ಸುದ್ದಿಮೂಲ ವಾರ್ತೆ ಸಿರವಾರ, ಜ.13
ಮಕ್ಕಳಿಗೆ ನಮ್ಮ ಹಬ್ಬದ, ಆಚರಣೆ ಮಹತ್ವ, ಸಾಂಸ್ಕೃತಿಕ ಕಲೆಗಳನ್ನು ಚಟುವಟಿಕೆಗಳ ಮೂಲಕ ಕಲಿಸಬೇಕು ಎಂದು ಲಿಟಲ್ ಏಂಜೆಲ್ಸ್ ಹಿರಿಯ ಪ್ರಾಾಥಮಿಕ ಶಾಲೆಯ ಅಧ್ಯಕ್ಷ ಚಂದ್ರಶೇಖರ ರೆಡ್ಡಿಿ ಹೇಳಿದರು.
ಅವರು ಮಂಗಳವಾರ ಪಟ್ಟಣದ ಲಿಟಲ್ ಎಂಜೆಲ್ಸ್ ಶಾಲೆಯ ಮಕ್ಕಳು ಹಮ್ಮಿಿಕೊಂಡಿದ ಮಕ್ಕಳ ಸಂಕ್ರಾಾಂತಿಯ ಹಬ್ಬದ ಸುಗ್ಗಿಿ, ಸಡಗರದಲ್ಲಿ ಭಾಗವಹಿಸಿ ಮಾತನಾಡಿ, ಮಕ್ಕಳಿಗೆ ಪಾಠದ ಜೊತೆಗೆ ನಮ್ಮ ನಾಡಿನ ಹಬ್ಬದ ಹಾಗೂ ರಾಷ್ಟ್ರೀಯ ಹಬ್ಬದ ಆಚರಣೆಯು ಜೊತೆಗೆ ಅವುಗಳ ಮಹತ್ವದ ಮಾಹಿತಿ ನೀಡಿದಾಗ ಮಕ್ಕಳಿಗೆ, ಕಲಿಕೆಯಲ್ಲಿ ಆಸಕ್ತಿಿ ಹೆಚ್ಚಳವಾಗುತ್ತದೆ. ನಮ್ಮ ಕಲೆ, ಸಾಹಿತ್ಯ, ಸಂಸ್ಕಾಾರ, ಸಂಸ್ಕೃತಿಯ ಮುಂದಿನ ಪೀಳಿಗೆಗೆ ಉಳಿಸಿದಂತಾಗುತ್ತದೆ ಎಂದರು. ಶಾಲೆಯ ಶಿಕ್ಷಕರು, ಮಕ್ಕಳು, ಪಾಲಕರು, ಭಾಗವಹಿಸಿದ್ದರು.
ಶಾಲೆಯಲ್ಲಿ ಹಳ್ಳಿಿಯ ಸೊಗಡು ಗುಡಿಸಲು, ರೈತರ ಕೃಷಿ,ಚಟುವಟಿಕೆ ವಸ್ತುಗಳ ಪ್ರದರ್ಶನ, ಭತ್ತದ ರಾಶಿ, ಉಡುಪು ಧರಿಸಿ ಸಂಭ್ರಮ ಕಂಡುಬಂತು.
ಲಿಟಲ್ ಏಂಜೆಲ್ಸ್ ಮಕ್ಕಳಿಂದ ಸಂಕ್ರಾಾಂತಿ ‘ಶಾಲೆಗಳಲ್ಲಿ ಸಾಂಸ್ಕೃತಿಕ ವಾತಾವರಣ ನಿರ್ಮಿಸಿ’

