ಸುದ್ದಿಮೂಲ ವಾರ್ತೆ ಬೆಂಗಳೂರು, ಡಿ.30:
ರಾಜ್ಯ ಸರ್ಕಾರದ 7 ನಿಗಮ ಮಂಡಳಿಗಳನ್ನು ಮಚ್ಚಲು ಹಾಗೂ 9 ಮಂಡಳಿಗಳನ್ನು ವಿಲೀನ ಮಾಡುವುದು ಸೇರಿದಂತೆ ಹಲವು ಮಹತ್ವದ ಶಿಾರಸ್ಸುಗಳನ್ನು ಮಾಡಲಾಗಿದೆ ಎಂದು ಕರ್ನಾಟಕ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ. ದೇಶಪಾಂಡೆ ಹೇಳಿದ್ದಾರೆ.
ಆಡಳಿತ ಸುಧಾರಣಾ ಆಯೋಗದ ಹತ್ತನೇ ವರದಿಯನ್ನು ಮುಖ್ಯಮಂತ್ರಿಿ ಸಿದ್ದರಾಮಯ್ಯ ಅವರಿಗೆ ಮಂಗಳವಾರ ಸಲ್ಲಿಸಿದ ಬಳಿಕ ವಿಕಾಸೌಧದಲ್ಲಿ ನಡೆಸಿದ ಪತ್ರಿಿಕಾಗೋಷ್ಠಿಿಯಲ್ಲಿ ಮಾತನಾಡಿದ ಅವರು, ಮುಂಬರುವ ದಿನಗಳಲ್ಲಿ ಭೂಸ್ವಾಾಧೀನ ಪ್ರಕ್ರಿಿಯೆ ಮತ್ತಷ್ಟು ಸರಳೀಕರಣಗೊಳಿಸುವಂತೆ ಹಲವು ಶಿಾರಸ್ಸುಗಳನ್ನು ಮಾಡಲಾಗಿದೆ ಎಂದರು.
ಇಂದು ಸಲ್ಲಿಸಲಾಗಿರುವ 10ನೇ ವರದಿಯಲ್ಲಿ 352 ಶಿಾರಸ್ಸು ಮಾಡಲಾಗಿದೆ . 2,874 ಯೋಜನೆಗಳನ್ನು ಪರಾಮರ್ಶೆ ನಡೆಸಿ, ಉಪಯೋಗಕ್ಕೆೆ ಬಾರದ 1000 ಯೋಜನೆಗಳನ್ನು ರದ್ದುಗೊಳಿಸಲು ಸಲಹೆ ನೀಡಲಾಗಿದೆ. ಇದರ ಜೊತೆಗೆ 1 ಕೋಟಿ ರೂಪಾಯಿಗೂ ಕಡಿಮೆ ಅನುದಾನ ನೀಡಲಾಗಿದ್ದ 280 ಯೋಜನೆಗಳನ್ನು ಸಂಬಂಧಪಟ್ಟ ಇಲಾಖೆಗಳ ಜೊತೆ ವಿಲೀನಕ್ಕೆೆ ಶಿಾರಸ್ಸು ಮಾಡಲಾಗಿದೆ ಎಂದರು.
ಯಾವುದೇ ಹೊಸ ಯೋಜನೆಗಳನ್ನು ಪ್ರಕಟಿಸಿದಾಗ ಅಸ್ತಿಿತ್ವದಲ್ಲಿದ್ದ ಒಂದು ಯೋಜನೆಯನ್ನು ರದ್ದು ಮಾಡಬೇಕು. ಜೊತೆಗೆ ಪ್ರಕಟಿಸಿದ ಯೋಜನೆಗಳ ಎಲ್ಲ ಲಾಭ ಜನಸಾಮಾನ್ಯರಿಗೆ ತಲುಪಬೇಕು ಸೇರಿದಂತೆ, ಸಿಬ್ಬಂದಿ ನೇಮಕಾತಿ ವಿಷಯದಲ್ಲೂ ಸಹ ಮಹತ್ವದ ಶಿಾರಸ್ಸು ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಒಂದರಿಂದ 7ರವರೆಗೆ ಆಡಳಿತ ಸುಧಾರಣೆ ಕುರಿತು ಹಲವು ಶಿಾರಸ್ಸುಗಳನ್ನು ರಾಜ್ಯ ಸರ್ಕಾರಕ್ಕೆೆ ಸಲ್ಲಿಸಿತ್ತು. ತಾವು ಅಧ್ಯಕ್ಷರಾದ ನಂತರ 8ರಿಂದ 10ರ ವರಗೆ ಮೂರು ವರದಿಗಳನ್ನು ಸಲ್ಲಿಸಲಾಗಿದ್ದು, ಹಲವು ಮಹತ್ವದ ಶಿಾರಸ್ಸು ಮಾಡಲಾಗಿದೆ ಎಂದು ಹೇಳಿದರು.
ಹಿಂದಿನ ಆಯೋಗದ ಅವಧಿಯಲ್ಲಿ 199 ಶಿಾರಸ್ಸುಗಳನ್ನು ಮಾತ್ರ ಅನುಷ್ಠಾಾನ ಮಾಡಲಾಗಿದ್ದು, ತಾವು ಅಧ್ಯಕ್ಷರಾದ ನಂತರ 5, 521 ಶಿಾರಸ್ಸುಗಳನ್ನು ಅನುಷ್ಠಾಾನ ಮಾಡುವಲ್ಲಿ ಕೆಲಸ ಮಾಡಲಾಗಿದೆ. ಇದರಲ್ಲಿ ಮುಖ್ಯಮಂತ್ರಿಿ, ಮುಖ್ಯ ಕಾರ್ಯದರ್ಶಿ, ಸಚಿವರು, ಅಧಿಕಾರಿಗಳ ಸಹಕಾರ ಹಿರಿದು ಎಂದು ತಿಳಿಸಿದರು. ಆದಾಯ ಪ್ರಮಾಣ ಪತ್ರ ಮತ್ತು ಪಡಿತರ ಚೀಟಿ ದುರುಪಯೋಗ ತಡೆಗೆ ಪಾರದರ್ಶಕತೆ ಕಾಪಾಡಲು ಆಯೋಗ ಶಿಾರಸ್ಸು ಮಾಡಿದ್ದು, ಅದನ್ನು ರಾಜ್ಯಸರ್ಕಾರ ಒಪ್ಪಿಿ ಅನುಷ್ಠಾಾನ ಮಾಡಿದೆ.
ಸುಮಾರು 1,000 ಲೆಕ್ಕ ಶೀರ್ಷಿಕೆಗಳಲ್ಲಿ ಶೂನ್ಯ ಅಥವಾ ಅತ್ಯಲ್ಪ ಹಂಚಿಕೆ ಕಂಡುಬಂದಿದೆ. ಸುಮಾರು 280 ಯೋಜನೆಗಳಿಗೆ 1 ಕೋಟಿ ರೂ.ಗಿಂತ ಕಡಿಮೆ ಹಂಚಿಕೆ ಇದ್ದು, ಇವುಗಳ ಹಂಚಿಕೆಯು ಭಾರಿ ಕುಸಿತ ಕಂಡಿದೆ. ಅನೇಕ ಯೋಜನೆಗಳು ಕೇಂದ್ರ ಪುರಸ್ಕೃತ ಯೋಜನೆಗಳೊಂದಿಗೆ ಹೋಲಿಕೆ ಹೊಂದಿವೆ. ಆದ್ದರಿಂದ ಇಂತಹ ಯೋಜನೆಗಳನ್ನು ಸ್ಥಗಿತಗೊಳಿಸಲು, ವಿಲೀನಗೊಳಿಸಲು ಅಥವಾ ಮರುಜೋಡಣೆ ಮಾಡಲು ಆಯೋಗವು ಶಿಾರಸು ಮಾಡಿದೆ.
ಸಿಬ್ಬಂದಿ ಮರುಹಂಚಿಕೆ ಮತ್ತು ಸುಧಾರಣೆ ಇಲಾಖೆಗಳು, ಮಂಡಳಿ ಮತ್ತು ನಿಗಮಗಳಲ್ಲಿನ ಮಂಜೂರಾದ, ಭರ್ತಿಯಾದ ಮತ್ತು ಹೊರಗುತ್ತಿಿಗೆ ಹುದ್ದೆಗಳ ಸಮಗ್ರ ಪರಿಶೀಲನೆ ನಡೆಸಲಾಗಿದೆ. ಕೆಲಸದ ಹೊರೆ ಕಡಿಮೆ ಇರುವ ಘಟಕಗಳಿಂದ ಸಿಬ್ಬಂದಿಯನ್ನು ಅಗತ್ಯವಿರುವ ಕಡೆಗಳಿಗೆ ಮರುಹಂಚಿಕೆ ಮಾಡಬೇಕು. ಪ್ರಸ್ತುತ ಅಪ್ರಸ್ತುತವಾಗಿರುವ ಹುದ್ದೆಗಳನ್ನು ರದ್ದುಪಡಿಸುವುದು ಅಥವಾ ತಾಂತ್ರಿಿಕ ಹುದ್ದೆಗಳಾಗಿ ಪರಿವರ್ತಿಸುವುದು. ಗ್ರೂಪ್-ಸಿ ಮತ್ತು ಗ್ರೂಪ್-ಡಿ ವೃಂದಗಳ ಅನಿಯಂತ್ರಿಿತ ವಿಸ್ತರಣೆಗೆ ಕಡಿವಾಣ ಹಾಕಬೇಕು.
ಆಯೋಗದ ಅವಧಿ ಮುಗಿದ ನಂತರವೂ ಅನುಷ್ಠಾಾನದ ಮೇಲೆ ನಿರಂತರ ನಿಗಾ ಇರಿಸಲು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯಲ್ಲಿ ’ಸುಧಾರಣಾ ಮೇಲ್ವಿಿಚಾರಣಾ ಘಟಕ’ ಸ್ಥಾಾಪಿಸಬೇಕು. ಆನ್ಲೈನ್ ಟ್ರ್ಯಾಾಕಿಂಗ್ ಪೋರ್ಟಲ್ ಮೂಲಕ ಪಾರದರ್ಶಕ ಮೇಲ್ವಿಿಚಾರಣೆ ಮುಂದುವರಿಸಬೇಕು ಎಂಬ ಹಲವು ಶಿಾರಸು ಮಾಡಲಾಗಿದೆ ಎಂದರು.
10ನೇ ವರದಿಯು 355 ಹೊಸ ಶಿಾರಸುಗಳನ್ನು ಒಳಗೊಂಡಿದ್ದು, ಆಯೋಗವು ಒಟ್ಟು 10 ವರದಿಗಳ ಮೂಲಕ 42 ಇಲಾಖೆಗಳಿಗೆ ಸಂಬಂಧಿಸಿದಂತೆ 6,000 ಕ್ಕೂ ಹೆಚ್ಚು ಶಿಾರಸುಗಳನ್ನು ನೀಡಿದೆ. 10ನೇ ವರದಿಯನ್ನು ಸಲ್ಲಿಸುವುದರೊಂದಿಗೆ ಕರ್ನಾಟಕ ಆಡಳಿತ ಸುಧಾರಣಾ ಆಯೋಗ-2 ತನ್ನ ಕಾರ್ಯವನ್ನು ಪೂರ್ಣಗೊಳಿಸಿದೆ. ಸುಧಾರಣೆಗಳ ಪ್ರಯೋಜನಗಳು ಜನಸಾಮಾನ್ಯರಿಗೆ ತಲುಪುವಂತೆ ಶಿಾರಸುಗಳನ್ನು ಮಂಡಿಸಲಾಗಿದೆ ಎಂದು ದೇಶಪಾಂಡೆ ವಿವರಣೆ ನೀಡಿದರು.

