ಸುದ್ದಿಮೂಲ ವಾರ್ತೆ ತುರ್ವಿಹಾಳ, ಡಿ.22:
ಭವಿಷ್ಯದ ಹಿತದೃಷ್ಠಿಿಯಿಂದ ಪರಿಸರ ಸಂರಕ್ಷಣೆ ಮಾಡುವುದು ಪ್ರತಿಯೊಬ್ಬರ ಜವಾಬ್ದಾಾರಿ ಹಾಗೂ ಕರ್ತವ್ಯವಾಗಿದೆ ಎಂದು ಮಸ್ಕಿಿ ನಗರಾಭಿವೃದ್ಧಿಿ ಪ್ರಾಾಧಿಕಾರದ ಅಧ್ಯಕ್ಷ ಆರ್.ಸಿದ್ದನಗೌಡ ತುರ್ವಿಹಾಳ ಅಭಿಪ್ರಾಾಯಪಟ್ಟರು.
ಪಟ್ಟಣದ ಪುರವರ ಹಿರೇಮಠದಲ್ಲಿ ಸೋಮವಾರ ವೃಕ್ಷಮಾತೆ ಸಾಲುಮರದ ತಿಮ್ಮಕ್ಕನವರ ನೆನಪಿಗಾಗಿ 114 ಸಸಿ ನೆಡುವ ಕಾರ್ಯಕ್ರಮ ಉದ್ಘಾಾಟಿಸಿ ಮಾತನಾಡಿದರು. ಪ್ರತಿಯೊಬ್ಬರು ಸಸಿಗಳನ್ನು ನೆಟ್ಟು ಗಿಡ-ಮರಗಳ ಪಾಲನೆ, ಪೋಷಣೆ ಮಾಡಿ ಬೆಳೆಸುವ ಅವಶ್ಯಕತೆ ಇದೆ. ಗಿಡಮರಗಳಿದ್ದರೆ ಮಾತ್ರ ಉತ್ತಮ ವಾತವರಣ ಹಾಗೂ ಉತ್ತಮ ಆರೋಗ್ಯ ನಿರ್ಮಾಣವಾಗಲು ಸಾಧ್ಯ. ಶ್ರೀಮಠದ ಆಯೋಜಿಸಿರುವ ಕಾರ್ಯ ಶ್ಲಾಾಘನೀಯ ಎಂದರು.
ತುರ್ವಿಹಾಳ ಪಟ್ಟಣ ಪಂಚಾಯಿತಿ ಅಧ್ಯಕ್ಷ ಬಾಪುಗೌಡ ದೇವರಮನಿ ಮಾತನಾಡಿ, ಪರಿಸರ ಮನುಷ್ಯನಿಗೆ ಎಲ್ಲವೂ ನೀಡಿದೆ. ಆದರೆ ಮನುಷ್ಯ ಸ್ವಾಾರ್ಥಿಯಾಗಿ ಪರಿಸರ ನಾಶಕ್ಕಿಿಳಿದಿದ್ದಾಾನೆ. ಇದೇ ವಾತವರಣ ಮುಂದುವರೆದರೆ ಭವಿಷ್ಯದಲ್ಲಿ ಕೃತಕ ಆಕ್ಸಿಿಜನ್ ಪಡೆಯುವ ಸ್ಥಿಿತಿ ಬರಲಿದೆ. ಮನುಷ್ಯ ಬದಲಾಗಿ ಪರಿಸರ ರಕ್ಷಣೆಗೆ ಕಂಕಣಬದ್ಧನಾಗಬೇಕು ಎಂದು ಮಾರ್ಮಿಕವಾಗಿ ಹೇಳಿದರು.
ವನಸಿರಿ ೌಂಡೇಷನ್ ಅಧ್ಯಕ್ಷ ಅಮರೇಗೌಡ ಮಲ್ಲಾಾಪುರ ಮಾತನಾಡಿ, ಉತ್ತಮ ಆಮ್ಲಜನಕ ದೊರೆಯಲು ಗಿಡ-ಮರಗಳು ಸಹಕಾರಿಯಾಗಿವೆ. ಪರಿಸರ ಸೌಂದರ್ಯ ಹೆಚ್ಚಿಿಸಲು ಪ್ರತಿಯೊಬ್ಬರು ಪಣತೊಡಬೇಕಿದೆ. ವಿದ್ಯಾಾರ್ಥಿ, ಯುವಜನರಲ್ಲಿ ಪರಿಸರ ಕಾಳಜಿ ಹೆಚ್ಚಿಿದಾಗ ಮಾತ್ರ ಸಮೃದ್ಧವಾದ ಬದುಕು ರೂಪುಗೊಳ್ಳುತ್ತದೆ ಎಂದರು.
ತುರ್ವಿಹಾಳ ಪುರವರ ಮಠದ ಅಮರಗುಂಡಯ್ಯ ಶಿವಾಚಾರ್ಯ ಸ್ವಾಾಮೀಜಿ, ಅಮೋಘ ಸಿದ್ದೇಶ್ವರ ಮಠದ ಮಾದಯ್ಯ ಗುರುವಿನ್, ಸರ್ವೇಶ್ವರಮಠದ ಗುರುಗುಂಡಯ್ಯ ಸ್ವಾಾಮೀಜಿ ಕಾರ್ಯಕ್ರಮದ ಸಾನಿಧ್ಯವಹಿಸಿದ್ದರು. ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಾಚಾರ್ಯ ಮಲ್ಲಪ್ಪ, ಬಸವಚೇತನ ಕಾಲೇಜಿನ ಪ್ರಾಾಚಾರ್ಯ ವಿರುಪಾಕ್ಷಪ್ಪ ಗಚ್ಚಿಿನಮನಿ, ತುರ್ವಿಹಾಳ ಪೋಲಿಸ್ ಠಾಣೆಯ ಪಿಎಸ್ಐ ಸುಜಾತಾ ಡಿ.ಎನ್., ಮುಖಂಡರಾದ ಮಲ್ಲನಗೌಡ ದೇವರಮನಿ, ಮೌಲಪ್ಪಯ್ಯ ಗುತ್ತೇದಾರ, ಮಂಟೆಪ್ಪ ಎಲೆಕೂಡ್ಲಿಿಗಿ, ಸೋಮನಾಥ ಮಾಟೂರ, ರುದ್ರಸ್ವಾಾಮಿ ಸ್ವಾಾಮಿ ಹಿರೇಮಠ, ದೋಡ್ಡಪ್ಪ ನವುಲಹಳ್ಳಿಿ, ಶರಣಪ್ಪ ಹೋಸಗೌಡರ್, ಸಿದ್ದೇಶ್ವರ ಗುರಿಕಾರ, ಯಲ್ಲಪ್ಪ ಭೋವಿ, ಶಾಮೀದ ಅಲಿ ಆರಬ್, ಮಹಾಂತೇಶ ಸಜ್ಜನ, ಹೊನ್ನೂರಪ್ಪ ಕುಂಬಾರ, ನಿಂಗಪ್ಪ ಸಜ್ಜನ, ಲಿಂಗರಾಜ ಎಲೆಕೂಡ್ಲಿಿಗಿ, ಯುನೂಸ್ ಖಾಜಿ, ಶರಣಬಸವ ಗಡ್ಡೇಳ್, ಶಂಕರಗೌಡ ದೇವರಮನಿ, ನಿರುಪಾದಿ ಉಪ್ಪಲದೊಡ್ಡಿಿ, ಹನುಮೇಶ ಉಪ್ಪಲದೊಡ್ಡಿಿ, ಅಯ್ಯಣ್ಣ ರಾರಾವಿ, ಶಿವಮಣಿ, ಅಮೀರ್ ನಂದಿಹಾಳ್ ಸೇರಿದಂತೆ ಇತರರು ಇದ್ದರು.
ತುರ್ವಿಹಾಳ ಪುರವರಮಠದಲ್ಲಿ ಸಸಿ ನೆಡುವ ಕಾರ್ಯಕ್ರಮ ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಕರ್ತವ್ಯ : ಸಿದ್ದನಗೌಡ

