ಪತ್ತನಂತಿಟ್ಟ (ಕೇರಳ), ನ.16:
ದಕ್ಷಿಣ ಭಾರತದ ಹೆಸರಾಂತ ಧಾರ್ಮಿಕ ಕ್ಷೇತ್ರ ಕೇರಳದ ಶಬರಿಮಲೈ ದೇವಾಲಯದ ವಾರ್ಷಿಕ ಮಂಡಲ ಮಕರ ವಿಳಕ್ಕು ಆರಂಭವಾಗಿದೆ.
ಶಬರಿ ಮಲೆ ದೇವಾಲಯದ ಗರ್ಭ ಗುಡಿಯನ್ನು ತೆರೆದು ಭಕ್ತರಿಗೆ ಅಯ್ಯಪ್ಪ ಸ್ವಾಾಮಿಯ ದರ್ಶನಕ್ಕೆೆ ಅವಕಾಶ ಮಾಡಿಕೊಡಲಾಗಿದೆ.
ಮಲಯಾಳಂ ತಿಂಗಳ ವೃಚ್ಛಿಿಕ್ಕ ಮಾಸದಲ್ಲಿ ಪ್ರತಿ ವರ್ಷ ಮಂಡಲ ಮಕರ ವಿಳಕ್ಕು ಯಾತ್ರೆೆ ಆಯೋಜಿಸಲಾಗುತ್ತದೆ. ಇದೀಗ ಭಕ್ತರ ನೂಕು ನುಗ್ಗಲು ತಪ್ಪಿಿಸಲು ಕೇರಳ ದೇವಸ್ವಂ ಮಂಡಳಿಯ ಎಲ್ಲ ವ್ಯವಸ್ಥೆೆಗಳನ್ನು ಮಾಡಿಕೊಂಡಿದ್ದು, ಪ್ರತಿದಿನ 90 ಸಾವಿರ ಮಂದಿಗೆ ದರ್ಶನಕ್ಕೆೆ ವ್ಯವಸ್ಥೆೆ ಮಾಡಲಾಗುತ್ತಿಿದೆ. ಅದರಲ್ಲಿ 70 ಸಾವಿರ ಆನ್ ಲೈನ್ ಬುಕ್ಕಿಿಂಗ್ 20 ಸಾವಿರ ಸ್ಥಳದಲ್ಲೇ ನೋಂದಣಿ ಮಾಡಿಕೊಳ್ಳಲಾಗುತ್ತದೆ. ಅಲ್ಲದೇ ತೀರ್ಥಯಾತ್ರೆೆ ಸಾಗುವ ಪಂಪದಿಂದ ಸನ್ನಿಿಧಾನಂ ವರೆಗಿನ ಮಾರ್ಗದ ಉದ್ದಕ್ಕೂ ಭಕ್ತಾಾದಿಗಳಿಗೆ ಎಲ್ಲ ರೀತಿಯ ಮೂಲಸೌಕರ್ಯಗಳ ವ್ಯವಸ್ಥೆೆ, ಆರೋಗ್ಯ ತಪಾಸಣೆ, ಕುಡಿಯುವ ನೀರು ಹಾಗೂ ಶೌಚಾಲಯಗಳ ವ್ಯವಸ್ಥೆೆಯನ್ನು ಮಾಡಲಾಗಿದೆ. ಪೊಲೀಸ್, ದೇವಸ್ವಂ ಸಿಬ್ಬಂದಿ, ಹಾಗೂ ಸ್ವಯಂ ಸೇವಕರು ಯಾತ್ರಿಿಕರಿಗೆ ನೆರವಾಗಲಿದ್ದಾರೆ.
ಡಿಸೆಂಬರ್ 27ರಂದು ಮಂಡಲ ಪೂಜೆ ಅಂತ್ಯಗೊಂಡು ಬಳಿಕ ಡಿಸೆಂಬರ್ 30ರಿಂದ 2026ರ ಜನವರಿ 20ರವರೆಗೆ ಮಕರ ವಿಳಕ್ಕು ಉತ್ಸವ ನಡೆಯಲಿದೆ.

