ಸಾವಧಾನವಾಗಿ ಜೇವರ್ಗಿಯ ರಾಜಕೀಯಕ್ಕೆ ಎಂಟ್ರಿ ಕೊಟ್ಟ ಸಮಾಧಾನ ಪೂಜಾರಿ
ಜೇವರ್ಗಿ ರಾಜಕೀಯದಲ್ಲಿ ಹಲವಾರು ನಾಯಕರು ಕಣಕ್ಕಿಳಿಯಲಿದ್ದಾರೆ ಎಂದು ಸಾರ್ವಜನಿಕರು ಮಾತನಾಡಿಕೊಳ್ಳುತ್ತಿದ್ದಾರೆ. ಹಲವು ನಾಯಕರಲ್ಲಿ ಒಬ್ಬರಾದ ಬಾಂಬೆ ಬಿಲ್ಡರ್ಸ್ ಹಾಗೂ ಖುಷಿ ಬಿಲ್ಡರ್ಸ್ ಕಲಬುರ್ಗಿ ಮಾಲೀಕರಾದ ಸಮಾಧಾನ ಪುಜಾರಿ ಕೂಡ ಸಮಾಧಾನವಾಗಿ ಜೇವರ್ಗಿಯ ರಾಜಕೀಯ ಎಂಟ್ರಿ ಕೊಡಲಿದ್ದಾರೆ ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ.
ಜೇವರ್ಗಿ ತಾಲೂಕಿನ ಅಂಕಲಗಾ ಗ್ರಾಮದವರಾದ ಶ್ರೀ ಸಮಾಧಾನ ಜೆ ಪೂಜಾರಿ ಸಾಮಾಜಿಕ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಯುವಕರ ಬಳಗವನ್ನೇ ಕಟ್ಟಿಕೊಂಡು ಕ್ರೀಡೆ ಸಾಮಾಜಿಕ ಮತ್ತು ಧಾರ್ಮಿಕ ಕಾರ್ಯಗಳಿಗೆ ದಾನ ಧರ್ಮಗಳ ಬಡವರ ದೀನದಲಿತರ ಕಣ್ಣೀರು ವರಿಸುವ ನಾಯಕರಾಗಿ ತೆರೆಯಿಂದ ಕೆಲಸ ಮಾಡಿರುವುದನ್ನು ಸಾರ್ವಜನಿಕರು ನೋಡಿದ್ದಾರೆ. ಆದರೆ ಜನಸೇವೆಗೆ ರಾಜಕೀಯಕ್ಕೆ ಬರುವುದು ಎಲ್ಲಾ ನಾಯಕರ ಅನಿವಾರ್ಯವಾಗಿದೆ. ಅದರಲ್ಲಿಯೂ ಕೂಡ ಸಮಾಧಾನ ಪುಜಾರಿ ಒಬ್ಬರು.
ರಾಷ್ಟ್ರ ಮತ್ತು ರಾಜ್ಯಮಟ್ಟದ ಬಿಜೆಪಿ ನಾಯಕರಲ್ಲಿ ಗುರುತಿಸಿಕೊಂಡ ಸಮಾಧಾನ ಪುಜಾರಿಯವರು ಇನ್ನೇನು ಕೆಲವೇ ದಿನಗಳಲ್ಲಿ ಭಾರತೀಯ ಜನತಾ ಪಾರ್ಟಿಗೆ ಸೇರ್ಪಡೆ ಆಗಲಿದ್ದಾರೆ ಎಂದು ಅಭಿಮಾನಿಗಳು ಮಾತನಾಡಿಕೊಳ್ಳುತ್ತಿದ್ದಾರೆ. ಭಾರತೀಯ ಜನತಾ ಪಕ್ಷಕ್ಕೆ ಸೇರಿದರೆ ಜೇವರ್ಗಿ ಕ್ಷೇತ್ರದ ಅಭ್ಯರ್ಥಿಯಾಗಿ ಕಣಕ್ಕಿಳಿಯುದಾಗಿ ಸೂಚನೆ ನೀಡಿದ್ದಾರೆ ಎಂದು ಸಮಾಧಾನ ಪೂಜಾರಿ ಹೇಳಿದರು.
ಒಟ್ಟಿನಲ್ಲಿ ಜೇವರ್ಗಿ ತಾಲೂಕದ ರಾಜಕೀಯ ರಣರಂಗ ಬಹಳ ಕುತೂಹಲಕಾರಿಯಾಗಿದೆ ಎಂದು ಸಾರ್ವಜನಿಕರು ಮಾತನಾಡಿಕೊಳ್ಳುತ್ತಿದ್ದಾರೆ. ಸಮಾಧಾನ ಪುಜಾರಿ ಸಾವಧಾನವಾಗಿ ರಾಜಕೀಯ ಎಂಟ್ರಿ ಕೊಡದಿದ್ದಾರೆ. ಸಮಾಧಾನವನ್ನು ಪ್ರಧಾನವಾಗಲಿ ಎಂದು ಸಮಾಧಾನ ಪುಜಾರಿ ಅಭಿಮಾನಿಗಳು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಜೇವರ್ಗಿಯ ಕ್ಷೇತ್ರಕ್ಕೆ ಹೊಸ ಅಭ್ಯರ್ಥಿ ಹುಡುಕಾಟದಲ್ಲಿದ್ದ ಮತದಾರರು ಸಮಾಧಾನ ಪೂಜಾರಿಯವರನ್ನು ಅಪ್ಪಿಕೊಳ್ಳುವರ ಕಾದು ನೋಡೋಣ.
“ಒಂದೇ ಪಕ್ಷದಲ್ಲಿ ನಾಲ್ಕು ಐದು ಜನ ಆಕಾಂಕ್ಷಿಗಳಾಗಿದ್ದಾರೆ. ಅದರಲ್ಲಿಯೂ ಸಮಾಧಾನ ಪುಜಾರಿ ಕೂಡ ಒಬ್ಬರಾಗಿ ಜೇವರ್ಗಿ ಕ್ಷೇತ್ರದ ಆಕಾಂಕ್ಷಿ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ ಎಂದು ಸಮಾಧಾನ ಪೂಜಾರಿ ಅಭಿಮಾನಿಗಳಾದ ಶರಣಪ್ಪ ಚನ್ನೂರ್ ಹೇಳಿದರು.”