ಸುದ್ದಿಮೂಲ ವಾರ್ತೆ ರಾಯಚೂರು, ಜ.05:
ಮುನ್ನೂರು ಕಾಪು ಯೂತ್ ಸೇವಾ ಟ್ರಸ್ಟ್ನ ನೂತನ ವರ್ಷದ ಕ್ಯಾಾಲೆಂಡರ್ ಮಾಜಿ ಶಾಸಕ ಎ.ಪಾಪಾರೆಡ್ಡಿಿ ಮತ್ತು ಸಮಾಜದ ಹಿರಿಯರು ಬಿಡುಗಡೆ ಮಾಡಿದರು.
ನಗರದ ಅಯ್ಯಪ್ಪ ಸ್ವಾಾಮಿ ದೇವಸ್ಥಾಾನದಲ್ಲಿ ಅಯ್ಯಪ್ಪ ಸ್ವಾಾಮಿ ಮಾಲಾಧಾರಿಗಳ ಸಮ್ಮುಖದಲ್ಲಿ ಕ್ಯಾಾಲೆಂಡರ್ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಮುನ್ನೂರು ಕಾಪು ಯೂತ್ ಟ್ರಸ್ಟ್ ಕಳೆದ 12 ವರ್ಷಗಳಿಂದ ನಿರಂತರ ಸಾಮಾಜಿಕ ಚಟುವಟಿಕೆಯಲ್ಲಿ ಗುರುತಿಸಿಕೊಂಡಿರುವುದು ಸಂತಸ ತಂದಿದೆ.
ನಗರದ ಸುತ್ತಮುತ್ತಲಿನ ಪ್ರದೇಶದಲ್ಲಿ 15 ಸಾವಿರ ಸಸಿಗಳ ನೆಡುವ, 50 ಜನರಿಗೆ ಉಚಿತ ನೇತ್ರ ಚಿಕೆತ್ಸೆೆ ಹಾಗೂ ಬೇಸಿಗೆ ಶಿಬಿರ, ಕೋವಿಡ್ ಸಂದರ್ಭದಲ್ಲಿ ನೆರವು ನೀಡಿದ್ದಾರೆ ಎಂದರು.
ಅರೋಗ್ಯ ಶಿಕ್ಷಣ ಸೇರಿ ಸಮಾಜಮುಖಿ ಹೊಸ ವರ್ಷ ದಲ್ಲಿ ಮತ್ತಷ್ಟು ಸಮಾಜಿಕ ಕಾರ್ಯಕ್ರಮ ಗುರುತಿಸಿ ಕೊಂಡು ಇತರರಿಗೆ ಮಾದರಿಯಾಗಲಿ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಮುನ್ನೂರು ಕಾಪು ಸಮಾಜದ ಯೂತ್ ಸೇವಾ ಟ್ರಸ್ಟ್ ಅಧ್ಯಕ್ಷ ಅಮರೇಶ ರೆಡ್ಡಿಿ, ಕುಕ್ಕಲ ವಿನಯ ರೆಡ್ಡಿಿ, ಜಿ. ನಾಗರಾಜ,ಯು.ಗಣೇಶರೆಡ್ಡಿಿ, ಯು. ಗೋವರ್ಧನ ರೆಡ್ಡಿಿ, ನಾಗರಾಜ ಕ್ರೇನ್, ಕೆ. ಹರಿ, ಜಿ. ವೀರೇಶ, ಬಿ. ರಾಜು, ಅನಿಲ್, ಅಶೋಕ, ರಮೇಶ, ನಿಂಬೆಕಾಯಿ ಭೀಮರೆಡ್ಡಿಿ, ಪುಂಡ್ಲ ರಾಜೇಂದ್ರ ರೆಡ್ಡಿಿ, ನಾಗರಾಜ ಗುರುಸ್ವಾಾಮಿ, ನರಸಿಂಹಲು ಸ್ವಾಾಮಿ, ಈರಪ್ಪ ಸ್ವಾಾಮಿ, ಮಹೇಂದ್ರ ಸ್ವಾಾಮಿ, ಭಗವಂತ ಸ್ವಾಾಮಿ, ಮದ್ದು ರಾಮಸ್ವಾಾಮಿ, ಗೋಪಿಸ್ವಾಾಮಿ, ಅಯ್ಯಪ್ಪ ಸ್ವಾಾಮಿ ಮಾಲಾಲಧಾರಿಗಳು, ಮುನ್ನೂರು ಕಾಪು ಸಮಾಜದ ಎಲ್ಲಾ ಮುಖಂಡರು ಉಪಸ್ಥಿಿತರಿದ್ದರು.
ಮುನ್ನೂರು ಕಾಪು ಕ್ಯಾಲೆಂಡರ್ ಬಿಡುಗಡೆ ಸಮಾಜಮುಖಿ ಸೇವೆ ಶ್ಲಾಘನಿಯ – ಪಾಪಾರೆಡ್ಡಿ

