾಡುತ್ತದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಾಾಂತ್ಯ ಪ್ರಚಾರಕ ಕೃಷ್ಣಾಾಜೀ ಜೋಶಿ ಹೇಳಿದರು.
ಪಟ್ಟಣದ ಬಜಾಜ್ ಕಲ್ಯಾಾಣ ಮಂಟಪದ ಆವರಣದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ನೇತೃತ್ವದಲ್ಲಿ ರವಿವಾರ ನಡೆದ ಪಥ ಸಂಚಲನದ ಸಮಾರೋಪ ಸಮಾರಂಭದಲ್ಲಿ ಭಗವಾಧ್ವಜ ನೆರವೇರಿಸಿ ಅವರು ಮಾತನಾಡಿದರು. ಸಂಘದ ಚಟುವಟಿಕೆ ಮೇಚ್ಚಿಿ ದೇಶ ಸೇವೆಗಾಗಿ ದುಡಿಯುವವರು ಸಂಘಕ್ಕೆೆ ಬರಬೇಕು. ಇಲ್ಲಿ ಯಾರಿಗೂ ಜಾತಿ ಕೇಳುವುದಿಲ್ಲ. ಆರ್ ಎಸ್ ಎಸ್, ್ಯಾಸಿಸ್ಟ್, ಸಂಘ ಎಂದು ಕರೆಯುವ ಕಮ್ಯುನಿಷ್ಟರನ್ನು ಒಳಗೊಂಡಂತೆ ಎಲ್ಲರನ್ನೂ ಜೊತೆಗೆ ಕರೆದುಕೊಂಡು ಹೋಗುವ ಗುರಿ ಹೊಂದಿದೆ. ಸಂಘ ರದ್ದಾಗಬೇಕು ಎಂದು ಬಯಸುವ ಮನಸುಗಳನ್ನು ಸಹ ಒಗ್ಗೂಡಿಸಿ ಇಂದಲ್ಲ ನಾಳೆ ನಮ್ಮ ಜೊತೆಗೆ ಸೇರಿಸಿಕೊಂಡು ಹೊರಡುತ್ತೇವೆ ಎಂದರು.
ನಾಗಪೂರದಲ್ಲಿ ಕೇವಲ 13-17ಜನ ಯುವಕರನ್ನು ಕೂಡಿಸಿಕೊಂಡು ಸಂಘ ಕಟ್ಟಲು ಆರಂಭಿಸಿದ ಡಾ.ಹೆಡೆಗೆವಾರ ಅವರು ಹಿಂದೂ ರಾಷ್ಟ್ರ ಕಟ್ಟುವ ಕನಸು ಕಟ್ಟಿಿದ್ದರು. ಅದರ ಪರಿಣಾಮವಾಗಿ ಇಂದು ದೇಶದ ಪ್ರತಿ ಹಳ್ಳಿಿಗಳಲ್ಲಿ ಸಂಘದ ಸ್ವಯಂಸೇವಕರು ಕೆಲಸ ಮಾಡುತ್ತಿಿದ್ದಾರೆ. ಸಂಘವನ್ನು ದೂರದಿಂದ ನೋಡಿದವರು ಟೀಕೆಗಳನ್ನು ಮಾಡುತ್ತಲೇ ಬರುತ್ತಿಿದ್ದಾರೆ. ಆದರೆ, ಹತ್ತಿಿರದಿಂದ ನೋಡಿದವರು ಸಂಘದ ಕಾರ್ಯವನ್ನು ಶ್ಲಾಾಘಿಸಿದ ಉದಾಹರಣೆಗಳಿವೆ. ಮಹಾತ್ಮಾಾಗಾಂಧಿ ಹಾಗೂ ಡಾ.ಬಿ.ಆರ್. ಅಂಬೇಡ್ಕರ್ ಅವರು ಸಂಘದ ಚಟುವಟಿಕೆಗಳನ್ನು ಹತ್ತಿಿರದಿಂದ ಕಂಡು ತಮ್ಮ ಅಭಿಪ್ರಾಾಯಗಳನ್ನು ಸಕರಾತ್ಮಕವಾಗಿ ಹಂಚಿಕೊಂಡಿದ್ದಾರೆ. ರಾಷ್ಟ್ರೀಯ ಸ್ವಯಂಸೇವಕ ಎಂದರೆ ಅದು ದೇಶ ಭಕ್ತರ ಏಕೈಕ ಸಂಘ ಎಂದು ಇಂದು ಸಾಬೀತಾಗಿದೆ. ಸಂಘಕ್ಕೆೆ ನೂರು ವರ್ಷ ತುಂಬಿದ ಹಿನ್ನೆೆಲೆಯಲ್ಲಿ ದೇಶಾದ್ಯಂತ ಪಥಸಂಚಲನ ನಡೆಯುತ್ತಿಿದೆ. ಸಾರ್ವಜನಿಕರು ತೋರುತ್ತಿಿರುವೆ ಸಂಘದ ಸಾಧನೆಯಾಗಿದೆ ಎಂದು ಸ್ಮರಿಸಿದರು.
ನಾನು ಹಿಂದೂ ಎಂದು ಹೇಳಿಕೊಳ್ಳಲು ಸಾಧ್ಯವಾಗದಂತಹ ಸಂದರ್ಭದಲ್ಲಿ ಜನ್ಮತಳೆದ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಹಿಂದೂಪರ ಚಟುವಟಿಕೆಗಳನ್ನು ಸಂಘಟಿಸಿ ಹಿಂದೂಗಳಲ್ಲಿ ಆತ್ಮಸ್ಥೈರ್ಯ ಮೂಡಿಸುವ ಕೆಲಸ ಮಾಡಿದೆ. ಅಯೋಧ್ಯೆೆಯಲ್ಲಿ ಶ್ರೀರಾಮ ಮಂದಿರ ಸ್ಥಾಾಪನೆ ಮಾಡುವ ಮೂಲಕ ಹಾಗೂ ಜಮ್ಮು-ಕಾಶ್ಮೀರದಲ್ಲಿ 370ಕಲಂ ರದ್ದುಗೊಳಿಸುವ ಮೂಲಕ ಸಂಘ ತನ್ನ ಗುರಿ ತಲುಪಿದೆ. ಈ ದೇಶದ ಮೊದಲ ಪ್ರಧಾನ ಮಂತ್ರಿಿ ಆರ್ ಎಸ್ ಎಸ್ ಸಂಘ ನಿಷೇಧಿಸಿ ಆದೇಶ ಹೊರಡಿಸಿದ್ದರು. ಈಗಲೂ ಕೆಲವರು ಆರ್ ಎಸ್ ಎಸ್ ನಿಷೇಧಿಸಬೇಕು ಎನ್ನುತ್ತಿಿದ್ದಾರೆ. ಆದರೆ, ಅವರೆಲ್ಲರ ಮನ ಪರಿವರ್ತಿಸಿ ಸಂಘ ಪುನಶ್ಚೇತನಗೊಂಡಿದೆ. ಸಂಘದ ಚಟುವಟಿಕೆ ನಿಷೇಧಿಸಲು ಯಾರಿಂದಲೂ ಸಾಧ್ಯವಿಲ್ಲ. ಕಾರಣ, ಬಸವಣ್ಣನವರು ಹೇಳಿದಂತೆ ಇವನಾರವ ಇವನಾರವ ಎನ್ನದಿರಯ್ಯ ಇವ ನಮ್ಮವ ಇವ ನಮ್ಮವ ನಮ್ಮ ಮನೆಯ ಮಗನೆನ್ನಿಿಸಯ್ಯ ಎಂಬ ಮಾತಿನಂತೆ ಸಂಘ ಜಾತಿಯನ್ನು ಕೇಳದೆ ಎಲ್ಲಾ ಹಿಂದೂಗಳನ್ನು ಸಂಘಟಿಸಿ ಬಸವಣ್ಣನವರ ಮಾತನ್ನು ಪಾಲಿಸುತ್ತಿಿದೆ ಎಂದು ಹೇಳಿದರು.
ಸ್ವಯಂ ಸೇವಕ ಸಂಘದ ಕಾರ್ಯಕರ್ತ ಭೀಮರೆಡ್ಡಿಿಗೌಡ ಕುರಾಳ, ಸಂಘದ ಪ್ರಮುಖ ಅಶೋಕ ಪಾಟೀಲ ವೇದಿಕೆ ಮೇಲಿದ್ದರು.
ದೇಶ ಒಡೆಯುವರರ ವಿರುದ್ಧ ಆರ್ ಎಸ್ ಎಸ್ ಹೋರಾಟ ಆರ್ ಎಸ್ ಎಸ್ ಚಟುವಟಿಕೆ ನಿಷೇಧಿಸಲು ಸಾಧ್ಯವಿಲ್ಲ : ಜೋಶಿ

