ಸುದ್ದಿಮೂಲ ವಾರ್ತೆ ರಾಯಚೂರು, ಜ.07:
ರಾಷ್ಟ್ರೀಯ ಯುವ ದಿನದ ಅಂಗವಾಗಿ ಜ 12ರಂದು ರಾಯಚೂರು ಮಹಾನಗರ ಪಾಲಿಕೆಯಿಂದ ನಮ್ಮ ಸಂಕಲ್ಪ ಸುಂದರ, ಹಸಿರು ನಗರದ ವಿಕಲ್ಪ ಎಂಬ ಘೋಷ ವಾಕ್ಯದೊಂದಿಗೆ ಸ್ವಚ್ಛ ನಗರಕ್ಕಾಾಗಿ ಓಟ ಹೆಸರಿನಲ್ಲಿ ಮ್ಯಾಾರಥಾನ್ ಆಯೋಜಿಸಲಾಗಿದೆ.
ಅಂದು ಬೆಳಿಗ್ಗೆೆ 7ಕ್ಕೆೆ ಮಹಾತ್ಮ ಗಾಂಧಿ ಜಿಲ್ಲಾಾ ಕ್ರೀಡಾಂಗಣದಿಂದ ಆರಂಭವಾಗಲಿದ್ದು ಕೃಷಿ ವಿವಿ ದ್ವಾಾರದವರೆಗೆ ನಡೆದು ಮರಳಿ ಕ್ರೀಡಾಂಗಣಕ್ಕೆೆ ಬಂದು ತಲುಪಲಿದೆ.
ಇಡೀ ನಗರದ ಅಂದ ಹೆಚ್ಚಿಿಸಿ ಸ್ವಚ್ಛ-ಸುಂದರ ನಗರವಾಗಿಸುವ ಕುರಿತು ಹಾಗೂ ಸಮೃದ್ಧ ಆರೋಗ್ಯ ಕಾಪಾಡಿಕೊಳ್ಳುವುದರ ಕುರಿತು ಮ್ಯಾಾರಥಾನ್ನಲ್ಲಿ ಜಾಗೃತಿ ಮೂಡಿಸಲಾಗುತ್ತದೆ. ನಗರ ಶಾಲಾ-ಕಾಲೇಜು ವಿದ್ಯಾಾರ್ಥಿಗಳು, ಸಂಘ-ಸಂಸ್ಥೆೆಗಳ ಪದಾಧಿಕಾರಿಗಳು, ಇಲಾಖೆ ಅಧಿಕಾರಿಗಳು, ಕ್ರೀೆಡಾಪಟುಗಳು ಓಟದಲ್ಲಿ ಪಾಲ್ಗೊೊಂಡು ಯಶಸ್ವಿಿಗೊಳಿಸಬೇಕು ಎಂದು ಕೋರಲಾಗಿದೆ.

