ಸುದ್ದಿಮೂಲವಾರ್ತೆ
ಕೊಪ್ಪಳ,ಆ.21:ಕೊಪ್ಪಳ ಜಿಲ್ಲೆಯು ತೋಟಗಾರಿಕೆ ಬೆಳೆಯು ಅತಿವೇಗದಲ್ಲಿ ಬೆಳೆಯುತ್ತಿದೆ. ಈ ಸಂದರ್ಭದಲ್ಲಿ ಇಲ್ಲಿಂದ ನಿರ್ಯಾತವಾಗುವುದು ರೈತರಿಗೆ ಅನುಕೂಲವಾಗಲಿದೆ ಎಂದು ಸಂಸದ ಸಂಗಣ್ಣ ಕರಡಿ ಹೇಳಿದರು.
ಅವರು ಕೊಪ್ಪಳದಲ್ಲಿ ಅಂಚೆ ಕಚೇರಿ ರಫ್ತು ಕೇಂದ್ರ ಆರಂಭ ಸಂದರ್ಭದಲ್ಲಿ ಮಾತನಾಡಿದರು ಸಿರಿಧಾನ್ಯ ಬೆಳೆಯುವ ಸಣ್ಣ ಹಿಡುವಳಿದಾರರಿಗೆ ರಫ್ತು ಆಗುವುದು ರೈತರಿಗೆ ಅನುಕೂಲವಾಗಲಿದೆ. ಇದರಿಂದಾಗಿ ದೇಶದ ಆರ್ಥಿಕತೆ ಬೆಳೆಯುತ್ತಿದೆ ಅದಕ್ಕೆ ನರೇಂದ್ರ ಮೋದಿ ಕಾರಣ ಎಂದರು.
ಗ್ಯಾರಂಟಿ ಯೋಜನೆಗೆ ಖಜಾನೆ ಹಣ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಆದರೆ ಗುಣಮಟ್ಟದ ವಿದ್ಯುತ್ ನೀಡಲು ಆಗುತ್ತಿಲ್ಲ. ಕಾಂಗ್ರೆಸ್ಸಿನವರು ಮನಮೋಹನಸಿಂಗರನ್ನು ನೆನೆಯಬೇಕು ಆದರೆ ಕಾಂಗ್ರೆಸ್ ನವರು ನೆನೆಯುತ್ತಿಲ್ಲ ಎಂದರು.
ಈ ಸಂದರ್ಭದಲ್ಲಿ ಮಾತನಾಡಿದ ಪ್ರಗತಿಪರ ರೈತ ದೇವೇಂದ್ರಪ್ಪ ಬಳೂಟಗಿ ತೋಟಗಾರಿಕೆಯಲ್ಲಿ ಕೊಪ್ಪಳ ಜಿಲ್ಲೆಯು ಮುಂದೆ ಇದೆ. ತೋಟಗಾರಿಕೆ ಬೆಳೆಗಳನ್ನು ಮಾರಾಟ ಮಾಡಲು ಪರದಾಡುವ ಸ್ಥಿತಿ ಇದೆ. ಆದರೆ ಈಗ ವಿದೇಶಕ್ಕೆ ಕಳುಹಿಸುತ್ತಿರುವುದು ರೈತರಿಗೆ ಸಾಕಷ್ಟು ಅನುಕೂಲವಾಗಲಿದೆ. ಕೊಪ್ಪಳ ಜಿಲ್ಲೆಯಲ್ಲಿ ಯಾಲಕ್ಕಿ, ಮೆಣಸು, ಅಡಿಕೆ, ಡ್ರಾಗನ್ ಬೆಳೆಯಲಾಗುತ್ತಿದೆ.
ಇದೇ ಸಂದರ್ಭದಲ್ಲಿ ಮಾತನಾಡಿದ ಯಂಕಣ್ಣ ಯರಾಸಿ ತೀರಾ ನಿರ್ಲಕ್ಷ್ಯಕ್ಕೊಳಗಾಗಿರುವುದು ರೈತರು. ರೈತರ ಬೆಳೆದ ಬೆಳೆಗೆ ಬೆಂಬಲ ಬೆಲೆ ಸಿಗುತ್ತಿಲ್ಲ. ರೈತರು ಬೆಳೆಯುವ ಬೆಳೆಯು ರಫ್ತು ಮಾಡಲು ಇರುವ ತಂತ್ರಜ್ಞಾನ ಮಾಹಿತಿ ನೀಡಬೇಕು. ರೈತರಿಂದ ಖರೀದಿ ಮಾಡಿದ ಬೆಳೆಯನ್ನು ಮಧ್ಯವರ್ತಿಗಳು ದುಬಾರಿಯಾಗಿ ಮಾರುತ್ತಿದ್ದಾರೆ. ಈ ಸಂದರ್ಭದಲ್ಲಿ ಇಲ್ಲಿಂದ ರಫ್ತು ಮಾಡುವ ಬೆಳೆಗಳಿಂದ ಲಾಭವಾಗುತ್ತದೆ ಎಂದರು.
ಇದೇ ಸಂದರ್ಭದಲ್ಲಿ ಮಾತನಾಡಿ ತೋಟಗಾರಿಕೆಯ ಉಪನಿರ್ದೇಶಕ ಕೃಷ್ಣಾ ಉಕ್ಕುಂದ ಕೊಪ್ಪಳ ಜಿಲ್ಲೆಯಿಂದ ಉತ್ಕೃಷ್ಟ ಬೆಳೆಯನ್ನು ಬೆಳೆದಿದ್ದಾರೆ. ದಾಳಿಂಬೆ. ಮಾವು ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಸಸ್ಯ ಸಂತೆಯಲ್ಲಿ ಮಾವು ಸಸಿ ಖರೀದಿಯಾಗಿದೆ. ಜಿಲ್ಲೆಯಿಂದ ಸಾಕಷ್ಟು ಮಾವು ಬೆಳೆದು ಮಾರುಕಟ್ಟೆಯಲ್ಲಿ ಲಾಭ ಮಾಡಲಾಗುತ್ತಿದೆ. ಇಲ್ಲಿಂದ ಮಾವು ರಫ್ತು ಈಗಾಗಲೇ ಆಗುತ್ತಿದೆ. ಮುಂದಿನ ದಿನಗಳಲ್ಲಿ ಅಂಚೆ ಇಲಾಖೆಯಿಂದ ರಫ್ತು ಮಾಡುವ ಕೇಂದ್ರ ಆರಂಭವಾಗುತ್ತಿರುವುದು ರೈತರಿಗೆ ಅನುಕೂಲವಾಗುತ್ತದೆ. ಕೊಪ್ಪಳವು ಅತಿ ಹೆಚ್ಚು ಅಭಿವೃದ್ಧಿ ಹೊಂದುವ ಜಿಲ್ಲೆಯಾಗಲಿದೆ ಎಂದರು.
ವೇದಿಕೆಯಲ್ಲಿ ರಾಜು ಆಡೂರು, ಎ ಜಿ ಭೀಮಸೇನರಾವ್, ಇದ್ದರು.ಜಿ ಎನ್ ಹಳ್ಳಿ ಸ್ವಾಗತಿಸಿದರು . ಗದಗ ಅಂಚೆ ಎಸ್ಪಿ ಬಿ ಎನ್ ಭಂಗಿಗೌಡರ ಪ್ರಸ್ತಾವಿಕವಾಗಿ ಮಾತನಾಡಿದರು.