ಸುದ್ದಿಮೂಲ ವಾರ್ತೆ ರಾಯಚೂರು, ಡಿ.14
ಶಿಕ್ಷಣ ವ್ಯವಸ್ಥೆೆಯ ಲೋಪಗಳನ್ನು ಹೇಳದೆ ಅವುಗಳನ್ನು ಸವಾಲಾಗಿ ಸ್ವೀಕರಿಸಿ ಸಾಧನೆ ಮಾಡಲು ಮನಸು ಮಾಡಬೇಕು ಎಂದು ಮಹಾನಗರ ಪಾಲಿಕೆಯ ಉಪ ಆಯುಕ್ತರಾದ ಸಂತೋಷಿರಾಣಿ ಹೇಳಿದರು.
ನಗರದ ಪಂ.ಸಿದ್ಧರಾಮ ಜಂಬಲದಿನ್ನಿಿ ರಂಗಮಂದಿರದಲ್ಲಿ ಭಾನುವಾರ ಜ್ಞಾನ ದರ್ಶಿನಿ ಶಿಕ್ಷಣ ಸಂಸ್ಥೆೆ ಹಾಗೂ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರದಿಂದ 150ನೇ ಉಚಿತ ಸ್ಪರ್ಧಾತ್ಮಕ ಮಾದರಿ ಪರೀಕ್ಷೆಯ ಹಾಗೂ ರಾಜ್ಯದ ವಿವಿಧ ಇಲಾಖೆ ಹುದ್ದೆೆಗಳಿಗೆ ಆಯ್ಕೆೆಯಾದ ಆಕಾಂಕ್ಷಿಗಳಿಗೆ ಸನ್ಮಾಾನ ಕಾರ್ಯಕ್ರಮದ ಅಂಗವಾಗಿ ರಾಜ್ಯ ಮಟ್ಟದ ರಸಪ್ರಶ್ನೆೆ ಸ್ಪರ್ಧೆ ಕಾರ್ಯಕ್ರಮ ಉದ್ಘಾಾಟಿಸಿ ಮಾತನಾಡಿದರು.
ಭಾನುವಾರದಂದು ಮೋಜು ಮಸ್ತಿಿಗೆ ಮುಂದಾಗುವ ಇಂದಿನ ಯುವ ಪೀಳಿಗೆಯ ನಡುವೆ ಸಾಧಿಸಲು ಪ್ರಯತ್ನಿಿಸುತ್ತಿಿರುವ ವಿದ್ಯಾಾರ್ಥಿಗಳನ್ನು ಗುರುತಿಸಿ,ಸನ್ಮಾಾನಿಸಿ ಪ್ರೋೋತ್ಸಾಾಹಿಸುವ ಜೊತೆಗೆ ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತು ಜ್ಞಾನ ನೀಡುವ ಇಂತಹ ಕಾರ್ಯಕ್ರಮ ಆಯೋಜಿಸಿರುವುದಕ್ಕೆೆ ಮೆಚ್ಚುಗೆ ವ್ಯಕ್ತಪಡಿಸಿದರು.
ಪ್ರಸ್ತುತ ಶಿಕ್ಷಣ ತಳಪಾಯ ಇಲ್ಲದ ವ್ಯವಸ್ಥೆೆಯಂತಾಗಿದ್ದು ಮಕ್ಕಳು ದಿಕ್ಕು ತಪ್ಪುುತ್ತಿಿದ್ದಾಾರೆ. ಇದೇ ಶಿಕ್ಷಣ ವ್ಯವಸ್ಥೆೆಯಲ್ಲಿ ಇದ್ದುಕೊಂಡೇ ಪಾರಾಗಬೇಕು. ಅನಾನುಕೂಲಗಳನ್ನು ಸಾಧನೆಗೆ ಮೆಟ್ಟಿಿಲುಗಳಾಗಿ ಸ್ವೀಕರಿಸಿ ಮಾನವೀಯ ವೌಲ್ಯಗಳ ಜೊತೆಗೆ ಜವಾಬ್ದಾಾರಿಯುತರಾಗಿ ಬೆಳೆದು ನಿಲ್ಲಬೇಕು ಎಂದರು.
ರಾಜ್ಯಮಟ್ಟದ ರಸಪ್ರಶ್ನೆೆ ಸ್ಪರ್ಧೆಯಲ್ಲಿ ಬಾಗಲಕೋಟೆಯ ಸಿದ್ದುಕುರಹಟ್ಟಿಿಘಿ, ಸುಧಾಕರ ಹಿಮಕರ್ ಪ್ರಥಮ ಬಹುಮಾನ ಪಡೆದರು ಅವರಿಬ್ಬರನ್ನೂ ಸನ್ಮಾಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಸರ್ಕಾರಿ ನೌಕರ ಸಂಘದ ಪ್ರಧಾನ ಕಾರ್ಯದರ್ಶಿ ಭೀಮೇಶ ನಾಯಕ, ಕಸಾಪ ಸಹ ಕಾರ್ಯದರ್ಶಿ ದಂಡಪ್ಪ ಬಿರಾದಾರ, ಪ್ರಾಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕಾಧ್ಯಕ್ಷ ಮಲ್ಲೇಶ ನಾಯಕ, ಮಹೇಂದ್ರ ನಾಯಕ, ಸಂಸ್ಥೆೆಯ ಸಂಜೀವ್ ಕುಲಕರ್ಣಿ, ಕೃಷ್ಣಾಾ, ನರೇಶ ಸೇರಿದಂತೆ ಅನೇಕರಿದ್ದರು.
ರಾಜ್ಯಮಟ್ಟದ ರಸಪ್ರಶ್ನೆ ಸ್ಪರ್ಧೆ ಲೋಪ ಹೇಳದೆ ಸಾಧನೆ ಮಾಡಿ – ಸಂತೋಷಿರಾಣಿ

