ಸುದ್ದಿಮೂಲ ವಾರ್ತೆ ಬೀದರ್, ಡಿ.22:
ಪಲ್ಸ್ ಪೋಲಿಯೊ ಹನಿ ಮಕ್ಕಳಿಗೆ ಸಂಜೀವಿನಿ ಇದ್ದ ಹಾಗೆ. ಪಾಲಕರು ಮಕ್ಕಳ ಅರೋಗ್ಯದ ಕಡೆ ಹೆಚ್ಚಿಿನ ಗಮನ ಹರಿಸಬೇಕು ಎಂದು ಸಾಮಾಜಿಕ ಕಾರ್ಯಕರ್ತ ಮಾರುತಿ ಮಾಸ್ಟರ್ ಹೇಳಿದರು.
ಬೀದರ ತಾಲ್ಲೂಕಿನ ಸಿರ್ಸಿ(ಎ) ಗ್ರಾಾಮದಲ್ಲಿ ಇಂದು ಪಲ್ಸ್ ಪೋಲಿಯೊ ಕಾರ್ಯಕ್ರಮ ನಿಮಿತ್ತ ಗ್ರಾಾಮದಲ್ಲಿ ಜಿಲ್ಲಾಡಳಿತ ಮತ್ತು ಕುಟುಂಬ ಕಲ್ಯಾಾಣ ಇಲಾಖೆ ವತಿಯಿಂದ ಹಮ್ಮಿಿಕೊಂಡ ಪಲ್ಸ್ ಪೋಲಿಯೊ ಲಸಿಕೆ ಹಾಕುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮುದ್ದು ಮಕ್ಕಳಿಗೆ ಲಸಿಕೆ ಹಾಕಿ ಮಾತಾನಾಡಿದರು.
ಹಿಂದೆ ಪೋಲಿಯೊ ರೋಗದಿಂದ ಕೈ ಕಾಲು ಒಂಕಾಗುವುದು, ತುಟಿಗಳು ಹರಿಯುವುದು, ದೇಹದ ವಿವಿಧ ಭಾಗಗಳು ವಿಕರಿತವಾಗಿ ಇರುವುದನ್ನು ಸರಕಾರ ಗಮನಿಸಿ ಪೋಲಿಯೊ ಲಸಿಕೆ ಮುಖಾಂತರ ಮಕ್ಕಳಲ್ಲಿ ಬರುವ ಅಂಗವಿಕಲತೆ ನಿವಾರಣೆಗೆ ಮುಂದಾಗಿ ಸರಕಾರ ಪೋಲಿಯೊ ಮುಕ್ತ ಗ್ರಾಾಮವನ್ನಾಾಗಿ ಮಾಡಲು ಪಣ ತೊಟ್ಟು ಪ್ರತಿವರ್ಷ ವಿನೂತನ ಕಾರ್ಯಕ್ರಮಗಳು ಹಮ್ಮಿಿಕೊಂಡು ಸಂಪೂರ್ಣ ಪೋಲಿಯೊ ಮುಕ್ತ ಗ್ರಾಾಮವನ್ನಾಾಗಿ ಮಾಡಲು ಹೊರಟಿದು ತುಂಬ ಸಂತೋಷದ ವಿಷಯವಾಗಿದೆ. ಇತ್ತೀಚಿನ ದಿನಗಳಲ್ಲಿ ಪೋಲಿಯೊ ಪ್ರಕರಣಗಳು ಕಡಿಮೆಯಾಗಿವೆ ಎಂದು ಹೇಳಿದರು.
ಈ ಸಂಧರ್ಭದಲ್ಲಿ ಸರಕಾರಿ ಆಯುರ್ವೇದಿಕ್ ಆಸ್ಪತ್ರೆೆಯ ವೈದ್ಯರಾದ ಡಾ.ವೈಶಾಲಿ, ಕಿರಿಯ ಪ್ರಾಾಥಮಿಕ ಆರೋಗ್ಯ ಕೇಂದ್ರದ ವೈದ್ಯ ಡಾ. ವಿಜಯಲಕ್ಷ್ಮಿಿ, ಗ್ರಾಾಮದ ಮುಖಂಡ ಅಡಿವೆಪ್ಪಾಾ ಶೇರಿಕಾರ್, ಅಂಗನವಾಡಿ ಕಾರ್ಯಕರ್ತೆಯರಾದ ಡಾರತಿ ವಿಜ್ಜಿಿ, ಜಗದೇವಿ , ರೇಷ್ಮಾಾ ಕಳ್ಳಿಿ, ಪೂಜಾ ಕರೆಪನೋರ, ಆಶಾ ಕಾರ್ಯಕರ್ತೆರಾದ ಕಲ್ಪನಾ ಈರಕಾರ, ಗೌರಮ್ಮಾಾ ಬಗದಲಕರ, ಮುದ್ದು ಮಕ್ಕಳು,ಹಾಗೂ ಮಕ್ಕಳ ಪಾಲಕರು ಉಪಸ್ಥಿಿತರಿದ್ದರು.
ಪೋಲಿಯೊ ಹನಿ ಮಕ್ಕಳಿಗೆ ಸಂಜೀವಿನಿ – ಮಾರುತಿ ಮಾಸ್ಟರ್

