ಸುದ್ದಿಮೂಲ ವಾರ್ತೆ ಬೆಳಗಾವಿ, ಡಿ.18:
ಗ್ರಾಾಮೀಣ ಪ್ರದೇಶದಲ್ಲಿರುವ ಶುದ್ಧ ಕುಡಿಯುವ ನೀರಿನ (ಆರ್ಓ) ಘಟಕಗಳ ನಿರ್ವಹಣೆಗೆ ರಾಜ್ಯ ಮಟ್ಟದಲ್ಲಿ ಏಜೆನ್ಸಿಿ ನೇಮಕಕ್ಕೆೆ ಇಲಾಖೆಯಿಂದ ಪ್ರಯತ್ನ ನಡೆಸಲಾಗುತ್ತಿಿದೆ ಎಂದು ಗ್ರಾಾಮೀಣಾಭಿವೃದ್ದಿ ಸಚಿವ ಪ್ರಿಿಯಾಂಕ್ ಖರ್ಗೆ ಹೇಳಿದರು.
ವಿಧಾನಸಭೆಯ ಪ್ರಶ್ನೋೋತ್ತರ ಕಲಾಪದಲ್ಲಿ ಹಿರೇಕೆರೂರು ಶಾಸಕ ಯು.ಬಿ.ಬಣಕಾರ್ ಪ್ರಶ್ನೆೆಗೆ ಉತ್ತರಿಸಿದ ಸಚಿವರು, ರಾಜ್ಯದ ಗ್ರಾಾಮೀಣ ಪ್ರದೇಶದಲ್ಲಿ ಶಾಸಕರು, ಸಂಸದರು ಸೇರಿದಂತೆ ಸಾಮಾಜಿಕ ಹೊಣೆಗಾರಿಕೆ ಅನುದಾನದಲ್ಲಿ ಬಹಳಷ್ಟು ಶುದ್ಧ ಕುಡಿಯುವ ನೀರಿನ ಘಟಕಗಳನ್ನು ನಿರ್ಮಿಸಿ, ಗ್ರಾಾಮ ಪಂಚಾಯಿತಿಗಳಿಗೆ ಹಸ್ತಾಾಂತರಿಸಲಾಗಿದೆ. ನಿರ್ವಹಣೆ ಅವಧಿ ಮುಗಿದ ನಂತರ ಇವುಗಳ ನಿರ್ವಹಣೆಗೆ ತೊಂದರೆ ಎದುರಾಗಿದೆ. ಈ ಹಿನ್ನಲೆಯಲ್ಲಿ ದೇಶದ ಪ್ರತಿಷ್ಠಿಿತ ಕುಡಿಯುವ ನೀರಿನ ಘಟಕಗಳ ತಯಾರಿಕಾ ಕಂಪನಿಗಳಲ್ಲಿ ಒಬ್ಬರಿಗೆ ನಿರ್ವಹಣೆ ಗುತ್ತಿಿಗೆ ನೀಡಲು ಕೋರಲಾಗಿದೆ. ಆದರೆ ಯಾವ ಕಂಪನಿಗಳು ನಿರ್ವಹಣೆ ಮಾಡಲು ಮುಂದೆ ಬರುತ್ತಿಿಲ್ಲ. ಸರ್ಕಾರ ತನ್ನ ಪ್ರಯತ್ನ ಮುಂದುವರಿಸಿದ್ದು, ಶೀಘ್ರದಲ್ಲಿಯೇ ಈ ಸಮಸ್ಯೆೆ ಬಗೆಹರಿಸುವುದಾಗಿ ಸಚಿವ ಪ್ರಿಿಯಾಂಕ್ ಖರ್ಗೆ ತಿಳಿಸಿದರು.
ಎಲ್ಲಾಾ ಜಿಲ್ಲಾ ಪಂಚಾಯಿತಿಗಳಲ್ಲಿ ಪ್ರತಿ ತಿಂಗಳು ನೀರಿನ ಗುಣಮಟ್ಟ ಪರೀಕ್ಷೆ ನಡೆಸಲಾಗುತ್ತಿಿದೆ. ಇದಕ್ಕಾಾಗಿ ಪ್ರಯೋಗಾಲಯಗಳನ್ನು ತೆರೆಯಲಾಗಿದೆ. ಸುಮಾರು 6.50 ಲಕ್ಷ ನೀರಿನ ಮಾದರಿಗಳನ್ನು ರಾಜ್ಯಾಾದ್ಯಂತ ಪರೀಕ್ಷಿಸಲಾಗಿದೆ. ಗ್ರಾಾಮಗಳಿಗೆ ನೀರು ಪರೀಕ್ಷಾ ಕಿಟ್ ಒದಗಿಸಲಾಗಿದೆ ಎಂದು ಸಚಿವ ಪ್ರಿಿಯಾಂಕ್ ಖರ್ಗೆ ಸಷ್ಟ ಪಡಿಸಿದರು.
ಗುಬ್ಬಿಿ ಶಾಸಕ ಎಸ್.ಆರ್.ಶ್ರೀನಿವಾಸ, ಶಿರಹಟ್ಟಿಿ ಶಾಸಕ ಡಾ.ಚಂದ್ರುಲಮಾಣಿ ಅವರು ಕೆಟ್ಟು ನಿಂತು ಹೋದ ಶುದ್ಧ ಕುಡಿಯುವ ನೀರಿನ ಘಟಕಗಳ ನಿರ್ವಹಣೆಗೆ ಗ್ರಾಾಮ ಪಂಚಾಯಿತಿಗಳಿಗೆ ಅನುದಾನ ನೀಡುವಂತೆ ಸಚಿವರಲ್ಲಿ ಕೋರಿದರು. ಇದಕ್ಕೆೆ ಇತರೆ ಶಾಸಕರು ಸಹ ಧ್ವನಿಗೂಡಿಸಿದರು.
ಗ್ರಾಾಮ ಪಂಚಾಯಿತಿಗಳಿಂದ ಅಳವಡಿಸಲಾಗಿರುವ ಶುದ್ಧ ಕುಡಿಯುವ ನೀರಿನ ಘಟಕಗಳ ನಿರ್ವಹಣೆಗೆ ಯಾವುದೇ ತೊಂದರೆಯಾಗಿಲ್ಲ. ಸರ್ಕಾರದಿಂದ ನಿರ್ವಹಣೆ ಅನುದಾನ ನೀಡಲಾಗಿದೆ. ಆದರೆ ಶಾಸಕರು, ಸಂಸದರು ಇತರೆ ಅನುದಾನಗಳಡಿ ನಿರ್ಮಿಸಿರುವ ಘಟಕಗಳ ನಿರ್ವಹಣೆ ತೊಂದರೆ ಉಂಟಾಗಿದ್ದು, ಶೀಘ್ರದಲ್ಲಿ ಪರಿಹಾರ ದೊರಕಿಸಿಕೊಡುವ ಭರವಸೆಯನ್ನು ಸಚಿವ ಪ್ರಿಿಯಾಂಕ್ ಖರ್ಗೆ ನೀಡಿದರು.
ರೂ.6 ಕೋಟಿ ಪ್ರಸ್ತಾಾವನೆ ಮಂಜೂರಾತಿ :
ಹಾವೇರಿ ಜಿಲ್ಲೆಯಿಂದ ರೂ.6 ಕೋಟಿ ಮೊತ್ತದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಿಸಲು ಮಂಜೂರಾತಿ ಕೋರಿ ಇಲಾಖೆಗೆ ಪ್ರಸ್ತಾಾವನೆ ಬಂದಿದೆ. ಈ ಪ್ರಸ್ತಾಾವನೆ ಪರಿಶೀಲನೆ ಹಂತದಲ್ಲಿದ್ದು ಸದ್ಯದಲ್ಲಿಯೇ ಮಂಜೂರಾತಿ ನೀಡುವುದಾಗಿ ಸಚಿವ ಪ್ರಿಿಯಾಂಕ್ ಖರ್ಗೆ, ಶಾಸಕ ಯು.ಬಿ.ಬಣಕಾರ್ ಅವರಿಗೆ ತಿಳಿಸಿದರು.

