ಸುದ್ದಿಮೂಲ ವಾರ್ತೆ ಮುದ್ದೇಬಿಹಾಳ, ೆ.21:
ತಾಲ್ಲೂಕಿನ ಅಮರಗೋಳದ ಮಲಕಣ್ಣ ಮಾಸ್ತರ ಭಾವೈಕ್ಯ ಸಾಹಿತ್ಯ ವೇದಿಕೆ,ಡಾ.ಸಿಂಪಿ ಲಿಂಗಣ್ಣ ಸಾಹಿತ್ಯ ವೇದಿಕೆ, ಕಸಾಪ, ಶಸಾಪ, ವಚನ ಸಾಹಿತ್ಯ ಹಾಗೂ ಸಾಂಸ್ಕೃತಿಕ ಪರಿಷತ್ತು ಇವರ ಸಹಯೋಗದಲ್ಲಿ ೆ.22 ರಂದು ಬೆಳಗ್ಗೆೆ 11ಕ್ಕೆೆ ದಿ.ಮಲಕಣ್ಣ ಅಮರಗೋಳ ಅವರ 9ನೇ ಪುಣ್ಯಸ್ಮರಣೋತ್ಸವ ನಿಮಿತ್ಯ ಸಾಧಕರಿಗೆ ಸಾಹಿತ್ಯ ರತ್ನ ಪ್ರಶಸ್ತಿಿ ಹಾಗೂ ಉತ್ತಮ ಶಿಕ್ಷಕ ಪ್ರಶಸ್ತಿಿ,ನಿವೃತ್ತರಿಗೆ,ಸಾಧಕರಿಗೆ ಸನ್ಮಾಾನ ಸಮಾರಂಭ ಅಮರಗೋಳದ ನಾಗಲಿಂಗೇಶ್ವರ ದೇವಸ್ಥಾಾನದ ಆವರಣದಲ್ಲಿ ನಡೆಯಲಿದೆ.
ದಿವ್ಯ ಸಾನಿಧ್ಯ ವಿಜಯಪುರದ ವೇ.ವಿನೋದ ಹಿರೇಮಠ ವಹಿಸುವರು.ಸಾನಿಧ್ಯ ಪುರಾಣಿಕ ಮಹದೇವಯ್ಯ ಹಿರೇಮಠ ವಹಿಸುವರು.ಇಲಕಲ್ ಅರೇಬಿಕ್ ಕಾಲೇಜು ಉಪನ್ಯಾಾಸಕ ಲಾಲಹುಸೇನ ಕಂದಗಲ್ಲ ಉದ್ಘಾಾಟಿಸುವರು.ವೇದಿಕೆಯ ಪ್ರಮುಖರಾದ ಕಾಶಿಂಬಿ ನದಾ ಉಪಸ್ಥಿಿತರಿರುವರು.ಹಿರಿಯ ಸಾಹಿತ್ಯ ಪ್ರೊೊ.ಬಿ.ಎಂ.ಹಿರೇಮಠ ಅಧ್ಯಕ್ಷತೆ ವಹಿಸುವರು.ಮುಖ್ಯ ಅತಿಥಿಗಳಾಗಿ ವಚನ ಸಾಹಿತ್ಯ ಮತ್ತು ಸಾಂಸ್ಕೃತಿಕ ಪರಿಷತ್ ಜಿಲ್ಲಾಾಧ್ಯಕ್ಷ ಅಬ್ದುಲರಹೆಮಾನ ಬಿದರಕುಂದಿ, ಸಾಹಿತಿ ಅಶೋಕ ಮಣಿ ,ಉಪನ್ಯಾಾಸಕ ಪ್ರಕಾಶ ನರಗುಂದ ಮುಖ್ಯ ಅತಿಥಿಗಳಾಗಿ ಪಾಲ್ಗೊೊಳ್ಳುವರು. ಇಲಕಲ್ದ ಮುರ್ತುಜಾಬೇಗಂ ಕೊಡಗಲಿ ಅವರಿಗೆ ಸಾಹಿತ್ಯ ರತ್ನ ಪ್ರಶಸ್ತಿಿ ನೀಡಿ ಗೌರವಿಸಲಾಗುತ್ತದೆ. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ತೋರಿದ ಶಿಕ್ಷಕರಿಗೆ,ಸಂಘಟಕರಿಗೆ ಹಾಗೂ ಸಾಮಾಜಿಕ ಕಾರ್ಯಕರ್ತರಿಗೆ,ನಿವೃತ್ತ ಶಿಕ್ಷಕರಿಗೆ ಸನ್ಮಾಾನ ಮಾಡಲಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾಾರೆ.

