ಸುದ್ದಿಮೂಲವಾರ್ತೆ
ಕೊಪ್ಪಳ ಅ 17:ಸ್ಲಗ್: ಬಿಜೆಪಿ ಪ್ರತಿಭಟನೆ ರಾಜ್ಯದ ಕೂಡ್ಗಿ ವಿದ್ಯುತ್ ಸ್ಥಾವರದಿಂದ ವಿದ್ಯುತ್ ಖರೀದಿಸಲು ರಾಜ್ಯ ಸರಕಾರ ಸಿದ್ದವಿಲ್ಲ. ಯಾಕಂದರೆ ಇಲ್ಲಿ ವಿದ್ಯುತ್ ಖರೀದಿಸಿದರೆ ಕಮಿಷನ್ ಸಿಗುವುದಿಲ್ಲ ಎಂಬ ಕಾರಣಕ್ಕೆ ರೈತರನ್ನು ಕೊಲೆ ಮಾಡುತ್ತಿದ್ದಾರೆ ಎಂದು ಕೊಪ್ಪಳ ಸಂಸದ ಸಂಗಣ್ಣ ಕರಡಿ ಹೇಳಿದರು.
ಅವರು ಇಂದು ಕೊಪ್ಪಳದಲ್ಲಿ ಕಾಂಗ್ರೆಸ್ ಸರಕಾರದ ವಿರುದ್ದ ಹೋರಾಟ ಸಂದರ್ಭದಲ್ಲಿ ಭಾಷಣ ಮಾಡಿದರು.ಯಡಿಯೂರಪ್ಪ ಸರಕಾರದಲ್ಲಿಕ ಕೂಡ್ಗಿ ವಿದ್ಯುತ್ ಸ್ಥಾವರ ಸ್ಥಾಪನೆಯಾಗಿದೆ.ಇಲ್ಲಿ 1065 ಮೇಗಾ ವ್ಯಾಟ ವಿದ್ಯುತ್ ಸರಬರಾಜಿಗೆ ಅವಕಾಶವಿದೆ. ಪ್ರತಿ ಯೂನಿಟ್ 5.10 ರೂಪಾಯಿ ಕೊಟ್ಟು ಖರೀದಿಸಬೇಕು ಎಂದರು.
ರಾಜ್ಯ ಸರಕಾರ ಕೇವಲ ಗ್ಯಾರಂಟಿ ಯೋಜನೆ ಜಾರಿಗೆ ಒತ್ತು ನೀಡಿದೆ.ಆಹಾರ ಉತ್ಪಾದಿಸುವ ರೈತರನ್ನು ಕಡೆಗಣಿಸಿದೆ.ಈ ಹಿಂದೆ 7 ತಾಸು ನೀಡುತ್ತಿದ್ದ ವಿದ್ಯುತ್ ಈಗ 5 ತಾಸಿಗೆ ಇಳಿಸಿದೆ ಇದು ರೈತರಿಗೆ ಅನ್ಯಾಯ ಮಾಡಿದೆ ಎಂದು ಆರೋಪಿಸಿದರು.
ಕಿಸಾನ ಸಮ್ಮಾನ ಯೋಜನೆಯಲ್ಲಿ ರಾಜ್ಯ ಸರಕಾರ ನೀಡುತ್ತಿದ್ದ 4000 ಸ್ಥಗಿತಗೊಳಿಸಿದ್ದಾರೆ. ಈ ಹಿಂದೆ ಕೇಂದ್ರ ಸರಕಾರದಿಂದ 6000 ಹಾಗು ರಾಜ್ಯ ಸರಕಾರದಿಂದ 4000 ರೂಪಾಯಿ ನೀಡಲಾಗುತ್ತಿತ್ತು. ಈ ಕೇಂದ್ರ ಸರಕಾರದ ಹಣ ಮಾತ್ರ ಬರುತ್ತಿದೆ ಎಂದರು.
ಬಿಲ್ಡರ್ ಮನೆಯಲ್ಲಿ ಕೋಟಿ ಕೋಟಿ ಹಣ ಸಿಕ್ಕಿದೆ.ಈ ಹಣದ ಮೂಲದ ಬಗ್ಗೆ ಸಿಬಿಐ ತನಿಖೆಯಾಗಬೇಕು ಎಂದು ಅವರು ಆಗ್ರಹಿಸಿದರು.
ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಕಾರ್ಯಕರ್ತರು ಕೊಪ್ಪಳ ನಗರದ ಬಸವೇಶ್ವರ ವೃತ್ತದಲ್ಲಿ ಪ್ರತಿಭಟನೆ ಮಾಡಿದರು.
ರಾಜ್ಯದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ, ಸಿಎಂ ಹಾಗೂ ಸರ್ಕಾರದ ವಿರುದ್ಧ ಘೋಷಣೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.ಗುತ್ತಿಗೆದಾರರು,ಬಿಲ್ಡರ್ ಮನೆಗಳಲ್ಲಿ ಕೋಟಿ,ಕೋಟಿ ಹಣ ಪ್ರಕರಣದಲ್ಲಿ ಕಾಂಗ್ರೆಸ್ ಕೈವಾಡವಿದೆ ಎಂದು ಆರೋಪಿಸಿದರು.ಪಂಚರಾಜ್ಯ ಚುನಾವಣೆಗೆ ರಾಜ್ಯ ಕಾಂಗ್ರೆಸ್ ನಿಂದ ಫಂಡಿಂಗ್ ಮಾಡುತ್ತಿದ್ದಾರೆ. ಇದೇ ವೇಳೆ 9…9…9…9 ತೋಳ ಬಿತ್ತು ಹಳ್ಳಕ್ಕೆ. ತೋಳ ಅಂದರೆ ಯಾರು,
ಸಿಎಂ,ಡಿಸಿಎಂ ಎಂದು ಸಂಸದರ ವ್ಯಂಗ್ಯ ವಾಡಿದರು.
ಪ್ರತಿಭಟನೆಯಲ್ಲಿ ,ಕುಷ್ಟಗಿ ಶಾಸಕ ದೊಡ್ಡನಗೌಡ ಪಾಟೀಲ್, ವಿಧಾನಪರಿಷತ್ ಸದಸ್ಯೆ ಹೇಮಾವತಿ ನಾಯಕ. ಸುನೀಲ ಹೆಸರೂರು. ಚಂದ್ರಶೇಖರ ಹಲಗೇರಿ, ಮಹಾಲಕ್ಷ್ಮಿ ಕಂದಾರಿ, ಗೀತಾ ಪಾಟೀಲ. ಅಶೋಕ ಬಳೂಟಗಿ ಸೇರಿದಂತೆ ಅನೇಕರು ಭಾಗಿಯಾಗಿದ್ದರು.