ಸುದ್ದಿಮೂಲ ವಾರ್ತೆ ಕೊಪ್ಪಳ, ಜ.03:
ಜಿಲ್ಲೆೆಯ ಶಹಪುರ ಗ್ರಾಾಮದ ಸರ್ಕಾರಿ ಮಾದರಿ ಹಿರಿಯ ಪ್ರಾಾಥಮಿಕ ಶಾಲೆಯ ಮಕ್ಕಳು ಶೈಕ್ಷಣಿಕ ಪ್ರವಾಸ ಕೈಗೊಂಡಿದ್ದರ ಹಿನ್ನೆೆಲೆಯಲ್ಲಿ ಬೆಂಗಳೂರಿನ ನಾಡದೊರೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಾಣಕ್ಕೆೆ ಆಗಮಿಸಿದ್ದರು. ಈ ವೇಳೆ ರಾಜ್ಯ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು ಮಕ್ಕಳೊಂದಿಗೆ ಬೆರೆತು ಮಗುವಾಗಿ ಮುದ ನೀಡಿದ ಪ್ರಸಂಗ ನಡೆದಿದೆ.
ಸಂತೋಷ್ ಲಾಡ್ ಅವರು ತಮ್ಮ ಕರ್ತವ್ಯಕ್ಕಾಾಗಿ ಬೆಂಗಳೂರಿನ ವಿಮಾನ ನಿಲ್ದಾಾಣದ ಮೂಲಕ ಶಿವಮೊಗ್ಗಕ್ಕೆೆ ತೆರಳುತ್ತಿಿದ್ದರು. ವಿಮಾನ ನಿಲ್ದಾಾಣದಲ್ಲಿ ಯಾವೂರು ನಿಮ್ಮದು? ಏನು ಓದುತ್ತಿಿದ್ದೀರಿ? ಎಂದು ಮಕ್ಕಳೊಂದಿಗೆ ಕುಶಲೋಪರಿ ವಿಚಾರಿಸುತ್ತ ನೆಲದಲ್ಲಿಯೇ ಕುಳಿತುಕೊಂಡರು. ಚೆನ್ನಾಾಗಿ ಓದಬೇಕು, ಆರೋಗ್ಯ ಕಾಪಾಡಿಕೊಳ್ಳಬೇಕು. ನೀವು ಎಷ್ಟೆೆಷ್ಟು ಮಾರ್ಕ್ಸ್ ತೆಗೆದುಕೊಳ್ತೀರಿ? ಅಂತ ನಿಮ್ಮ ಶಾಲೆಗೆ ಬಂದು ನಾನು ಚೆಕ್ ಮಾಡ್ತೀನಿ ಅಂತ ಹೇಳಿದರು. ಬಳಿಕ ಮಕ್ಕಳೊಂದಿಗೆ ೆಟೋ ತೆಗೆಸಿಕೊಂಡು ಬೆಂಗಳೂರಿನಿಂದ ಶಿವಮೊಗ್ಗಕ್ಕೆೆ ಪ್ರಯಾಣ ಬೆಳೆಸಿದರು.
ಅಂದಹಾಗೆ, ಶಹಪುರ ಗ್ರಾಾಮದ ಸರ್ಕಾರಿ ಮಾದರಿ ಹಿರಿಯ ಪ್ರಾಾಥಮಿಕ ಶಾಲೆಯ ಮುಖ್ಯೋೋಪಾಧ್ಯಾಾಯರಾದ ದೇವರಾಜ್, ಸಹ ಶಿಕ್ಷಕರಾದ ಶರಣಪ್ಪ, ಶಾಲಾ ಸುಧಾರಣಾ ಸಮಿತಿ ಅಧ್ಯಕ್ಷ ಹುಲ್ಲೇಶ್ ಸಿಂದೋಗಿ ನೇತೃತ್ವದಲ್ಲಿ 40ಕ್ಕೂ ಹೆಚ್ಚು ಮಕ್ಕಳು ಗ್ರಾಾಮದಿಂದ ಕಿರ್ಲೋಸ್ಕರ್ ಗೆ ತೆರಳಿ ಅಲ್ಲಿಂದ ಬೂದುಗುಂಪಾ ದನಕನದೊಡ್ಡಿಿ ರೇಲ್ವೆೆ ಸ್ಟೇಷನ್ ಮೂಲಕ ಯಶವಂತಪುರ ಎಕ್ಸ್ಪೆ್ರೆಸ್ ರೈಲು ಮೂಲಕ ಪ್ರಯಾಣ ಬೆಳೆಸಿದರು. ತುಮಕೂರಿನಲ್ಲಿ ಸಿದ್ಧಗಂಗಾ ಮಠ ದರ್ಶನ ಮಾಡಿ ಬಳಿಕ ಬಸ್ ಮೂಲಕ ಬೆಂಗಳೂರಿನ ಡಾ.ರಾಜ್, ಪಾರ್ವತಮ್ಮ ರಾಜಕುಮಾರ್, ಅಪ್ಪುು, ಅಂಬರೀಷ್ ಅವರ ಸಮಾಧಿ ವೀಕ್ಷಣೆ ಮಾಡಿದರು. ಬಳಿಕ ಇಸ್ಕಾಾನ್ ಟೆಂಪಲ್, ನೆಹರು ತಾರಾಲಯ, ವಿಧಾನಸೌಧ ವೀಕ್ಷಣೆ ಮಾಡಿದರು.
ಒಟ್ಟು ಐದು ದಿನದ ಶೈಕ್ಷಣಿಕ ಪ್ರವಾಸದಲ್ಲಿ ಬಸ್ ಮೂಲಕ ಸುತ್ತೂರ ಮಠ, ನಂಜನಗೂಡು ಶ್ರೀ ನಂಜುಂಡೇಶ್ವರ ದೇವಸ್ಥಾಾನ ದರ್ಶನದ ಬಳಿಕ ್ಯಾಂಟಸಿ ವಾಟರ್ ಪಾರ್ಕ್ ನಲ್ಲಿ ಮಕ್ಕಳು ಪುಲ್ ಎಂಜಾಯ್ ಮಾಡಿದರು. ಬಳಿಕ ಶ್ರೀ ಚಾಮುಂಡೇಶ್ವರಿ ಅಮ್ಮನವರ ದರ್ಶನ ಪಡೆದು, ಚಾಮರಾಜೇಂದ್ರ ಮೃಗಾಲಯ, ಮೈಸೂರು ಅರಮನೆ, ಪ್ಯಾಾಲೇಸ್ ದೀಪಗಳ ವೀಕ್ಷಣೆ ಮಾಡಿದರು.
ಮಕ್ಕಳ ಶೈಕ್ಷಣಿಕ ಪ್ರವಾಸಕ್ಕೆೆ ಕೊಪ್ಪಳ ಜಿಲ್ಲೆೆಯ ಜನಪ್ರತಿನಿಧಿಗಳು, ಸ್ಥಳೀಯ ಜನಪ್ರತಿನಿಧಿಗಳು, ಗ್ರಾಾಮಸ್ಥರು, ಪೋಷಕರು, ಕಿರ್ಲೋಸ್ಕರ್ ಸಂಸ್ಥೆೆಯ ವ್ಯವಸ್ಥಾಾಪಕರು ಹೆಚ್ಚಿಿನ ಸಹಕಾರ ನೀಡಿದ್ದು ಐದು ದಿನದ ಪ್ರವಾಸದಲ್ಲಿ ಮಕ್ಕಳು ಸಂಭ್ರಮಿಸಿದರು ಎಂದು ಶಾಲಾ ಮುಖ್ಯೋೋಪಾಧ್ಯಾಾಯರು ತಿಳಿಸಿದ್ದಾಾರೆ.
ಮಕ್ಕಳೊಂದಿಗೆ ಮಗುವಾದ ಸಂತೋಷ್ ಲಾಡ್

