ಮಾರ್ಚ್ 26ರಂದು ಸಗರನಾಡು ಸಂಸ್ಕೃತಿ ಉತ್ಸವ:ಶರಣಗೌಡ ಬಿರಾದರ್ ಯಲಗೋಡ
ಹಾಸ್ಯ ಕಲಾವಿದ ಟೆನ್ನಿಸ್ ಕೃಷ್ಣ, ಅಜಯ ಸಾರಪುರೆ, ಕಿರುತೆರೆ ನಟಿ ರಜಿನಿ ಅಮೃತ ಆಗಮನ!
ಜೇವರ್ಗಿ :- ಇದೇ ಮಾರ್ಚ್ 26ರ ರವಿವಾರ ತಾಲೂಕ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ 2023 ರ “ಸಗರನಾಡು ಸಂಸ್ಕೃತಿ ಉತ್ಸವ” ಕಾರ್ಯಕ್ರಮ ಪಟ್ಟಣದ ಹಳೆ ತಹಸಿಲ್ದಾರ್ ಕಚೇರಿ ಆವರಣದಲ್ಲಿ ಜರುಗಲಿದೆ.
ಈ ಕಾರ್ಯಕ್ರಮದ ಪತ್ರಿಕಾಗೋಷ್ಠಿ ನಡೆಸಿ ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕದ ಅಧ್ಯಕ್ಷರಾದ ಎಸ್ ಕೆ ಬಿರಾದರ್ ಹಾಗೂ ಸಗರನಾಡು ಸಾಂಸ್ಕೃತಿಕ ಉತ್ಸವದ ಸ್ವಾಗತ ಸಮಿತಿ ಅಧ್ಯಕ್ಷರಾದ ಶರಣಗೌಡ ಬಿರಾದರ್ ಯಲಗೋಡ ಮಾತನಾಡಿ ಮಾರ್ಚ್ 26ರ ರವಿವಾರದಂದು ಬೆಳಿಗ್ಗೆ ಮಿನಿ ವಿಧಾನಸೌಧ ಆವರಣದಿಂದ ಹಳೆ ತಹಸಿಲ್ದಾರ್ ಕಚೇರಿವರೆಗೆ ಉತ್ಸವದ ಮೆರವಣಿಗೆ ನಡೆಯಲಿದ್ದು, ಶಾಸಕ
ಡಾ. ಅಜಯ್ ಸಿಂಗ್ ನೇತೃತ್ವ ವಹಿಸಲಿದ್ದಾರೆ. ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕ ಅಧ್ಯಕ್ಷರಾದ ರಾಜಶೇಖರ್ ಸಿರಿ ಮೆರವಣಿಗೆ ಉದ್ಘಾಟಿಸಿ ಚಾಲನೆ ನೀಡಲಿದ್ದಾರೆ, ಈ ಉತ್ಸವದ ಮೆರವಣಿಗೆಯಲ್ಲಿ
ಪಿ ಎಲ್ ಡಿ ಬ್ಯಾಂಕ್ ಅಧ್ಯಕ್ಷರಾದ ಹಳ್ಳೆಪ್ಪ ಆಚಾರ್ಯ ಜೋಶಿ ಸೇರಿ ಬಿಜೆಪಿ,ಕಾಂಗ್ರೆಸ್,ಜೆಡಿಎಸ್ ಪಕ್ಷದ ಮುಖಂಡರುಗಳು ವಿವಿಧ ಸಂಘಟನೆಯ ಪದಾಧಿಕಾರಿಗಳು ವೈದ್ಯರು ಉದ್ಯಮಿದಾರರು ಮೆರವಣಿಗೆಯಲ್ಲಿ ಭಾಗವಹಿಸಲಿದ್ದಾರೆ.
ತದನಂತರ ಬೆಳಿಗ್ಗೆ 11 ಗಂ. ಲಿಂ. ಚಂದ್ರಶೇಖರ್ ಚೆನ್ನಮಲ್ಲಯ್ಯ ಹಿರೇಮಠ್ ವೇದಿಕೆ ಮೇಲೆ ಸುರಪುರ ಸಂಸ್ಥಾನದ ಬಹರಿ ಬಲವಂತ ಬಹದ್ದೂರ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ,ಸೊನ್ನ ವಿರಕ್ತ ಮಠದ ಶಿವಾನಂದ ಮಹಾಸ್ವಾಮೀಜಿ ಅಣಜಿಗಿ ಸತ್ಯಾನಂದ ಮುತ್ಯಾ ದಿವ್ಯ ಸಾನಿಧ್ಯ ವಹಿಸಲಿದ್ದಾರೆ.
ಶಹಾಪುರ ಶಾಸಕ ಶರಣಬಸಪ್ಪ ದರ್ಶನಾಪುರ, ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ, ವಿಧಾನ ಪರಿಷತ್ ಮಾಜಿ ಸದಸ್ಯ ತಿಪ್ಪಣ್ಣ ಕಮಕನೂರ್, ಕಲಬುರಗಿ ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಕೇದಾರಲಿಂಗಯ್ಯ ಹಿರೇಮಠ, ಬಿಜೆಪಿ ಪಕ್ಷ ಹಿರಿಯ ಮುಖಂಡ ಮಲ್ಲಿನಾಥ್ ಗೌಡ ಪಾಟೀಲ್, ಕರ್ನಾಟಕ ರಾಜ್ಯ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ಮಂಡಳಿಯ ಅಧ್ಯಕ್ಷರಾದ ಧರ್ಮಣ್ಣ ದೊಡ್ಡಮನಿ ಜ್ಯೋತಿ ಬೆಳಗಿಸದಲ್ಲಿದ್ದಾರೆ. ಬಿಜೆಪಿ ಗ್ರಾಮೀಣ ಜಿಲ್ಲಾಧ್ಯಕ್ಷರಾದ ಶಿವರಾಜ್ ಪಾಟೀಲ್ ರದ್ದೆವಾಡಗಿ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ರೇವಣಸಿದ್ದಪ್ಪ ಎಂ ಸಂಕಾಲಿ “ಸಗರನಾಡು ವೈಭವ” ಸ್ಮರಣ ಸಂಚಿಕೆ ಬಿಡುಗಡೆಗೊಳಿಸಲಿದ್ದಾರೆ. ಕಲಬುರ್ಗಿ ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ಸಂಸ್ಥೆಯ ಮುಖ್ಯಸ್ಥರಾದ ಪ್ರೊ ಎಚ್ ಟಿ ಪೋತೆ ಆಶಯ ನುಡಿಯಲಿದ್ದಾರೆ. ಉತ್ಸವದ ಸರ್ವಾಧ್ಯಕ್ಷರಾಗಿ ಡಾ. ಶ್ರೀಶೈಲ್ ನಾಗರಾಳ, ಬಿಜೆಪಿ ಎಸ್ ಸಿ ಮೋರ್ಚಾ ಜಿಲ್ಲಾ ಘಟಕ ಅಧ್ಯಕ್ಷ ಮರೆಪ್ಪ ಬಡಿಗೇರ್, ಡಾ. ಗೋವಿಂದರಾಜ ಆಲದಾಳ, ಡಾಕ್ಟರ್ ಈರಪ್ಪ ಅಂಬ್ಲಯ ಹವಾಲ್ದಾರ್ ಸ್ಮರಣ ಸಂಚಿಕೆ ಸಂಪಾದಕರು ದಾಸೋಹಿ ಭೀಮರಾಯ ಕನ್ನೊಳ್ಳಿ, ಸಮಾಜಸೇವಕ ಪ್ರಕಾಶ್ ಅಂಗಡಿ, ಎಸ್ ಟಿ ಬಿರಾದರ್, ಚಂದ್ರಶೇಖರ್ ತುಂಬಗಿ, ಬಸವರಾಜ್ ಹಡಪದ ಸೇರಿ ಇನ್ನುಳಿದವರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ವೇದಿಕೆಯ ಕಾರ್ಯಕ್ರಮದ ಉದ್ಘಾಟನೆ ನಂತರ ಎರಡು ಹಂತದಲ್ಲಿ ಕವಿಗೋಷ್ಠಿ ನಡೆಯಲಿದ್ದು ತದನಂತರಸಮಾರೋಪ ಸನ್ಮಾನ ನಗೆ ಉತ್ಸವ ಕಾರ್ಯಕ್ರಮ ನಡೆಯಲಿದೆ.
ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಚಿಗರಳ್ಳಿಯ ಸಿದ್ದ ಬಸವ ಕಬೀರಾನಂದ ಮಹಾಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಲಿದ್ದಾರೆ. ಸಮರೂಪ ಸನ್ಮಾನದ ನಂತರ ಹಾಸ್ಯ ನಟ ಟೆನ್ನಿಸ್ ಕೃಷ್ಣ, ಹಾಸ್ಯ ಕಲಾವಿದ ಅಜೆಯ ಸಾರಪುರೆ, ಖ್ಯಾತ ಕಿರುತೆರೆಯ ನಟಿ ರಜಿನಿ ಅಮೃತ ಮಾತು ಮತ್ತು ನಟನೆಯ ಮೂಲಕ ನೆರೆದಿರುವ ಪ್ರೇಕ್ಷಕರನ್ನು ನಗೆಯಗಡಲಲ್ಲಿ ತೇಲಿಸಲಿದ್ದಾರೆ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.