ಸುದ್ದಿಮೂಲ ವಾರ್ತೆ ರಾಯಚೂರು, ೆ.12:
ತಾರಾನಾಥ ಶಿಕ್ಷಣ ಸಂಸ್ಥೆೆಯ ಎಲ್ವಿಡಿ ಅಮೃತ ಮಹೋತ್ಸವ ಹಾಗೂ ಬಿಆರ್ಬಿ ವಾಣಿಜ್ಯ ಮಹಾವಿದ್ಯಾಾಲಯದ ವಜ್ರ ಮಹೋತ್ಸವದ ಅಂಗವಾಗಿ ಹೊರ ತಂದ ಸಾಧನ ಪಥ ಸ್ಮರಣ ಸಂಚಿಕೆ ಕೃತಿ ಲೋಕಾರ್ಪಣೆ ಸಮಾರಂಭ ಹಮ್ಮಿಿಕೊಳ್ಳಲಾಗಿತ್ತುಘಿ.
ಎಲ್ವಿಡಿ ಕಾಲೇಜಿನ ಸಭಾಂಗಣದಲ್ಲಿ ಹಮ್ಮಿಿಕೊಂಡ ಕಾರ್ಯಕ್ರಮದಲ್ಲಿ ಕೆಎಎಸ್ ಅಧಿಕಾರಿ ಸಂತೋಷ ರಾಣಿ ಅವರು ಸಾಧನಾ ಪಥ ಕೃತಿ ಲೋಕಾರ್ಪಣೆ ಮಾಡಿ ಮಾತನಾಡಿ, ವಿದ್ಯಾಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ಮತ್ತು ಸಮಯ ಪಾಲನೆ ಹಾಗೂ ಕೌಶಲ್ಯಗಳ ಬಗ್ಗೆೆ ಸಾಧನೆಯ ಶಿಖರ ತಲುಪಲು ಸತತ ಪ್ರಯತ್ನ ಮಾಡುವುದು ಪ್ರಮುಖ ಗುರಿಯಾಗಬೇಕು ಎಂದರು.
ಕಲ್ಯಾಾಣ ಕರ್ನಾಟಕದ ಉದ್ಯೋೋಗದ ಮೀಸಲಾತಿ ಮತ್ತು ಸೌಲಭ್ಯಗಳ ಕುರಿತು ವಿವರಿಸಿದ ಅವರು ವಿದ್ಯಾಾರ್ಥಿಗಳ ಹಲವಾರು ಪ್ರಶ್ನೆೆಗಳಿಗೆ ಉತ್ತರಿಸಿದರು.
ಹಂಪಿ ಕನ್ನಡ ವಿವಿಯ ನಿರ್ದೇಶಕ ಡಾ. ಅಮರೇಶ ಯತಗಲ್ ಕೃತಿ ಕುರಿತು ಮಾತನಾಡಿ,ತಾರನಾಥ ಶಿಕ್ಷಣ ಸಂಸ್ಥೆೆಯ ಇತಿಹಾಸ ಹಾಗೂ ಪಂಡಿತ್ ತಾರನಾಥರ ಆಶಯ ಈ ಪ್ರದೇಶದಲ್ಲಿನ ಶಿಕ್ಷಣದ ಕೊರತೆ ನೀಗಿಸುವಲ್ಲಿ ಸಂಸ್ಥೆೆಯನ್ನು ಬೆಳೆಸಿದ ಅನೇಕ ವಿದ್ಯಾಾರ್ಥಿಗಳ ಭವಿಷ್ಯವನ್ನು ರೂಪಿಸಿದವರು ಎಂದರು. ಇಲ್ಲಿ ಅಭ್ಯಾಾಸ ಮಾಡಿದ ವಿದ್ಯಾಾರ್ಥಿಗಳು ದೇಶ ವಿದೇಶಗಳಲ್ಲಿ ಉನ್ನತ ಹುದ್ದೆ ಪಡೆದಿದ್ದಾರೆ ಎಂದು ಹೇಳಿದರು.
ಸಂಸ್ಥೆೆ ಅಧ್ಯಕ್ಷ ಪಾರಸಮಲ್ ಸುಖಾಣಿ ಅವರ ವಿಶಾಲ ಹೃದಯ, ಸೇವಾ ಮನೋಭಾವನೆ, ಶಿಕ್ಷಣದ ಬಗೆಗಿನ ಕಾಳಜಿ ತುಂಬಾ ಪ್ರಶಂಶನೀಯ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಸಂಸ್ಥೆೆಯ ಅಧ್ಯಕ್ಷ ಪಾರಸಮಲ್ ಸುಖಾಣಿ ಮಾತನಾಡಿ, ರಾಯಚೂರು ಉತ್ಸವ ಯಶಸ್ವಿಿಯಾಗಿ ನಡೆಸಿಕೊಟ್ಟ ಜಿಲ್ಲಾಧಿಕಾರಿ ನೇತೃತ್ವದ ಅಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಿದ ಅವರು ಇಲಿಯೇ ಹೆಚ್ಚಿಿನ ಅವಧಿಯವರೆಗೆ ಕೆಲಸ ಮಾಡಬೇಕೆಂದು ಆಶಿಸಿದರು. ಕಾರ್ಯಕ್ರಮದ ಪ್ರಾಾಸ್ತಾಾವಿಕ ನುಡಿಗಳನ್ನು ಸಂಸ್ಥೆೆ ಪ್ರಧಾನ ಕಾರ್ಯದರ್ಶಿ ಅಂಬಾಪತಿ ಪಾಟೀಲ್ ಮಾಡಿದರು.
ಸಂಸ್ಥೆೆ ಉಪಾಧ್ಯಕ್ಷ ಪವನ್ ಕುಮಾರ ಸುಖಾಣಿ ಸ್ವಾಾಗತಿಸಿದರು. ಕಾಲೇಜಿನ ಕಾರ್ಯದರ್ಶಿ ಜಟ್ರಂ ಶ್ರೀನಿವಾಸ್ ವಂದಿಸಿದರು. ಬೋಧಕ-ಬೋಧಕೇತರ ಸಿಬ್ಬಂದಿ ವಿದ್ಯಾಾರ್ಥಿಗಳಿದ್ದರು.
ಸಾಧನ ಪಥ ಸ್ಮರಣ ಸಂಚಿಕೆ ಬಿಡುಗಡೆ ಸಾಧನೆಗೆ ಕೌಶಲ್ಯ, ಸತತ ಪ್ರಯತ್ನ ಮುಖ್ಯ-ಸಂತೋಷರಾಣಿ

