ಸುದ್ದಿಮೂಲ ವಾರ್ತೆ ಸಿಂಧನೂರು, ೆ.08:
ಕಾಲೇಜುಗಳಲ್ಲಿ ಕಳೆದ ಸವಿ ನೆನಪುಗಳನ್ನು ಸಹಪಾಠಿಗಳೊಂದಿಗೆ ಮತ್ತೆೆ ಮೆಲುಕು ಹಾಕಲು ಹಮ್ಮಿಿಕೊಂಡಿರುವ ಅಪೂರ್ವ ಸಂಗಮ ಕಾರ್ಯಕ್ರಮ ಮಧುರ ನೆನಪುಗಳ ಸಮ್ಮಿಿಲನವಾಗಿದೆ ಎಂದು ಬೆಂಗಳೂರಿನ ಎ್ಕೆಸಿಸಿಐನ ನಿರ್ದೇಶಕ ಡಾ.ತ್ರಿಿವಿಕ್ರಮ ಜೋಷಿ ಅಭಿಪ್ರಾಾಯಪಟ್ಟರು.
ನಗರದ ಸತ್ಯಗಾರ್ಡನ್ನಲ್ಲಿ ಸಂಕೇತ ಶಿಕ್ಷಣ ಸಂಸ್ಥೆೆಯ 20 ವರ್ಷ ಪೂರ್ಣಗೊಳಿಸಿದ ಹಿನ್ನಲೆಯಲ್ಲಿ ಶನಿವಾರ ಸಂಜೆ ಹಮ್ಮಿಿಕೊಂಡಿದ್ದ ಸ್ನೇಹ ಸಮ್ಮಿಿಲನದ ಅಪೂರ್ವ ಸಂಗಮ ಕಾರ್ಯಕ್ರಮ ಉದ್ಘಾಾಟಿಸಿ ಅವರು ಮಾತನಾಡಿದರು. ಸಂಕೇತ ಶಿಕ್ಷಣ ಸಂಸ್ಥೆೆಯು ಆರಂಭವಾಗಿ 20 ವರ್ಷಗಳು ಗತಿಸಿವೆ. ಇಲ್ಲಿ ಅಭ್ಯಾಾಸ ಮಾಡಿದ ಅನೇಕ ವಿದ್ಯಾಾರ್ಥಿಗಳು ಸರಕಾರಿ ನೌಕರಿ, ವಿವಿಧ ಕ್ಷೇತ್ರಗಳಲ್ಲಿ ಬದುಕು ಕಟ್ಟಿಿಕೊಂಡಿದ್ದಾಾರೆ. ಕಾಲೇಜು ಪೂರ್ಣಗೊಂಡ ನಂತರ ಎಲ್ಲರೂ ಬೇರೆ ಬೇರೆ ಕಡೆ ಹೋಗಬೇಕಾಗುತ್ತದೆ. ಇಂತಹ ಕಾರ್ಯಕ್ರಮಗಳ ಮೂಲಕ ಮತ್ತೆೆ ನಾವು ಕಲಿತ ಕಾಲೇಜು ದಿನಗಳ ಸವಿ ನೆನಪುಗಳನ್ನು ಮೆಲುಕು ಹಾಕಬಹುದು ಎಂದರು.
ಬೆಂಗಳೂರಿನ ವಿವೇಕಾನಂದ ಇನ್ಸ್ಟಿಟ್ಯೂ ಅ್ ಯೂತ್ ಅವೆಕೆನಿಂಗ್ನ ವ್ಯವಸ್ಥಾಾಪಕ ನಿರ್ದೇಶಕ ರಮೇಶ ಉಮ್ರಾಾಣಿ ವಿಶೇಷ ಉಪನ್ಯಾಾಸ ನೀಡುತ್ತಾಾ, ಕಲ್ಯಾಾಣ ಕರ್ನಾಟಕ ಪ್ರದೇಶ ಶೈಕ್ಷಣಿಕವಾಗಿ ಹಿಂದುಳಿದ ಪ್ರದೇಶವಾಗಿದೆ. ಈ ಭಾಗದಲ್ಲಿ ಸಂಕೇತ ಶಿಕ್ಷಣ ಸಂಸ್ಥೆೆ ಕಟ್ಟಿಿ, ಗುಣಮಟ್ಟದ ಶಿಕ್ಷಣದ ಜೊತೆಗೆ ಸಂಸ್ಕಾಾರ ನೀಡಿದೆ ಎನ್ನುವದಕ್ಕೆೆ ಇಲ್ಲಿ ನೆರೆದ ವಿದ್ಯಾಾರ್ಥಿ ಸಮೂಹವೇ ಸಾಕ್ಷೀಕರಿಸುತ್ತದೆ. ಶಿಕ್ಷಣ ಎಂದರೆ ಸಾಮರ್ಥ್ಯ. ಆಲೋಚನಾ ಶಕ್ತಿಿ ವೃದ್ದಿಸುವದು. ವಿದ್ಯಾಾರ್ಥಿಗಳಲ್ಲಿ ಆತ್ಮಶಕ್ತಿಿ, ಅಂತಃಶಕ್ತಿಿ ಜಾಗೃತಗೊಳಿಸುವದು. ಸ್ವಾಾಮಿ ವಿವೇಕಾನಂದರ ಚಿಂತನೆಗಳು ಇಂದು ಸಮಾಜಕ್ಕೆೆ ಅಗತ್ಯವಾಗಿವೆ. ಸರಿಯಾದ ದಾರಿ ಆಯ್ಕೆೆ ಮಾಡಿ ವಿದ್ಯಾಾರ್ಥಿಗಳು ಮುಂದೆ ಬರುತ್ತಾಾರೆ. ಶ್ರದ್ಧೆೆಯಿಂದ ಓದಬೇಕು. ಸತತ ಪ್ರಯತ್ನದಿಂದ ಎಲ್ಲವನ್ನೂ ಸಾಧಿಸಬಹುದು ಎಂದು ಕಿವಿ ಮಾತು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆೆಯ ಅಧ್ಯಕ್ಷ ಎಸ್.ಬಸವರಾಜ ಮಾತನಾಡಿ, ನಾನು ಬಡತನ ಕುಟುಂಬದಿಂದ ಬಂದಿದ್ದೇನೆ. ಉನ್ನತ ಶಿಕ್ಷಣ ಪಡೆಯಲು ಅಂದು ನನಗೆ ಸಾಧ್ಯವಾಗಲಿಲ್ಲ. ನಮ್ಮ ಭಾಗದ ವಿದ್ಯಾಾರ್ಥಿಗಳು ಉನ್ನತ ಶಿಕ್ಷಣದಿಂದ ವಂಚಿತವಾಗಬಾರದು ಎನ್ನುವ ಉದ್ದೇಶದಿಂದ 20 ವರ್ಷಗಳ ಹಿಂದೆ ಸಂಕೇತ ಶಿಕ್ಷಣ ಸಂಸ್ಥೆೆ ಹುಟ್ಟುಹಾಕಿದೆ. ಅಂದು ವಿದ್ಯಾಾರ್ಥಿಗಳ ಶಿಸ್ತು, ಕಲಿಕೆ ನನಗೆ ಬಹಳಷ್ಟು ಸಂತೋಷ ತಂದು ಕೊಡುತ್ತಿಿತ್ತು. ಆದರೆ ಪ್ರಸ್ತುತ ದಿನಗಳಲ್ಲಿ ಮಕ್ಕಳಲ್ಲಿ ಕಲಿಕಾಸಕ್ತಿಿ ಕಡಿಮೆಯಾಗುತ್ತಿಿದೆ. ಇಂತಹ ಸಂದರ್ಭದಲ್ಲಿ ಹಳೆಯ ವಿದ್ಯಾಾರ್ಥಿಗಳಿಂದ ನಿರೀಕ್ಷಿತ ಸ್ಪಂದನೆ ಸಿಗುವ ನಿರೀಕ್ಷೆಯಿರಲಿಲ್ಲ. ಹೀಗಾಗಿ ಅಪೂರ್ವ ಸಂಗಮ ಕಾರ್ಯಕ್ರಮ ಆಯೋಜನೆಗೆ ಮನಸ್ಸು ಹಿಂಜರಿಯುತ್ತಿಿತ್ತು. ನಮ್ಮ ಸಂಸ್ಥೆೆಯ ಕಾರ್ಯದರ್ಶಿ ಎಸ್.ಅನಿಲರಾಜ ಹಾಗೂ ಉಪನ್ಯಾಾಸಕರು ಅತ್ಯಂತ ಪರಿಶ್ರಮದಿಂದ ಈ ಕಾರ್ಯಕ್ರಮ ಸಂಘಟನೆ ಮಾಡಿದರು. ಹಳೆ ವಿದ್ಯಾಾರ್ಥಿಗಳಿಂದ ಅಭೂತಪೂರ್ವ ಸ್ಪಂದನೆ ಸಿಕ್ಕಿಿದೆ. ನಮ್ಮ ಸಂಸ್ಥೆೆಯಲ್ಲಿ ಅಭ್ಯಾಾಸ ಮಾಡಿದ ಅನೇಕರು ಮೈಸೂರು, ಬೆಂಗಳೂರು, ವಿಜಯಪುರ ಸೇರಿ ನಾನಾ ಕಡೆಗಳಲ್ಲಿ ಉನ್ನತ ಹುದ್ದೆೆಯಲ್ಲಿದ್ದು, ಈ ಕಾರ್ಯಕ್ರಮಕ್ಕೆೆ ಆಗಮಿಸಿ ಸರ್ ನಾನು ಆ ಊರಿನಲ್ಲಿದ್ದೇನೆ, ಈ ಕೆಲಸ ಮಾಡುತ್ತಿಿದ್ದೇನೆ ಎಂದು ಹೇಳಿದಾಗ ನಿಜಕ್ಕೂ ನಾನು ಶಿಕ್ಷಣ ಸಂಸ್ಥೆೆ ಕಟ್ಟಿಿದ್ದಕ್ಕೆೆ ಸಾರ್ಥಕ ಎನಿಸಿತು ಎಂದು ಭಾವುಕರಾದರು.
ಕಾರ್ಯಕ್ರಮದಲ್ಲಿ ಕಳೆದ 20 ವರ್ಷಗಳಿಂದ ಕಾರ್ಯನಿರ್ವಹಿಸಿದ ಉಪನ್ಯಾಾಸಕರಿಗೆ ಸನ್ಮಾಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಆರ್.ಜಿ.ಎಂ.ಶಿಕ್ಷಣ ಸಂಸ್ಥೆೆಯ ಅಧ್ಯಕ್ಷ ಡಾ.ಚನ್ನನಗೌಡ ಆರ್.ಪಾಟೀಲ್, ಸಂಸ್ಥೆೆಯ ಕಾರ್ಯದರ್ಶಿ ಎಸ್.ಅನಿಲರಾಜ ವಕೀಲ, ಪದವಿ ಪೂರ್ವ ಕಾಲೇಜಿನ ಪ್ರಾಾಚಾರ್ಯ ಬಸವರಾಜ ಬೊಮ್ಮನಾಳ, ಪದವಿ ಕಾಲೇಜಿನ ಪ್ರಾಾಚಾರ್ಯ ರವಿಕುಮಾರ ಮಲ್ಲದಗುಡ್ಡ, ಕಾನೂನು ಮಹಾವಿದ್ಯಾಾಲಯದ ಉಪಪ್ರಾಾಚಾರ್ಯ ಕನಕಾಚಲಪತಿರಾವ್ ಸೇರಿದಂತೆ ಇತರರು ಇದ್ದರು. ಬೆಂಗಳೂರಿನ ಸೌಥ್ಸೈಡ್ ನಿರ್ವಾಣ ಕಲಾವಿದರಿಂದ ಸಂಗೀತ ಕಾರ್ಯಕ್ರಮ ನೆರೆದವರ ಗಮನ ಸೆಳೆಯಿತು.
ಸಂಕೇತ ಕಾಲೇಜು : ಅಪೂರ್ವ ಸಂಗಮ ಕಾರ್ಯಕ್ರಮ ಸವಿ ನೆನಪುಗಳ ಮಧುರ ಸಮ್ಮಿಿಲನ – ಡಾ.ತ್ರಿವಿಕ್ರಮ ಜೋಷಿ

