ಸುದ್ದಿಮೂಲ ವಾರ್ತೆ ರಾಯಚೂರು, ಜ.19:
ಜಿಲ್ಲೆೆಯ ಸಿಂಧನೂರಿನ ಗೋಮರ್ಸಿ ಬಳಿಯ ಹಳ್ಳದಲ್ಲಿರುವ ಪಟ್ಟಾಾ ಭೂಮಿಯಲ್ಲಿ ಮರಳು ಕ್ವಾಾರಿಗೆ ಅನುಮತಿ ಪಡೆದು ನಿಯಮ ಉಲ್ಲಂಘಿಸಿ ಸಾಗಾಣಿಕೆ ಮಾಡಲಾಗುತ್ತಿಿದ್ದು ಕ್ರಮ ವಹಿಸುವಂತೆ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಾಧ್ಯಕ್ಷ ಗಂಗಣ್ಣ ಡಿಶ್ ಒತ್ತಾಾಯಿಸಿದರು.
ನಗರದ ಪತ್ರಿಿಕಾ ಭವನದಲ್ಲಿ ಸುದ್ದಿಗೋಷ್ಠಿಿಯಲ್ಲಿ ಮಾತನಾಡಿ, ಸರ್ವೆ ನಂ.148/್ಡ/1 ಹಾಗೂ 5ರಲ್ಲಿರುವ 6 ಎ 10 ಗುಂಟೆ ಭೂಮಿಯಲ್ಲಿ ಖನಿಜ ವಿಭಾಗದಿಂದ ಮುಂದಿನ ಐದು ವರ್ಷಕ್ಕೆೆ ನಿಯಮ ಷರ್ತತುಗಳಿನುಗುಣವಾಗಿ ಮರಳು ಗಣಿಗಾರಿಕೆಗೆ ಅವಕಾಶ ನೀಡಲಾಗಿದೆ.
ಆದರೆ, ನಿಗದಿ ಪಡಿಸಿದ ಸ್ಥಳದಲ್ಲಿ ಬಿಟ್ಟು ನಿಯಮ ಉಲ್ಲಂಘಿಸಿದ್ದಾಾರೆ. ಇದರಿಂದ ಅಕ್ಕಪಕ್ಕದ ಜಮೀನುಗಳಿಗೂ ಸಮಸ್ಯೆೆಯಾಗಿದೆ, ಸಾಗಣೆ ವೇಳೆ ಪ್ರಯಾಣಿಕರ ಮೇಲೂ ಪರಿಣಾಮ ಬೀರುತ್ತಿಿದೆ. ಅಳತೆ ಮಾಡದೆ ಸಾಗಣೆ ಮಾಡಲಾಗುತ್ತಿಿದೆ, ಹಗಲು ರಾತ್ರಿಿಯೆನ್ನದೆ ಸಾಗಣೆ ನಡೆಸಿದೆ ಈ ಬಗ್ಗೆೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ದೂರು ಸಲ್ಲಿಸಿದರೂ ಕ್ರಮ ವಹಿಸುತ್ತಿಿಲ್ಲ ಎಂದು ಆಪಾದಿಸಿದರು.
ಮರಳು ತಪಾಸಣೆ ಕೇಂದ್ರಗಳು ಹೆಸರಿಗಷ್ಟೆೆ ಎನ್ನುವಂತಿದ್ದು ಅಧಿಕಾರಿಗಳೆ ಇಲ್ಲದ ಕಾರಣ ಅನಧಿಕೃತವಾಗಿ ಸಾಗಣೆಯಾಗುತ್ತಿಿದೆ ಕೃಷ್ಣಾಾ ನದಿಯ ಪಕ್ಕದ ಲಿಂಗದಳ್ಳಿಿಘಿ, ಮುದುಗೋಟ, ಭಾಗೂರು, ಹೇರುಂಡಿಯ ಅಕ್ರಮವಾಗಿ ಮರಳು ಸಾಗಣೆ ಮಾಡುತ್ತಿಿದ್ದು ಕೂಡಲೆ ಖುದ್ದು ಸ್ಥಳ ಪರಿಶೀಲಿಸಿ ನಿಯಮ ಪಾಲನೆ ಬಗ್ಗೆೆ ಗಮನಿಸಿ ತಪ್ಪಿಿತಸ್ಥರ ವಿರುದ್ಧ ಕ್ರಮ ಜರುಗಿಸಲು ಆಗ್ರಹಿಸಿದರು.
ಸುದ್ದಿಗೋಷ್ಠಿಿಯಲ್ಲಿ ರಾಮಕೃಷ್ಣ ಭಜಂತ್ರಿಿಘಿ, ವೀರೇಶ ಸೋನಾ, ನಂದಪ್ಪ ಪಿ ಮಡ್ಡಿಿಘಿ, ಗುರುನಾಥರೆಡ್ಡಿಿಘಿ, ಭೀಮಣ್ಣಘಿ, ಎಸ್.ಎಸ್.ಪಾಷಾ ಇತರರಿದ್ದರು.

