ಸುದ್ದಿಮೂಲ ವಾರ್ತೆ
ಬೇತಮಂಗಲ, ಜು 13 : ಸಮಾಜದಲ್ಲಿ ಪ್ರಸ್ತುತ ದಲಿತರ ಮೇಲೆ ನಡೆಯತ್ತಿರುವ ದೌರ್ಜನ್ಯ ಮತ್ತು ಬೋಡಗುರ್ಕಿ ಗ್ರಾಮದಲ್ಲಿ ನಡೆದ ಮರ್ಯಾದೆ ಹತ್ಯೆಯನ್ನು ಖಂಡಿಸಿ ಜು. 16 ರಂದು ನಡೆಯುವ ಬೋಡಗುರ್ಕಿ ಚಲೋ ಕಾರ್ಯಕ್ರಮಕ್ಕೆ ಸಂಪೂರ್ಣ ಬೆಂಬಲ ನೀಡುವುದಾಗಿ ಅಂಬೇಡ್ಕರ್ ಸಮತಾದಳ ರಾಜ್ಯಾದ್ಯಕ್ಷ ಸಂದ ಮುನಿಸ್ವಾಮಿ ತಿಳಿಸಿದರು.
ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಈ ಕಲಿಯುಗದಲ್ಲಿಯೂ ಸಹ ದಲಿತರ ಮೇಲೆ ಜಾತಿ ನಿಂದನೆ ಮಾಡುತ್ತಿದ್ದಾರೆ. ಮನುಷ್ಯರ ನಡುವೆ ಕೀಳು-ಮೇಲು ಎಂಬ ಭಾವನೆಗಳನ್ನು ಹುಟ್ಟುಹಾಕಿ ಸಮಾಜದಲ್ಲಿ ಗಲಭೆಗಳನ್ನು ಸೃಷ್ಟಿ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಂಗಾರಪೇಟೆ ತಾಲ್ಲೂಕಿನ ಕಾಮುಸಮುದ್ರ ಬೋಡಗುರ್ಕಿ ಚಲೋ ಎಂಬ ಚಳುವಳಿಗೆ ಮಹಿಳಾ ಸಂಘಟನೆಯ ರಾಜ್ಯಾದ್ಯಕ್ಷ ಭಾರತಮ್ಮ ಮತ್ತು ಕೋಲಾರ ಜಿಲ್ಲೆಯ ಎಲ್ಲಾ ದಲಿತ ಸಂಘಟನೆಗಳ ನಾಯಕರುಗಳು ಭಾಗವಹಿಸುತ್ತಿದ್ದು, ಎಲ್ಲಾ ದಲಿತ ಹಾಗೂ ಸಾರ್ವಜನಿಕರು ಭಾಗವಹಿಸಿ ನೊಂದ ಮೃತ ಗಂಗಾಧರ್ ಕುಟುಂಬಸ್ಥರಿಗೆ ನ್ಯಾಯ ಒದಗಿಸಿ ಕೊಡಬೇಕಾಗಿ ಮನವಿ ಮಾಡಿದರು.