ಸುದ್ದಿಮೂಲವಾರ್ತೆ
ಕೊಪ್ಪಳ,ನ.6: ಕ್ಷೇತ್ರದಲ್ಲಿ ಅಭಿವೃದ್ದಿಗಾಗಿ ಸಚಿವರನ್ನು ಭೇಟಿಯಾದಾಗ ಸರಿಯಾಗಿ ಸ್ಪಂದನೆ ಸಿಗದಿದ್ದಕ್ಕೆ ಅಸಮಾದಾನ ವ್ಯಕ್ತಪಡಿಸಿದ್ದೆ. ಹಾಗಂತ ಅದು ಪಕ್ಷದ ವಿರೋಧಿ ಹೇಳಿಕೆ ಅಲ್ಲ ಎಂದು ಸಂಸದ ಸಂಗಣ್ಣ ಕರಡಿ ಹೇಳಿದರು.
ಅವರು ಇತ್ತೀಚಿಗೆ ತಮ್ಮ ಪಕ್ಷದ ಬಗ್ಗೆ ಅಸಮಾದಾನ ಹೊರಹಾಕಿದ್ದರು.
ಹಿಂದಿನ ಸರಕಾರದಲ್ಲಿ ನಮ್ಮವರೇ ಕೆಲಸ ಮಾಡಲಿಲ್ಲ ಹೀಗಾಗಿ ಪಕ್ಷದಿಂದ ಹೊರಹೋಗಬೇಕೆಂದಿದ್ದೆ. ಲೋಕೋಪಯೋಗಿ ಸಚಿವರಾಗಿದ್ದ ಸಿ ಸಿ ಪಾಟೀಲ. ಗೋವಿಂದ ಕಾರಜೋಳರಿದ್ದಾಗಲೂ ಕೆಲಸವಾಗಲಿಲ್ಲ. ಹಿಂದಿನ ಸರಕಾರ ಹಾಗು ಸಚಿವರ ವಿರುದ್ದ ಅಸಮಾದಾನ ವ್ಯಕ್ತಪಡಿಸುತ್ತಾ ಸ್ವಾಭಿಮಾನಕ್ಕೆ ಧಕ್ಕೆಯಾಗಿ ಹೊರ ಬರಬೇಕೆಂದಿದ್ದೆ ಒಮ್ಮೊಮ್ಮೆ ಗುಲಾಮಿತನ ಅನಿಸಿ ಬಿಡ್ತು
ನಮ್ಮ ಜಿಲ್ಲೆಯಲ್ಲಿ ನನ್ನನ್ನು ಹಿಡಿದು ಡೈನಾಮಿಕ ಲೀಡರ್ ಇಲ್ಲದೆ ಇರೋದು ಅಭಿವೃದ್ದಿಗೆ ಹಿನ್ನೆಡೆಯಾಗಿದೆ ಎಂದು ಕೊಪ್ಪಳದಲ್ಲಿ ಜಿಲ್ಲಾ ನ್ಯಾಯಲಯಕ್ಕೆ ಶಂಕುಸ್ಥಾಪನೆಯ ಕಾರ್ಯಕ್ರಮದಲ್ಲಿ ಬಹಿರಂಗವಾಗಿ ಅಸಮಾದಾನ ಹೊರಹಾಕಿದ್ದರು.
ಈ ಕುರಿತು ಇಂದು ಸ್ಪಷ್ಠನೆ ನೀಡಿ ನಾನೊಬ್ಬ ಜನಪ್ರತಿನಿಧಿ, ಕೊಪ್ಪಳ ಜಿಲ್ಲೆಯಾಗಿ ೨೬ ವರ್ಷವಾಗಿದೆ. ಕೊಪ್ಪಳದವರೊಬ್ಬರೂ ಮಂತ್ರಿಯಾಗುತ್ತಿಲ್ಲ. ಮಂತ್ರಿಯಾದರೆ ಕೊಪ್ಪಳ ಜಿಲ್ಲೆಯ ಅನೇಕ ಯೋಜನೆಗಳಿಗೆ ಚಾಲನೆ ಸಿಗುತ್ತಿದ್ದವು.ನ್ಯಾಯಾಲಯದ ಕಟ್ಟಡ ನಿರ್ಮಾಣ ವಿಚಾರದಲ್ಲಿ ನನಗೆ ಸಾಕಷ್ಟು ಮುಜುಗರವಾಯಿತು.ನಮ್ಮ ಸರಕಾರವಿದ್ದರೂ ಹಣ ಕೊಡಲಿಲ್ಲ. ಆಗ ಕಾರಜೋಳ ಅವರನ್ನೂ ಭೇಟಿಯಾಗಿದ್ದೇನೆ. ಸಿಸಿ ಪಾಟೀಲ್ ಅವರನ್ನೂ ಭೇಟಿ ಮಾಡಿದ್ದೆ. ಹಣಕಾಸಿನ ಪರಿಸ್ಥಿತಿ ನೋಡಿಕೊಂಡು ಮಾಡುತ್ತೇನೆ ಎಂದಿದ್ದರು.ಬಳಿಕ ವಕೀಲರು ಪಿಐಎಲ್ ಹಾಕಿ ಯೋಜನೆಗೆ ಹಣ ಪಡೆಯಬೇಕಾಯಿತು.ಆ ಕಾರ್ಯಕ್ರಮದಲ್ಲಿ ನಾವು ಭಾಗವಹಿಸಿದಾಗ ಏನಂತ ಹೇಳಬೇಕು.ಹಾಗಂತ ಪಕ್ಷ ವಿರೋಧಿಯಲ್ಲ. ಈ ಸರಕಾರದ ಹಣೆಬರಹವೂ ಅಷ್ಟೆ.ಅಭಿವೃದ್ಧಿ ವಿಚಾರದಲ್ಲಿ ನಮಗೆ ಸೌಲಭ್ಯಗಳು ಬೇಡವಾ? ಎಂದು ಹೇಳಿದರು.
ಬಿಜೆಪಿಯವರು ರಾಜ್ಯಾಧ್ಯಕ್ಷರನ್ನು ನೇಮಕ ಮಾಡಿಲ್ಲ ಎನ್ನುವ ವಿಚಾರವಾಗಿ ಮಾತನಾಡಿ ಈ ಹಿಂದೆ ಎಐಸಿಸಿ ಅಧ್ಯಕ್ಷರನ್ನೇ ಕಾಂಗ್ರೆಸ್ ಆಯ್ಕೆ ಮಾಡಿರಲಿಲ್ಲ. ನಮ್ಮದೇನು ಹೇಳುತ್ತಾರೆ ಎಂದು ಪ್ರಶ್ನಿಸಿದರು.
ಕರ್ನಾಟಕ ಕೊಳ್ಳೆ ಹೊಡೆಯುತ್ತಿದ್ದಾರೆ ಎಂದು ಪ್ರಧಾನಿ ಹೇಳೀರೋದು ನೂರಕ್ಕೆ ನೂರರಷ್ಟು ಸತ್ಯ ಎಂದು ಹೇಳಿದರು.