ಸುದ್ದಿಮೂಲ ವಾರ್ತೆ ಮಾನ್ವಿ, ಜ.08:
ಶಿಕ್ಷಕರ ನ್ಯಾಾಯಯುತ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅಖಿಲ ಭಾರತ ಶಿಕ್ಷಕರ ೆಡರೇಷನ್ ನವದೆಹಲಿ ಹಾಗೂ ಕರ್ನಾಟಕ ರಾಜ್ಯ ಪ್ರಾಾಥಮಿಕ ಶಾಲಾ ಶಿಕ್ಷಕರ ಬೆಂಗಳೂರು ಇವರ ನೇತೃತ್ವದಲ್ಲಿ ಗುರುವಾರ ದೇಶದಾದ್ಯಂತ ಪ್ರಾಾಥಮಿಕ ಶಾಲಾ ಶಿಕ್ಷಕರು ತಮ್ಮ ಕರ್ತವ್ಯದ ಸ್ಥಳಗಳಲ್ಲಿ ಕಪ್ಪುು ಪಟ್ಟಿಿ ಕಟ್ಟಿಿಕೊಂಡು ಕರ್ತವ್ಯ ಮಾಡಬೇಕೆನ್ನುವ ಕರೆಯ ಮೇರೆಗೆ ಮಾನ್ವಿಿಯಲ್ಲಿ ಕೂಡಾ ಪ್ರಾಾಥಮಿಕ ಶಾಲಾ ಶಿಕ್ಷಕರು ತೋಳಿಗೆ ಕಪ್ಪುುಪಟ್ಟಿಿ ಕಟ್ಟಿಿಕೊಂಡು ಪಾಠ ಬೋಧನೆ ಮಾಡುವ ಮೂಲಕ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಶಿಕ್ಷಕರ ಸಂಘದ ಅಧ್ಯಕ್ಷ ಸಂಗಮೇಶ ಮುಧೋಳ ಮಾತನಾಡಿ ರಾಜ್ಯ ಮತ್ತು ರಾಷ್ಟ್ರ ಸಂಘದ ಕರೆಯ ಮೇರೆಗೆ ನಮ್ಮ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ ಮಾಡಲಾಗಿದೆ. ನಮ್ಮ ಪ್ರಮುಖ ಬೇಡಿಕೆಗಳಾದ
ಸೇವಾ ನಿರತ ಶಿಕ್ಷಕರಿಗೆ ಟಿಇಟಿ ಕಡ್ಡಾಾಯವನ್ನು ತೆಗೆದು ಹಾಕಬೇಕು, ನೂತನ ಪಿಂಚಣಿ ಯೋಜನೆ ರದ್ದುಪಡಿಸಿ ಹಳೆ ಪಿಂಚಣಿ ಯೋಜನೆ ಜಾರಿ ಮಾಡಬೇಕು, ಸಮಾನ ಕೆಲಸಕ್ಕೆೆ ಸಮಾನ ವೇತನ ನೀಡಬೇಕು, ಗುತ್ತಿಿಗೆ ಆಧಾರದ ನೇಮಕಾತಿಗಳನ್ನು ಕೈಬಿಟ್ಟು ಖಾಯಂ ಶಿಕ್ಷಕರನ್ನು ನೇಮಿಸಬೇಕು ಹಾಗೂ ಕೇಂದ್ರ ಮಾದರಿ ವೇತನವನ್ನು ರಾಜ್ಯದ ಪ್ರಾಾಥಮಿಕ ಶಿಕ್ಷಕರಿಗೆ ನೀಡಬೇಕು ಎಂದು ಒತ್ತಾಾಯಿಸಿದರು.
ಈ ಪ್ರತಿಭಟನೆಯಲ್ಲಿ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಪದ್ಮಾಾ, ಉಪಾಧ್ಯಕ್ಷರಾದ ಲಕ್ಷ್ಮಿಿದೇವಿ, ಶ್ರೀಕುಮಾರ, ಸಹ ಕಾರ್ಯದರ್ಶಿಗಳಾದ ಜಯಶೀಲ, ಗೌರವಾಧ್ಯಕ್ಷ ಶಿವಗೇನಿ ನಾಯಕ, ಜಿಲ್ಲಾ ಸಹ ಕಾರ್ಯದರ್ಶಿ ಬಸವರಾಜ ಜಂಗಮರಹಳ್ಳಿಿ, ಪ್ರತಿನಿಧಿಗಳಾದ ವೆಂಕನಗೌಡ, ವಿಜಯಕುಮಾರ, ಪ್ರಕಾಶಬಾಬು, ಶ್ರೀನಿವಾಸ, ಬಸವರಾಜ, ಶಂಕ್ರಪ್ಪ, ಮಂಜುನಾಥ, ಅನುದಾನಿತ ಶಾಲಾ ಶಿಕ್ಷಕರ ಸಂಘದ ಪ್ರತಿನಿಧಿಗಳಾದ ಹರ್ಷವರ್ಧನ, ಬಸನಗೌಡ, ಮಂಜುನಾಥ ಹಾಗೂ ಬಿ.ಆರ್.ಪಿ ಸಿದ್ದಲಿಂಗಯ್ಯ, ಸಿ.ಆರ್.ಪಿ ಗಳಾದ ನಾಗರಾಜ, ಶ್ರೀಧರರಾವ್ ದೇಸಾಯಿ, ಶಿಕ್ಷಕರಾದ ಸುರೇಶ, ರಾಘಮ್ಮ, ಬಸಮ್ಮ, ಲಕ್ಷ್ಮೀದೇವಿ, ಶಿವಕುಮಾರ, ಮಹಾಂತೇಶ ಮುಂತಾದವರು ಭಾಗವಹಿಸಿದ್ದರು.
ಮಾನ್ವಿಯಲ್ಲಿ ಕಪ್ಪುು ಪಟ್ಟಿ ಕಟ್ಟಿ ಪ್ರತಿಭಟನೆ ಸೇವಾ ನಿರತ ಶಿಕ್ಷಕರಿಗೆ ಟಿಇಟಿ ಕಡ್ಡಾಯ ಬೇಡ – ಸಂಗಮೇಶ ಮುಧೋಳ

